Close Menu
Kodagu News
    ಹೊಸ ಸುದ್ದಿ

    ಹಾಕತ್ತೂರು–ಬಿಳಿಗೇರಿ ರಸ್ತೆಯಲ್ಲಿ ಮರ ಉರುಳಿ ಸಂಚಾರ ಸ್ಥಗಿತ

    August 2, 2026

    ಚೆಟ್ಟಳ್ಳಿ ಸಮೀಪ ಪೊನ್ನತ್ತುಮೊಟ್ಟೆಯಲ್ಲಿ ಜೋಡಿ ಕಾಡಾನೆಗಳ ದಾಳಿ

    August 2, 2026

    ಕೊಡಗಿಗೆ ಮತ್ತೆ ಶುರುವಾಯಿತು ಕಸ್ತೂರಿರಂಗನ್ ಕಾಟ

    August 1, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ಹಾಕತ್ತೂರು–ಬಿಳಿಗೇರಿ ರಸ್ತೆಯಲ್ಲಿ ಮರ ಉರುಳಿ ಸಂಚಾರ ಸ್ಥಗಿತ
    • ಚೆಟ್ಟಳ್ಳಿ ಸಮೀಪ ಪೊನ್ನತ್ತುಮೊಟ್ಟೆಯಲ್ಲಿ ಜೋಡಿ ಕಾಡಾನೆಗಳ ದಾಳಿ
    • ಕೊಡಗಿಗೆ ಮತ್ತೆ ಶುರುವಾಯಿತು ಕಸ್ತೂರಿರಂಗನ್ ಕಾಟ
    • ಬಲ್ಲಮಾವಟಿ ಪೇರೂರು ಗ್ರಾಮದಲ್ಲಿ ಭಾರಿ ಮಳೆಗೆ ಅಡುಗೆಮನೆ ಗೋಡೆ ಕುಸಿದು ಹಾನಿ
    • 2ನೇ ಮೊಣ್ಣಂಗೇರಿ ಸಂಪರ್ಕ ರಸ್ತೆಯಲ್ಲಿ ಭೂಕುಸಿತ: ಸಂಚಾರಕ್ಕೆ ಅಡಚಣೆ
    • ಮಡಿಕೇರಿಯನ್ನು ಮಾದರಿ ನಗರವನ್ನಾಗಿಸಲು ಪ್ರಯತ್ನ: ಶಾಸಕ ಡಾ.ಮಂತರ್ ಗೌಡ
    • ಶೌಚಾಲಯಕ್ಕೆ ಬೀಗ: ಪುರಸಭೆ ಅಧಿಕಾರಿಗಳಿಗೆ ಕರವೇ ಎಚ್ಚರಿಕೆ
    • ಕಾವೇರಿ ನೀರು ಬಿಡಲು ವಿರೋಧಿಸಿ ಕುಶಾಲನಗರದಲ್ಲಿ ಕರವೇ ಪ್ರತಿಭಟನೆ
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಅಂತರರಾಷ್ಟ್ರೀಯ»ಬಿಜೆಪಿ ಟಿಕೆಟ್ ರೇಸ್ ನಲ್ಲಿದ್ದಾರೆ ತೇಲಪಂಡ ಶಿವಕುಮಾರ್ ನಾಣಯ್ಯ
    ಅಂತರರಾಷ್ಟ್ರೀಯ

