- ರಸ್ತೆ ಬದಿ ಮದ್ಯದ ಬಾಟಲಿ ಬಾಕ್ಸ್ ಎಸೆದ ಆಸ್ಪತ್ರೆ ಸಿಬ್ಬಂದಿ?
- ಮೇಕೇರಿಯ ಇಂಪನ ಕೆ.ಡಿ.ಗೆ BCAಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ
- ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕೊಡಗಿನ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ
- ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಕೊಡಗಿನಲ್ಲಿ ಮಹತ್ವದ ಸಮಾಲೋಚನಾ ಸಭೆ
- ವರ್ಷವಾದರೂ ತಡೆಗೋಡೆ ನಿರ್ಮಿಸದ ಜಿಲ್ಲಾಡಳಿತ; ಅಪಾಯದ ತಿರುವಿನಲ್ಲಿ ವಾಹನ ಸವಾರರ ಪರದಾಟ!
- ಕೊಡಗು ಸೇರಿದಂತೆ ಇಂದು 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
- ಮಹಮ್ಮದ್ ಯಾಸೀನ್ಗೆ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನ
- ಕಾಫಿ ಶಾಪ್ ಕಳವು ಪ್ರಕರಣ: ಕೇರಳ ಮೂಲದ ಆರೋಪಿ ಬಂಧನ
Author: Kodagu-admin
‘ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನೋತ್ಸವ ಹಾಗೂ ವಿಜಯ ವಿಷ್ಣು ಭಟ್ ದತ್ತಿ’ ಪ್ರಶಸ್ತಿ ಪ್ರದಾನ ಸಮಾರಂಭ ************************************* ಮಡಿಕೇರಿ : -ಕನ್ನಡ ನಾಡಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಅಪಾರವಾಗಿದೆ. ಶಿಕ್ಷಣ, ಉದ್ಯೋಗ, ಆರೋಗ್ಯ, ನೀರಾವರಿ, ಕೈಗಾರಿಕೆ, ವಿದ್ಯುತ್, ಆರ್ಥಿಕ, ಹೀಗೆ ಹಲವು ಕ್ಷೇತ್ರಗಳ ಅಭಿವೃದ್ಧಿಗೆ ಚಾಲನೆ ನೀಡಿದ್ದರು ಎಂದು ಸಾಹಿತಿ ಹಾಗೂ ಆಕಾಶವಾಣಿ ನಿವೃತ್ತ ಉದ್ಘೋಷಕರಾದ ಸುಬ್ರಾಯ ಸಂಪಾಜೆ ಅವರು ಸ್ಮರಿಸಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಸರ್ಕಾರಿ ಪ್ರೌಢ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಸರ್ಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಬುಧವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ‘ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 141 ನೇ ಜನ್ಮದಿನೋತ್ಸವ ಹಾಗೂ ವಿಜಯ ವಿಷ್ಣು ಭಟ್ ದತ್ತಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಕೊಡಗು ಜಿಲ್ಲೆ ಸೇನಾ ಕ್ಷೇತ್ರ ಹಾಗೂ ಕ್ರೀಡಾ ಪರಂಪರೆಗೆ ಹೆಸರಾಗಿದೆ.…
ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಈ ವಿರಾಜಪೇಟೆ ಹೋಬಳಿಯ ಆರ್ಜಿ ಗ್ರಾಮದ ಮಳೆಯಿಂದ ಹಾನಿಗೊಳಗಾದ ಮನೆಗಳ ಹಾನಿ ಪರಿಶೀಲನೆ ನಡೆಸಿದರು.
