Author: Kodagu-admin

*ರಜೆ* ಮಳೆ ತೀವ್ರಗೊಂಡ ಹಿನ್ನೆಲೆಯಲ್ಲಿ ದಿನಾಂಕ 25/6/25 ರಂದು ಮಡಿಕೇರಿ ತಾಲ್ಲೂಕು ವ್ಯಾಪ್ತಿಯ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿದೆ. -BEO, ಮಡಿಕೇರಿ. .. ಭಾರೀ ಮಳೆ ಮುಂದುವರಿದಿರುವ ಹಿನ್ನೆಲೆ *ಇಂದು ಅಂಗನವಾಡಿ,ಶಾಲೆ – ಕಾಲೇಜು ಗಳಿಗೆ ರಜೆ ಘೋಷಣೆ* ಮಡಿಕೇರಿ, ಪೊನ್ನಂಪೇಟೆ,, ಕುಶಾಲನಗರ,ಸೋಮವಾರ ಪೇಟೆ, ತಾಲ್ಲೂಕುದಾಂದ್ಯತ *ಇಂದು ಅಂಗನವಾಡಿ ಶಾಲೆ – ಕಾಲೇಜು ರಜೆ ಘೋಷಣೆ* ಶಿಕ್ಷಣಾಧಿಕಾರಿ ರಜೆ ಘೋಷಣೆ.

Read More

ಮಾಡಿಕೇರಿ: ಕೊಡಗಿನಲ್ಲಿ ಭಾರಿ ಮಳೆ ಯಾಗುತ್ತಿರುವ ಹಿನ್ನಲೆ ಅಂಗನವಾಡಿ ಸೇರಿದಂತೆ ಎಲ್ಲ ಶಾಲಾ  ಕಾಲೇಜುಗಳಿಗೆ ಈ ದಿನ ಅಂದರೆ 25/6/2025 ರಂದು ಒಂದು ದಿನದ ರಜೆಯನ್ನು ಜಿಲ್ಲಾಧಿಕಾರಿ ವೆಂಕಟ ರಾಜ ಘೋಷಿಸಿದ್ದಾರೆ.

Read More

ಮಡಿಕೇರಿ : ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾದ ರೆಡ್‍ಕ್ರಾಸ್‍ನ ಕೊಡಗು ಘಟಕದ ವಾರ್ಷಿಕ ಮಹಾಸಭೆಯು ಜೂನ್, 26 ರಂದು ನಡೆಯಲಿದೆ ಎಂದು ಸಭಾಪತಿ ಬಿ.ಕೆ.ರವೀಂದ್ರ ರೈ ಅವರು ಮಾಹಿತಿ ನೀಡಿದ್ದಾರೆ. ಮಡಿಕೇರಿಯ ಸ್ಟೀವರ್ಟ್ ಹಿಲ್‍ನಲ್ಲಿರುವ ರೆಡ್‍ಕ್ರಾಸ್ ಭವನದಲ್ಲಿ ಜೂನ್, 26 ರಂದು ಬೆಳಗ್ಗೆ 11 ಗಂಟೆಗೆ ರೆಡ್‍ಕ್ರಾಸ್ ಕೊಡಗು ಘಟಕದ ಸಭಾಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆ ನಡೆಯಲಿದೆ. ಮಹಾಸಭೆಯಲ್ಲಿ ಸರ್ವ ಸದಸ್ಯರು ಪಾಲ್ಗೊಳ್ಳುವಂತೆ ರವೀಂದ್ರ ರೈ ಅವರು ಕೋರಿದ್ದಾರೆ.

