ಅಕ್ರಮ ಬೇಟೆಗೆ ಯತ್ನ ಮೂವರ ಬಂಧನ

ಸೋಮವಾರಪೇಟೆ ಸಮೀಪದ ಬಾಣವಾರ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೇಟೆ ನಡೆಸುತ್ತಿದ್ದ ಮೂವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಅರಣ್ಯಕ್ಕೆ ನುಗ್ಗಿ ಬೇಟೆ ನಡೆಸುತ್ತಿದ್ದ ವೇಳೆ RFO ಶೈಲೇಂದ್ರ ಅವರ ನೇತೃತ್ವದ ಅರಣ್ಯಾಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದೆ.
ಬಂಧಿತರನ್ನು
ಭಾನು ಪ್ರಕಾಶ್ (46), ಭರತ್ (40) ಹಾಗೂ ಚಿನ್ನಪ್ಪ (38)
ಮೂವರು ಯಡೂರು ಗ್ರಾಮದ ನಿವಾಸಿಗಳು
ಎಂದು ಗುರುತಿಸಲಾಗಿದೆ.
ಬಂಧಿತರ ಬಳಿ ಇದ್ದ ದೇಶಿ ಮೂರು ಬಂದೂಕು, ಜೀವಂತ ಗುಂಡುಗಳು ಬೇಟೆಗೆ ಬಳಸುವ ಉಪಕರಣಗಳನ್ನು ಹಾಗೂ ಆಲ್ಟೊ ಕಾರ್ ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ಆರೋಪಿಗಳು ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶಿಸಿ ವನ್ಯಜೀವಿಗಳ ಬೇಟೆಗೆ ಮುಂದಾಗಿದ್ದರೆಂದು ತಿಳಿದುಬಂದಿದೆ.
ಬಂಧಿತ ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣ ಸಂಬಂಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