18 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಐಪಿಎಲ್ ಚಾಂಪಿಯಸ್ ಟ್ರೋಫಿಯನ್ನು ಗೆದ್ದ ಬೆಂಗಳೂರು ತಂಡಕ್ಕೆ ದೇಶದಾದ್ಯಂತ ಅಭಿಮಾನಿಗಳು ಶುಭಕೋರುತ್ತಾ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ವಾಟ್ಸಪ್, ಫೇಸ್ ಬುಕ್, ಇನ್ಸ್ಟಾ, ಯೂಟ್ಯೂಬ್ ಎಲ್ಲದರಲ್ಲೂ ಸಂಭ್ರಮವೋ ಸಂಭ್ರಮ. ಮಡಿಕೇರಿ ತಾಲೂಕಿನ ಹಾಕತ್ತೂರು ಪಂಚಾಯಿತಿಯ ಆರ್ಸಿಬಿ ಅಭಿಮಾನಿಗಳು ರಾತ್ರಿ ಸಂಭ್ರಮಿಸಿದಲ್ಲದೆ ಇಂದು ಹಾಕತ್ತೂರು ಪಂಚಾಯಿತಿಯ ಹಾಕತ್ತೂರು, ಬಿಳಿಗೇರಿ, ತೊಂಬತ್ತುಮನೆ, ಮೇಕೇರಿ ಹಾಗೂ ಕಗ್ಗೊಡ್ಲುವಿನ ಸರಕಾರಿ ಶಾಲೆಗಳಿಗೆ ತೆರಳಿ ಪ್ರಸಾದ್ ಪೂಜಾರಿ ನೇತೃತ್ವದಲ್ಲಿ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮೈಸೂರು ಪಾಕ ವಿತರಿಸಿದರು. ಕಿರಣ್, ದಯಾ, ಪ್ರವೀಣ್, ಖಾದರ್, ಕರೀಂ, ಸುನೀಲ್, ಕೌಶಿಕ್ ಮುಂತಾದವರು ಇದ್ದರು.
ಮಡಿಕೇರಿ ತಾಲೂಕಿನ ಮಡಿಕೇರಿ ರೈತ ಸಂಪರ್ಕ ಕೇಂದ್ರದಲ್ಲಿ ಭತ್ತ ಬಿತ್ತನೆ ಬೀಜ ( RNR-15048 ತಳಿ ) ದೊರೆಯುತ್ತದೆ. ಸಲ್ಲಿಸಬೇಕಾದ ದಾಖಲಾತಿಗಳು : 1) ಆಧಾರ್ ಕಾರ್ಡ್ ಪ್ರತಿ 2) RTC ಪೂರ್ಣ ಮೊತ್ತ :ರೂ.1250/25 kg ರಿಯಾಯಿತಿ :ರೂ. 200/25kg ರೈತರು ಪಾವತಿಸಬೇಕಾದ ಮೊತ್ತ : ರೂ.1050/25 kg
ತಹಸೀಲ್ದಾರರಾದ ಪ್ರವೀಣ ಕುಮಾರ್ ಅವರು ಭಾಗಮಂಡಲ ಹೋಬಳಿ ತಾವೂರು ಗ್ರಾಮದ ಕಟ್ಟಪ್ಪಳ್ಳಿ ಎಂಬಲ್ಲಿಗೆ ಭಾಗಮಂಡಲದಿಂದ ನೇರ ರಸ್ತೆ ಸಂಪರ್ಕ ಇಲ್ಲದ ಕಾರಣ ಸಂಪಾಜೆ ಹೋಬಳಿ ಚೆಂಬು ಗ್ರಾಮದ ಮುಖಾಂತರ ತೆರಳಿ ಭೇಟಿ ನೀಡಿ ಬರೆ ಜರಿಯುವ ಹಂತದ ಅಪಾಯಕಾರಿ ಸ್ಥಳದಲ್ಲಿರುವ ಮನೆಗಳನ್ನು ಪರಿಶೀಲಿಸಿದರು ಹಾಗೂ ಅವರಿಗೆ ಮಳೆಯು ತೀವ್ರವಾದಲ್ಲಿ ಸುರಕ್ಷಿತ ಜಾಗಗಳಿಗೆ ತೆರಳುವಂತೆ ಸೂಚಿಸಿದರು ಮತ್ತು ಅಲ್ಲಿನ ಜನಗಳಿಗೆ ಫುಡ್ ಕಿಟ್ ವಿತರಣೆ ಮಾಡಿದರು ಸ್ಥಳದಲ್ಲಿ ಭಾಗಮಂಡಲ ಹೋಬಳಿ ಕಂದಾಯ ಪರಿವೀಕ್ಷಕರು ಗ್ರಾಮ ಆಡಳಿತ ಅಧಿಕಾರಿಗಳು ಗ್ರಾಮ ಸಹಾಯಕರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ಬಾಳೆಲೆ ಹೋಬಳಿ ನಿಟ್ಟೂರು ಗ್ರಾಮದ ಬೋಜಪ್ಪ ಎಂಬುವವರ ಮನೆಯ ಮೇಲಚ್ಛಾವಣಿ ಹಾಗೂ ಗೋಡೆವು ಮಳೆಯಿಂದ ಹಾನಿಯಾಗಿದೆ. ಈ ಸಂಬಂಧ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿದರು.