    ಬಿಜೆಪಿ ಟಿಕೆಟ್ ರೇಸ್ ನಲ್ಲಿದ್ದಾರೆ ತೇಲಪಂಡ ಶಿವಕುಮಾರ್ ನಾಣಯ್ಯ

    Updated:November 21, 2025

    ಚುನಾವಣೆಗೆ ಇನ್ನು 30 ತಿಂಗಳು ಬಾಕಿ ಇರುವಂತೆಯೇ ಚುನಾವಣಾ ಕಾವು ಶುರುವಾಗಿದೆ. ಮಡಿಕೇರಿ ಹಾಗು ವಿರಾಜಪೇಟೆ ಕ್ಷೇತ್ರಗಳಿಗೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚು ಇದ್ದು ವಿರಾಜಪೇಟೆ ಕ್ಷೇತ್ರಕ್ಕೆ ಈ ಹಿಂದಿನ 2023 ರ ವಿಧಾನಸಭಾ ಚುನಾವಣೆಯಲ್ಲೇ ಪ್ರಬಲ ಆಕಾಂಕ್ಷಿಯಾಗಿದ್ದ ತೇಲಪಂಡ ಶಿವಕುಮಾರ್ ನಾಣಯ್ಯ 2028 ರ ಟಿಕೆಟ್ ಆಕಾಂಕ್ಷಿಗಳಲ್ಲಿ ಪ್ರಬಲರಲ್ಲಿ ಒಬ್ಬರಾಗಿದ್ದಾರೆ.
    ಮೂಲತ ಕೊಡಗಿನ ಬೇಂಗೂರು ಐವತೋಕ್ಲು ಗ್ರಾಮದವಾಗಿರುವ ಶಿವಕುಮಾರ್ ನಾಣಯ್ಯ ಬಿಇ ಪದವೀದರರಾಗಿದ್ದು, ಕೊಡಗು ಜಿಲ್ಲೆಯ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕರಾಗಿದ್ದು ಪಕ್ಷದಲ್ಲಿ ಇದೀಗ ಸಕ್ರಿಯವಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

    ಬಿಜೆಪಿ ಹಾಗೂ ಆರ್ಎಸ್ಎಸ್ ನ ಮೇಲ್ಮಟ್ಟದ ನಾಯಕತ್ವದಲ್ಲಿ ಗುರುತಿಸಿಕೊಂಡಿರುವ ನಾಣಯ್ಯ ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಬಿಜೆಪಿ ಹಾಗೂ ಆರ್ಎಸ್ಎಸ್ ನಾಯಕರ ಜೊತೆ ನಿಕಟ ಸಂಪರ್ಕದಲ್ಲಿರುವ ತೇಲಪಂಡ ಶಿವಕುಮಾರ್ ನಾಣಯ್ಯ ಪಕ್ಷ ತನಗೆ ಟಿಕೆಟ್ ನೀಡುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

    ಈಗಾಗಲೇ ಕಾಂಗ್ರೆಸ್ ಶಾಸಕ ಪೊನ್ನಣ್ಣ ಕ್ಷೇತ್ರದಲ್ಲಿ ಪ್ರಾಬಲ್ಯ ಸಾದಿಸುತ್ತಿದ್ದು ಕೊಡವ ಮತಗಳ ಓಲೈಕೆಯಲ್ಲೂ ಯಶಸ್ಸು ಸಾಧಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಕೊಡವ ಮತಗಳು ಹಾಗೂ ಅಲ್ಪಸಂಖ್ಯಾತ ಮತಗಳು ನಿರ್ಣಾಯಕವಾಗಿದ್ದು ಇದನ್ನು ಭೇದಿಸಿ ಗೆಲ್ಲಬಲ್ಲ ಒಬ್ಬ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆಯಿದೆ.

    ಶಿವಕುಮಾರ್ ನಾಣಯ್ಯ ಕಳೆದ ಚುನಾವಣೆಯ ಸಂದರ್ಭ ಸಮೀಕ್ಷೆಯಲ್ಲಿ ತಮ್ಮ ಹೆಸರನ್ನು ಮುನ್ನೆಲೆಗೆ ತರುವಲ್ಲಿ ಯಶಸ್ವಿಯಾಗಿದ್ದರು. ಬಿಜೆಪಿ ಸರ್ವೆಯಲ್ಲಿ ನಾಣಯ್ಯ ಅವರಿಗೆ ಟಿಕೆಟ್ ನೀಡಿದ್ದ ಆದರೆ ಕಾಂಗ್ರೆಸ್ ಅಭ್ಯರ್ಥಿ ಪೊನ್ನಣ್ಣ ವಿರುದ್ಧ ಹತ್ತು ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂಬ ವರದಿಯಿತ್ತು.. ಆದರೆ ಈಗ ಸನ್ನಿವೇಶಗಳು ಬದಲಾಗಿದ್ದು ಪೊನ್ನಣ್ಣ ಕೊಡವ ಸಮುದಾಯದ ಒಬ್ಬ ಪ್ರಬಲ ನಾಯಕರಾಗಿ ಹೊರಹೊಮ್ಮುತ್ತಿದ್ದಾರೆ.

