
ಸ್ವಯಂ ಪ್ರೇರಿತ ಶಿಬಿರದಲ್ಲಿ ಹಲವರು ರಕ್ತದಾನ
ಕೇಂದ್ರ ಸರಕಾರದ ಮೈಭಾರತ್ , ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ,ಕೊಡಗು ಜಿಲ್ಲಾ ಯುವ ಒಕ್ಕೂಟ,ತಾಲ್ಲೂಕು ಯುವ ಒಕ್ಕೂಟ ಮಡಿಕೇರಿ,ರೋಟರಿ ಮಿಸ್ಟಿಹಿಲ್ಸ್ , ರೋಟರಿ ಇನ್ನರ್ ವೀಲ್ , ಲಯನ್ಸ್ ಕ್ಲಬ್ ಮಡಿಕೇರಿ,ರೋಟರಿ ಕ್ಲಬ್ ಆಫ್ ಮಡಿಕೇರಿ ವುಡ್ಸ್ ,ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕಾರ್ಮಿಕ ಇಲಾಖೆ ಮಡಿಕೇರಿ, ರೋಟರಿ ಸಮುದಾಯದಳ ಮೇಕೇರಿ, ಎಸ್. ಡಿ. ಎಂ. ಸಿ. ಮೇಕೇರಿ ಗ್ರಾಮ ಪಂಚಾಯಿತಿ ಮೇಕೇರಿ , ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರ ಮಡಿಕೇರಿ ಹಾಗೂ ಸ್ವಾಗತ ಯುವಕ ಸಂಘ ಮೇಕೇರಿ ಇವರುಗಳ ಸಂಯುಕ್ತಾಶ್ರಯದಲ್ಲಿಂದು ಕೇಂದ್ರ ಸರ್ಕಾರದ ಸುಶಾಸನ ದಿನ ದ ಪ್ರಯುಕ್ತ 14 ನೇ ವರ್ಷದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಕಾರ್ಯಕ್ರಮದಲ್ಲಿ ರಕ್ತದಾನದ ಮಹತ್ವದ ಬಗ್ಗೆ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ|| ಕರುಂಬಯ್ಯ ಮಾಹಿತಿ ನೀಡಿದರು.ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ದೊರೆಯುವ ವಿವಿಧ ಸವಲತ್ತುಗಳ ಬಗ್ಗೆ ಇಲಾಖಾ ಸಿಬ್ಬಂಧಿಗಳು ಮಾಹಿತಿ ನೀಡಿದರು. ಈ ದೇಶದ ಮಾಜಿ ಪ್ರಧಾನಿಗಳು ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನದ ಪ್ರಯುಕ್ತ ಕೇಂದ್ರ ಸರ್ಕಾರವು ಸುಶಾಸನ ದಿನ(ಉತ್ತಮ ಆಡಳಿತ ದಿನ)ವೆಂದು ಘೋಷಿಸಿದ್ದು ದೇಶದ ಅಭಿವೃದ್ಧಿಗೆ ವಾಜಪೇಯಿಯವರು ನೀಡೀರುವ ಕೊಡುಗೆ ಅಪಾರವಾಗಿದೆ. ಎಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾ.ಜ.ಪಾ.ಮಹಿಳಾ ಮೋರ್ಛಾದ ಜಿಲ್ಲಾಧ್ಯಕ್ಷೆ ಶ್ರೀಮತಿ ಅನಿತಾ ಪೂವಯ್ಯ ಹೇಳಿದರು.ಯುವಕ ಸಂಘದ ಚಟುವಟಿಕೆಗಳ ಬಗ್ಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಶ್ರೀ ರವೀಂದ್ರ ರೈ ಹಾಗೂ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷರಾದ ಸುಕುಮಾರ್ ರವರು ಪ್ರಶಂಸೆಯ ನುಡಿಗಳನ್ನಾಡಿದರು. ಇಂದಿನ ಶಿಬಿರದಲ್ಲಿ ಒಟ್ಟು 59 ರಕ್ತದಾನಿಗಳು ರಕ್ತದಾನ ಮಾಡಿದರು.ಕಾರ್ಯಕ್ರಮದಲ್ಲಿ ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷರಾದ ರತ್ನಾಕರ ರೈ , ಲಯನ್ಸ್ ಕ್ಲಬ್ ಅಧ್ಯಕ್ಷರಾದ ಮದನ್ ಮುದ್ದಯ್ಯ,ಇನ್ನರ್ ವೀಲ್ ನ ಲಲಿತಾ ರಾಘವನ್ , ಧರ್ಮಸ್ಥಳ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ನಳಿನಿ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.
ಕೊಡಗು ನ್ಯೂಸ್