ಮಡಿಕೇರಿ:ಗೋಣಿಕೊಪ್ಪ ಸಮೀಪದ ಅರ್ವತ್ತೋಕ್ಲುವಿನಲ್ಲಿರುವ ಸರ್ವದೈವತ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾರಂಭೋತ್ಸವ ಕಾರ್ಯಕ್ರಮವು ಅದ್ಧೂರಿಯಾಗಿ ನಡೆಯಿತು. ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ, ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ ಮೊಣ್ಣಪ್ಪ, ಹಿರಿಯ ಪ್ರಾಂಶುಪಾಲರಾದ ಲಲಿತ ಮೊಣ್ಣಪ್ಪ, ಪ್ರಾಂಶುಪಾಲರಾದ ಪ್ರದೀಪ್, ಮುಖ್ಯ ಶಿಕ್ಷಕಿ ಶೀಲಾ ಬೋಪಣ್ಣ, ಶಿಕ್ಷಕರು , ಉಪನ್ಯಾಸಕರು , ಸಿಬ್ಬಂದಿಗಳು ಸ್ವಾಗತಿಸಿದರು.ಶಾರದ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ ವಿದ್ಯಾರ್ಥಿಗಳನ್ನು ಸಂಭ್ರಮದಿಂದ ಬರಮಾಡಿಕೊಂಡರು. ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ ಮೊಣ್ಣಪ್ಪ ವಿದ್ಯಾರ್ಥಿಗಳಿಗೆ ಶುಭಕೋರಿದರು.ನಂತರ ಮಕ್ಕಳಿಗೆ ಸಿಹಿ ಹಂಚಲಾಯಿತು.
ಹಾರಂಗಿ ಜಲಾನಯನ ಪ್ರದೇಶದಲ್ಲಿ ಹೆಚ್ಚಾಗಿ ಮಳೆಯಾಗುತ್ತಿದ್ದು, ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿರುತ್ತದೆ ಹಾಗೂ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಲಾನಯನ ಪ್ರದೇಶಗಳಲ್ಲಿ ಭಾರಿ- ಪ್ರಮಾಣದಲ್ಲಿ ಮಳೆಯಾಗುವ ಸಂಭವವಿದ್ದು, ಒಳಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಂಭವವಿರುತ್ತದೆ. ಜಲಾಶಯವು ಶೀಘ್ರವೇ ಗರಿಷ್ಟ ಮಟ್ಟ ತಲುಪುವುದರಿಂದ ನದಿಗೆ ಹೆಚ್ಚುವರಿ ನೀರನ್ನು ಹರಿಸಲಾಗುವುದು. ಆದ್ದರಿಂದ ಸಾರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಹಾರಂಗಿ ಮತ್ತು ಕಾವೇರಿ ನದಿಯ ಪಾತ್ರದಲ್ಲಿರುವ ಮತ್ತು ನದಿಯ ಎರಡು ದಂಡೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಆಸ್ತಿ ಪಾಸ್ತಿ ಹಾಗೂ ಜನಜಾನುವಾರು ರಕ್ಷಣೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳಲು ಕೋರಲಾಗಿದೆ. *ಕೊಡಗು ನ್ಯೂಸ್*