Read More

ಮಡಿಕೇರಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್‍ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‍ಸೆಟ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಮಹಿಳೆಯರಿಗೆ ಟೈಲರಿಂಗ್ ಕುರಿತ 31 ದಿನಗಳ ಉಚಿತ ತರಬೇತಿಯು ಜುಲೈ 26 ರಿಂದ ಪ್ರಾರಂಭವಾಗಲಿದ್ದು, ಗ್ರಾಮೀಣ ಆಸಕ್ತ ನಿರುದ್ಯೋಗಿ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾμÉ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಬಿಪಿಎಲ್ ಕಾರ್ಡ್ ಅಥವಾ ಜಾಬ್ ಕಾರ್ಡ್ ಹಾಗೂ ಆಧಾರ್ ಕಾರ್ಡ್‍ನ್ನು ಕಡ್ಡಾಯವಾಗಿ ಹೊಂದಿರುವ ಗ್ರಾಮೀಣ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ತರಬೇತಿಯು ಕಡ್ಡಾಯವಾಗಿ ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರ ವಿತರಿಸಲಾಗುತ್ತದೆ. ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗೆ ರುಡ್‍ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊ.ಸಂ. 9740982585, 9241482541, 9113880324 ಅನ್ನು ಸಂಪರ್ಕಿಸಬಹುದು ಎಂದು…

Read More

ಮಡಿಕೇರಿ : ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಇವರ ಸಂಯುಕ್ತ ಆಶ್ರಯದಲ್ಲಿ ಇಂಗಾ ಹೆಲ್ತ್ ಪೌಂಡೇಶನ್, ಬೆಂಗಳೂರು ಇವರ ವತಿಯಿಂದ ಜೂನ್, 28 ರಂದು ಬೆಳಗ್ಗೆ 10.30 ಗಂಟೆಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೀಳು ತುಟಿ, ಸೀಳು ಅಂಗುಳ, ಮ್ಯಾಕ್ಸಿಲೊಫೇಶಿಯಲ್ ಮತ್ತು ಕ್ರೇನಿಯೋಫೇಶಿಯಲ್ ವಿರೂಪ ಗಳ ತಪಾಸಣಾ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ 18 ವರ್ಷದ ಒಳಗಿನ ಸೀಳು ತುಟಿ, ಸೀಳು ಅಂಗುಳ, ಮ್ಯಾಕ್ಸಿಲೊಫೇಶಿಯಲ್ ಮತ್ತು ಕ್ರೇನಿಯೊಫೇಶಿಯಲ್ ವಿರೂಪ ಇರುವ ಮಕ್ಕಳನ್ನು ಪರೀಕ್ಷಿಸಿ ಅವಶ್ಯಕತೆ ಇದ್ದಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು ತಿಳಿಸಿದ್ದಾರೆ.

Read More

ಮಡಿಕೇರಿ : ಅನುಸೂಚಿತ ಮತ್ತು ಅನುಸೂಚಿತ ಪಂಗಡಗಳ(ದೌರ್ಜನ್ಯ ನಿಯಂತ್ರಣ) ನಿಯಮ ರೀತಿಯ ರಚಿಸಲಾಗಿರುವ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಎಚ್.ಎಸ್.ಮುತ್ತಪ್ಪ ಅವರು ಹೊದ್ದೂರು, ಹೊದವಾಡ ಸೇರಿದಂತೆ ಕಾವೇರಿ ನದಿ ಪಾತ್ರದ ಪ್ರವಾಹ ಪೀಡಿತ ಪ್ರದೇಶದಲ್ಲಿ ಪರಿಶಿಷ್ಟರು ವಾಸ ಮಾಡುತ್ತಿದ್ದು, ಇವರಿಗೆ ಶಾಶ್ವತ ನೆಲೆ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದರು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಕುಟುಂಬಗಳಿಗೆ ನಿವೇಶನ ಕಲ್ಪಿಸುವುದರ ಜೊತೆಗೆ ಮನೆ ನಿರ್ಮಿಸಿಕೊಡುವಂತಾಗಬೇಕು ಎಂದು ಮುತ್ತಪ್ಪ ಅವರು ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಹೊದ್ದೂರು-ಹೊದವಾಡ ಸೇರಿದಂತೆ ಪ್ರವಾಹ ಪೀಡಿತ ಪ್ರದೇಶದಲ್ಲಿನ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲು ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್ ಅವರು ಮಾಹಿತಿ ನೀಡಿದರು. ಈ…