    ಯಾರು ಈ ಶಿವಕುಮಾರ್ ನಾಣಯ್ಯ?
    ಕೊಡಗಿನ ಬೆಂಗೂರು ಐವತೋಕ್ಲು ಗ್ರಾಮದ ತೇಲಪಂಡ ದಿ, ಬಿ ನಾಣಯ್ಯ ಹಾಗೂ ನಿವೃತ ಮುಖ್ಯೋಪದ್ಯಾನಿ ಅಕ್ಕಮ್ಮ ಅವರ ಪುತ್ರ. ಶಿವಕುಮಾರ್ ಅವರ ತಂದೆ ಚೆಟ್ಟಳ್ಳಿಯ ಕೇಂದ್ರಿಯ ತೋಟಗಾರಿಕಾ ಸಂಶೋದನಾ ಕೇಂದ್ರದಲ್ಲಿ ಉದ್ಯೋಗಿಯಾಗಿದ್ದರು. ತಾಯಿ ಸರಕಾರಿ ಶಾಲೆಯ ಶಿಕ್ಷಕರಾಗಿದ್ದವರು. ಶಿವಕುಮಾರ್ ನಾಣಯ್ಯ ಚೆಟ್ಟಳ್ಳಿ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪಡೆದು ಬಳಿಕ ಪಿಯುಸಿ ಅಳಿಕೆಯಲ್ಲಿ ಮತ್ತು ಪದವಿಯನ್ನು ಬೆಂಗಳೂರಿನ ಹೆಸರಾಂತ ಎಂ ಎಸ್ ರಾಮಯ್ಯ ಕಾಲೇಜಿನಲ್ಲಿ ಮಾಡಿದ್ದಾರೆ. ಕಳೆದ ಚುನಾವಣೆಯಿಂದಲೂ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿರುವ ಶಿವಕುಮಾರ್ ನಾಣಯ್ಯ ಸಮಾಜ ಸೇವೆಯ ಮೂಲಕ ತಮ್ಮ ಕ್ಷೇತ್ರದಲ್ಲಿ ಹಂತ ಹಂಗವಾಗಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುವಲ್ಲಿ ತೊಡಗಿದ್ದಾರೆ.

    ಹೊಸಮುಖದ ಬೇಡಿಕೆಗೆ ನಾಣಯ್ಯ ಸೂಕ್ತವೇ?
    ವಿರಾಜಪೇಟೆ ಹಾಗೂ ಮಡಿಕೇರಿ ಕ್ಷೇತ್ರದಲ್ಲಿ ಈ ಹಿಂದೆಯೂ ಹೊಸ ಮುಖದ ಬೇಡಿಕೆ ಹೆಚ್ಚಿತ್ತು. ಇದೆ ಕಾರಣದಿಂದಲೇ ಹಳೆ ಶಾಸಕರು ಅಲ್ಪ ಮತದಲ್ಲಿ ಸೋತರು ಎಂಬ ಮಾತುಗಳು ಈಗಲೂ ಚಾಲ್ತಿಯಲ್ಲಿದೆ. ಇದೆ ಕಾರಣಕ್ಕೆ ಕೈ ಶುದ್ಧವಿರುವ ತನಗೆ ಟಿಕೆಟ್ ಸಿಕ್ಕಿದರೆ ಗೆಲುವ ಸದ್ಯ ಎಂಬ ಇಂಗಿತವನ್ನು ಶಿವಕುಮಾರ್ ನಾಣಯ್ಯ ವ್ಯಕ್ತಪಡಿಸಿದ್ದಾರೆ.