ಮಾಸ್ಕೋ. : ಉಕ್ರೇನ್ ರಷ್ಯಾದ ಸೈಬೀರಿಯಾದಲ್ಲಿರುವ ಸೇನಾಗಳ ಮೇಲೆ ಡ್ರೋನ್ ದಾಳಿ ಮಾಡಿ 40ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ. ಅದರಲ್ಲೂ ಉಕ್ರೇನ್ ಗಡಿಯಿಂದ 2000 ಕಿ.ಮಿ. ಒಳ ನುಗ್ಗಿ ಯಾರಿಗೂ ಗೊತ್ತಾಗದ ರೀತಿಯಲ್ಲಿ ಗುಪ್ತವಾಗಿ ರಹಸ್ಯ ಕಾರ್ಯಾಚರಣೆ ನಡೆಸಿರುವುದು ರಷ್ಯಾವನ್ನೇ ಬೆಚ್ಚಿಬೀಳಿಸಿದೆ. ಕಳೆದ ಮೂರು ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ರಷ್ಯಾ ಹಾಗೂ ಉಕ್ರೇನ್ ಯುದ್ಧಕ್ಕೆ ಎನ್ನೇನೂ ಶಾಂತಿ ಮಾತುಕತೆಯ ಮೂಲಕ ಕದನ ವಿರಾಮ ಘೋಷಣೆಯಾಗೇ ಬಿಡುತ್ತದೆ ಎನ್ನುವ ನಡುವೆ ರಷ್ಯಾ ಹಾಗೂ ಉಕ್ರೇನ್ ನಡುವೆ ಅತಿ ದೊಡ್ಡ ಕಾಳಗ ಶುರುವಾಗುವ ಮುನ್ಸೂಚನೆ ಬಂದಂತಿದೆ. ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ಧ ಈಗ ಹೊಸ ದಿಕ್ಕನ್ನು ಪಡೆದುಕೊಂಡಿದ್ದು, ಈ ಬಾರಿ ಉಕ್ರೇನ್ ರಷ್ಯಾದೊಳಗೆ ಆಳವಾಗಿ ನುಗ್ಗಿ ಇಡೀ ರಷ್ಯಾದ ವಾಯುಪಡೆಯನ್ನು ಬೆಚ್ಚಿಬೀಳಿಸುವಷ್ಟು ಬೃಹತ್ ಡ್ರೋನ್ ದಾಳಿಯನ್ನು ನಡೆಸಿದೆ. ಇದರೊಂದಿಗೆ ಉಕ್ರೇನ್ ರಷ್ಯಾದ ಸೈಬೀರಿಯಾದಲ್ಲಿರುವ ಸೇನಾಗಳ ಮೇಲೆ ಡ್ರೋನ್ ದಾಳಿ ಮಾಡಿ 40ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು…
ಮಡಿಕೇರಿ : ವಸತಿ ಶಾಲೆಗಳ ಖಾಯಂ ನೌಕರರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ವಸತಿ ಶಾಲೆಗಳ ನೌಕರರ ಸಂಘ, ಕೊಡಗು ಜಿಲ್ಲಾ ಘಟಕದ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ವಿ.ಅಲೋಕ್, ಖಾಯಂ ಬೋಧಕ-ಬೋಧಕೇತರ ಸಿಬ್ಬಂದಿಗಳ ಶ್ರಮದಿಂದ ಪ್ರತಿ ಭಾರಿ ಉತ್ತಮ ಫಲಿತಾಂಶ ಬರುತ್ತಿದೆ. ನವೋದಯ ವಿದ್ಯಾಲಯ ಮತ್ತು ಶಿಕ್ಷಣ ಇಲಾಖೆಯ ಶಾಲೆಗಳ ಸಿಬ್ಬಂದಿಗಳಿಗೆ ದೊರೆಯುವ ಹಲವು ಸೌಲಭ್ಯಗಳು ಕ್ರೈಸ್ ಖಾಯಂ ನೌಕರರಿಗೆ ಸಿಗುತ್ತಿಲ್ಲ. ಆದರೂ, ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣವನ್ನು ಶಿಕ್ಷಕರು ನೀಡುತ್ತಿದ್ದಾರೆ. ಆದರೆ, ನಮಗೆ ಹಿಡಿಗಂಟು, ಜ್ಯೋತಿ ಸಂಜೀವಿನಿ ಸೇರಿದಂತೆ ಇತರೆ ವ್ಯವಸ್ಥೆಯಿಲ್ಲ. ಇವುಗಳನೆಲ್ಲ ನಮಗೂ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆಯೆಂದರು. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ವಸತಿ ಶಾಲೆಗಳ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಚಿದಂಬರ, ಖಜಾಂಚಿ ಎಂ.ಆರ್.ಮೀನಾ, ಸಹಕಾರ್ಯದರ್ಶಿ ಎಚ್.ಆರ್.ಷಡಕ್ಷರಿ, ತಾಲೂಕು ಕಾರ್ಯದರ್ಶಿಗಳಾದ ಕೆ.ಸಂತೋಷ್ ಕುಮಾರ್, ಕೆ.ವಿ.ಅಮೃತ್, ತಾಂತ್ರಿಕ ಕಾರ್ಯದರ್ಶಿ ಪಿ.ಕೆ.ಆಶಿಫ್, ದಿಲನ್…