Read More

ಮಡಿಕೇರಿ  : ಗ್ರಾ.ಪಂ ನೌಕರರಿಗೆ ಕನಿಷ್ಠ ವೇತನ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾ.ಪಂ ನೌಕರರ ಸಂಘದ ಕೊಡಗು ಜಿಲ್ಲಾ ಘಟಕದ ವತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಿಐಟಿಯು ಸಂಯೋಜಿತ ಸಂಘದ ಸದಸ್ಯರು ಸರ್ಕಾರದ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು. ಸಂಘದ ಜಿಲ್ಲಾಧ್ಯಕ್ಷ ಪಿ.ಆ‌ರ್.ಭರತ್ ಮಾತನಾಡಿ ಗ್ರಾ.ಪಂ ನೌಕರರಿಗೆ ನಿಗಧಿಯಾಗಿರುವ ಕನಿಷ್ಠ ವೇತನದ ನಿಯಮವನ್ನು ಸರ್ಕಾರ ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದರು. ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಿರಂತರವಾಗಿ ಪ್ರತಿಭಟನೆಗಳನ್ನು ನಡೆಸುತ್ತಿದ್ದರೂ ಸರ್ಕಾರ ಯಾವುದೇ ಸ್ಪಂದನೆ ನೀಡುತ್ತಿಲ್ಲವೆಂದು ಆರೋಪಿಸಿದರು. ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು. ಸಂಘದ ಪದಾಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ಗ್ರಾ.ಪಂ ಗಳ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನೌಕರರ ಸಹಿ ಸಂಗ್ರಹಿಸಿದ ಮನವಿ ಪತ್ರವನ್ನು ಕಾರ್ಮಿಕ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.

Read More

ಅರ್ಜಿ ಆಹ್ವಾನ* ಮಡಿಕೇರಿ ಜೂ.23(ಕರ್ನಾಟಕ ವಾರ್ತೆ):-ಕೇಂದ್ರ ಸರ್ಕಾರದಿಂದ ‘ಮಿಷನ್ ಶಕ್ತಿ’ ಯೋಜನೆಯಡಿ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಕೊಡಗು ಜಿಲ್ಲೆ ಇವರ ಮುಖಾಂತರ ಅನುಷ್ಠಾನಗೊಳಿಸಲಾಗುತ್ತಿರುವ “ಜಿಲ್ಲಾ ಮಹಿಳಾ ಸಬಲೀಕರಣ ಘಟಕ” ಹಾಗೂ “ಸಖಿ ಒನ್ ಸ್ಟಾಫ್ ಸೆಂಟರ್” ನಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಖಾಲಿ ಇರುವ ಹುದ್ದೆಗಳಿಗೆ ವಿದ್ಯಾರ್ಹತೆ ನಿಗದಿಪಡಿಸಿ ಅರ್ಹ ಅಭ್ಯರ್ಥಿಗಳಿಂದ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ಅರ್ಜಿ ಆಹ್ವಾನಿಸಲಾಗಿದೆ. ಡಿಇಒ ಮತ್ತು ಪ್ರೋಗ್ರಾಮ್ ಅಸಿಸ್ಟೆಂಟ್ ಫಾರ್ ಪಿಎಂಎಂವಿವೈ (1 ಹುದ್ದೆ), ಐಟಿ/ಕಂಪ್ಯೂಟರ್ ಜ್ಞಾನ ಹೊಂದಿರಬೇಕು. 3 ವರ್ಷದ ಡಾಟಾ ಮ್ಯಾನೇಜ್‍ಮೆಂಟ್, ಟೈಪಿಂಗ್ ತಿಳಿದಿರಬೇಕು. ಸ್ವೀಪರ್/ಗಾರ್ಡ್ ಫಾರ್ ಸಖಿ ಒನ್ ಸ್ಟಾಪ್ ಸೆಂಟರ್(1 ಹುದ್ದೆ) ಮಡಿಕೇರಿ 24/7(ಹಗಲು ಮತ್ತು ರಾತ್ರಿ ಸಿಪ್ಟ್), ಎಸ್‍ಎಸ್‍ಎಲ್‍ಸಿ ವಿದ್ಯಾರ್ಹತೆ ಹೊಂದಿರಬೇಕು. 2 ವರ್ಷದ ಅನುಭವ ಹೊಂದಿರಬೇಕು. ಪಾರಾಲೀಗಲ್ ಪರ್ಸನಲ್/ಲಾಯರ್(1 ಹುದ್ದೆ) ಕಾನೂನು ಪದವಿ ಪಡೆದಿರಬೇಕು(2-3 ವರ್ಷದ ಅನುಭವ). ಅರ್ಜಿ ಸಲ್ಲಿಸಲು ಜುಲೈ, 07 ಕೊನೆಯ ದಿನವಾಗಿದೆ. ಸಂದರ್ಶನದ ದಿನಾಂಕ ನಂತರ ತಿಳಿಸಲಾಗುವುದು.…