    ಪೊನ್ನಣ್ಣ ಸೋಲಿಸುವುದು ಅಷ್ಟು ಸುಲಭವಲ್ಲ.

    ಶಾಸಕ ಪೊನ್ನಣ್ಣ ಅವರನ್ನು ಸೋಲಿಸುವುದು ಅಷ್ಟು ಸುಲಭದ ಮಾತಲ್ಲ. ಬುದ್ಧಿವಂತಿಕೆ ಮತ್ತು ಚಾಣಕ್ಷ್ಯತನದಲ್ಲಿ ಮುಂದುವರೆಯುತ್ತಿರುವ ಪೊನ್ನಣ್ಣ ವಿರುದ್ಧ ಹೊಸ ಮುಖದೊಂದಿಗೆ ಹಣಬಲದ ಅವಶ್ಯಕತೆಯೂ ಇದೆ ಎಂಬ ವಿಶ್ಲೇಷಣೆಯಿದೆ. ಈಗಿದ್ದು ಬಿಜೆಪಿ ಸಾಂಪ್ರದಾಯಕ ಮತಗಳನ್ನು ಸೆಳೆಯಲು ಕಾಂಗ್ರೆಸ್ ಗೆ ಸಾಧ್ಯವಾಗಲ್ಲ ಎಂಬ ಅಂಶವು ಎಂದಿದ್ದು ಸದ್ಯ ಶಿವಕುಮಾರ್ ನಾಣಯ್ಯ ವಿದ್ಯಾವಂತ ಹಾಗೂ ಶುದ್ಧ ಹಸ್ತದ ರಾಜಕಾರಣಿ ಅಂದರೆ ತಪ್ಪಾಗಲಾರದು.

    Previous Articleಕೊಡಗು ಪತ್ರಕತ೯ರ ಸಂಘ – ಮುಳಿಯ ಸಂಸ್ಥೆಯಿಂದ 33 ಕಲಾವಿದರ ಗಾನಸಂಭ್ರಮ
    Next Article ಬಿಜೆಪಿ ಟಿಕೆಟ್ ರೇಸ್ನಲ್ಲಿ ಶಿವಕುಮಾರ್ ನಾಣಯ್ಯ

    Related Posts

    ಹಾಕತ್ತೂರು–ಬಿಳಿಗೇರಿ ರಸ್ತೆಯಲ್ಲಿ ಮರ ಉರುಳಿ ಸಂಚಾರ ಸ್ಥಗಿತ

    August 2, 2026

    ಚೆಟ್ಟಳ್ಳಿ ಸಮೀಪ ಪೊನ್ನತ್ತುಮೊಟ್ಟೆಯಲ್ಲಿ ಜೋಡಿ ಕಾಡಾನೆಗಳ ದಾಳಿ

    August 2, 2026

    ಕೊಡಗಿಗೆ ಮತ್ತೆ ಶುರುವಾಯಿತು ಕಸ್ತೂರಿರಂಗನ್ ಕಾಟ

    August 1, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ಹಾಕತ್ತೂರು–ಬಿಳಿಗೇರಿ ರಸ್ತೆಯಲ್ಲಿ ಮರ ಉರುಳಿ ಸಂಚಾರ ಸ್ಥಗಿತ

    August 2, 2026

    ಚೆಟ್ಟಳ್ಳಿ ಸಮೀಪ ಪೊನ್ನತ್ತುಮೊಟ್ಟೆಯಲ್ಲಿ ಜೋಡಿ ಕಾಡಾನೆಗಳ ದಾಳಿ

    August 2, 2026

    ಕೊಡಗಿಗೆ ಮತ್ತೆ ಶುರುವಾಯಿತು ಕಸ್ತೂರಿರಂಗನ್ ಕಾಟ

    August 1, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.