Read More

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಆದ್ರಾ ಮಳೆ ಉತ್ತಮವಾಗಿ ಸುರಿಯುತ್ತಿದೆ. ವಿವಿಧೆಡೆ ಗಾಳಿ ಸಹಿತ ಮಳೆಯಾಗುತ್ತಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ಕಳೆದ 24 ಗಂಟೆಗಳಲ್ಲಿ 5 ಇಂಚು ಮತ್ತು ಮಡಿಕೇರಿ ತಾಲ್ಲೂಕಿನಲ್ಲಿ 4 ಇಂಚು ಮಳೆಯಾಗಿದೆ.

Read More

ಮಡಿಕೇರಿ : ಕೇಂದ್ರ ಸರ್ಕಾರದಿಂದ ‘ಮಿಷನ್ ಶಕ್ತಿ’ ಯೋಜನೆಯಡಿ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಕೊಡಗು ಜಿಲ್ಲೆ ಇವರ ಮುಖಾಂತರ ಅನುಷ್ಠಾನಗೊಳಿಸಲಾಗುತ್ತಿರುವ “ಜಿಲ್ಲಾ ಮಹಿಳಾ ಸಬಲೀಕರಣ ಘಟಕ” ಹಾಗೂ “ಸಖಿ ಒನ್ ಸ್ಟಾಫ್ ಸೆಂಟರ್” ನಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಖಾಲಿ ಇರುವ ಹುದ್ದೆಗಳಿಗೆ ವಿದ್ಯಾರ್ಹತೆ ನಿಗದಿಪಡಿಸಿ ಅರ್ಹ ಅಭ್ಯರ್ಥಿಗಳಿಂದ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ಅರ್ಜಿ ಆಹ್ವಾನಿಸಲಾಗಿದೆ. ಡಿಇಒ ಮತ್ತು ಪ್ರೋಗ್ರಾಮ್ ಅಸಿಸ್ಟೆಂಟ್ ಫಾರ್ ಪಿಎಂಎಂವಿವೈ (1 ಹುದ್ದೆ), ಐಟಿ/ಕಂಪ್ಯೂಟರ್ ಜ್ಞಾನ ಹೊಂದಿರಬೇಕು. 3 ವರ್ಷದ ಡಾಟಾ ಮ್ಯಾನೇಜ್‍ಮೆಂಟ್, ಟೈಪಿಂಗ್ ತಿಳಿದಿರಬೇಕು. ಸ್ವೀಪರ್/ಗಾರ್ಡ್ ಫಾರ್ ಸಖಿ ಒನ್ ಸ್ಟಾಪ್ ಸೆಂಟರ್(1 ಹುದ್ದೆ) ಮಡಿಕೇರಿ 24/7(ಹಗಲು ಮತ್ತು ರಾತ್ರಿ ಸಿಪ್ಟ್), ಎಸ್‍ಎಸ್‍ಎಲ್‍ಸಿ ವಿದ್ಯಾರ್ಹತೆ ಹೊಂದಿರಬೇಕು. 2 ವರ್ಷದ ಅನುಭವ ಹೊಂದಿರಬೇಕು. ಪಾರಾಲೀಗಲ್ ಪರ್ಸನಲ್/ಲಾಯರ್(1 ಹುದ್ದೆ) ಕಾನೂನು ಪದವಿ ಪಡೆದಿರಬೇಕು(2-3 ವರ್ಷದ ಅನುಭವ). ಅರ್ಜಿ ಸಲ್ಲಿಸಲು ಜುಲೈ, 07 ಕೊನೆಯ ದಿನವಾಗಿದೆ. ಸಂದರ್ಶನದ ದಿನಾಂಕ ನಂತರ ತಿಳಿಸಲಾಗುವುದು. ಪ್ರತ್ಯೇಕ ಹುದ್ದೆಗೆ ಪ್ರತ್ಯೇಕ…

Read More