Close Menu
Kodagu News
    ಹೊಸ ಸುದ್ದಿ

    ಮಡಿಕೇರಿಯಲ್ಲಿ ಲೋಕಾಯುಕ್ತರ ಭರ್ಜರಿ ದಾಳಿ: ನಗರಸಭೆ ಆಯುಕ್ತ ರಮೇಶ್ ಮನೆ ಸೇರಿ 8 ಕಡೆ ಶೋಧ

    September 22, 2026

    ಗೌರವದ ಬದುಕಿಗಾಗಿ ಸ್ಟೇರಿಂಗ್ ಹಿಡಿದ ಮೃದು ಕೈಗಳಿಗೆ ಹೇಳೋಣ ಒಂದು ಸಲಾಂ

    September 22, 2026

    ಕಸ್ತೂರಿ ರಂಗನ್ ವರದಿ ತಿರಸ್ಕರಿಸಿದ ರಾಜ್ಯ ಸರ್ಕಾರ

    September 22, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ಮಡಿಕೇರಿಯಲ್ಲಿ ಲೋಕಾಯುಕ್ತರ ಭರ್ಜರಿ ದಾಳಿ: ನಗರಸಭೆ ಆಯುಕ್ತ ರಮೇಶ್ ಮನೆ ಸೇರಿ 8 ಕಡೆ ಶೋಧ
    • ಗೌರವದ ಬದುಕಿಗಾಗಿ ಸ್ಟೇರಿಂಗ್ ಹಿಡಿದ ಮೃದು ಕೈಗಳಿಗೆ ಹೇಳೋಣ ಒಂದು ಸಲಾಂ
    • ಕಸ್ತೂರಿ ರಂಗನ್ ವರದಿ ತಿರಸ್ಕರಿಸಿದ ರಾಜ್ಯ ಸರ್ಕಾರ
    • ಸಿದ್ದಾಪುರದಲ್ಲಿ ಅಕ್ರಮ ಶ್ರೀಗಂಧ ಕಳವು: ಇಬ್ಬರ ಬಂಧನ, 55 ಕೆಜಿ ಗಂಧ ವಶ
    • ಭಾರತೀಯ ಸೇನೆಯಲ್ಲಿ ಹೊಸ ಇತಿಹಾಸ: ರಾಷ್ಟ್ರಪತಿಯ ADC ಆದ ಮೇಜರ್ ನವ್ಯಾ ಶೇಖಾವತ್
    • ವಿರಾಜಪೇಟೆ ಗಣೇಶೋತ್ಸವ: ಸೆ.25ರಿಂದ ವಾಹನ ಸಂಚಾರದಲ್ಲಿ ಬದಲಾವಣೆ
    • ಆನೆಕಾಡು ಅಪಘಾತದಲ್ಲಿ ದಾಖಲೆಗಳುಳ್ಳ ಬ್ಯಾಗ್ ಕಳೆದುಹೋಗಿದೆ.
    • ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರಿಗೆ ಬಸ್ ಡಿಕ್ಕಿ
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಅಂತರರಾಷ್ಟ್ರೀಯ»ಕೊಡವ ಸಮಾಜಗಳು ದೇಶದ ಸಂಸ್ಕೃತಿಗಳ ಸಂಕೇತ: ಶಾಸಕ ಪೊನ್ನಣ್ಣ
    ಅಂತರರಾಷ್ಟ್ರೀಯ

    ಕೊಡವ ಸಮಾಜಗಳು ದೇಶದ ಸಂಸ್ಕೃತಿಗಳ ಸಂಕೇತ: ಶಾಸಕ ಪೊನ್ನಣ್ಣ

    ಕೊಡಗು ಜಿಲ್ಲೆ, ಕುಶಾಲನಗರ ತಾಲೂಕು ಕೊಡವ ಸಮಾಜದ ಆಯೋಜಿಸಿದ ಕೈಲ್ ಪೋಳ್ದ್ ಸಂತೋಷಕೂಟ ಕಾರ್ಯಕ್ರಮದಲ್ಲಿ, ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಕುಶಾಲನಗರದ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಸಾಂಸ್ಕೃತಿಕ ಹಾಗೂ ವಿವಿಧ ಸಾಂಪ್ರದಾಯಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ ಶಾಸಕರು, ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕೊಡಗಿನ ಹಾಗೂ ವಿಶೇಷವಾಗಿ ಕೊಡವರ ಐತಿಹಾಸಿಕ ಪರಂಪರೆ, ಸಂಸ್ಕೃತಿ ಹಾಗೂ ಆಚರಣೆಗಳನ್ನು ಜೀವಂತವಾಗಿರಿಸುವಲ್ಲಿ ಕೊಡವ ಸಮಾಜಗಳು ವಿಶೇಷ ಪಾತ್ರ ನಿಭಾಯಿಸುತ್ತಾ ಬಂದಿವೆ. ಸಮಾಜದ ಬಾಂಧವರಲ್ಲಿ ವಿಶೇಷವಾಗಿ ಯುವ ಪೀಳಿಗೆಯಲ್ಲಿ ನಮ್ಮ ಸಂಸ್ಕೃತಿ ಹಾಗೂ ಆಚರಣೆಗಳನ್ನು ಅನುಸರಿಸುತ್ತಾ ಬೆಳೆಸುವ ಗುರುತರ ಜವಾಬ್ದಾರಿಯನ್ನು ಕೊಡವ ಸಮಾಜದವರು ವಹಿಸಿಕೊಳ್ಳಬೇಕು. ಒಂದು ಸಮಾಜ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯಲು ಅದರ ಸಂಸ್ಕೃತಿ, ಭಾಷೆ ಹಾಗೂ ಆಚರಣೆಗಳನ್ನು ಪೋಷಿಸಿ ಬೆಳೆಸುವುದು ಅತ್ಯಂತ ಅವಶ್ಯಕ ವಿಷಯವಾಗಿದೆ. ಆಧುನಿಕ ಜಗತ್ತಿಗೆ ಹೊಂದಿಕೊಳ್ಳುತ್ತಾ ನಮ್ಮ ಆಚರಣೆಗಳನ್ನು ಜಗತ್ತಿಗೆ ಪರಿಚಯಿಸುವುದರಲ್ಲಿ ನಾವು ಇಂದಿಗೂ ಹಿಂದೆ ಬೀಳಬಾರದು ಎಂದು ಕರೆ ನೀಡಿದರು.
    ಮುಂದುವರೆದು ಮಾತನಾಡಿದ ಮಾನ್ಯ ಶಾಸಕರು, ತಾನು ಹಾಗೂ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ‘ಕೊಡಗರು’ ಎಂದು ಸಂಬೋಧಿಸಲ್ಪಡುತ್ತಿದ್ದ ಶಬ್ದವನ್ನು *”ಕೊಡವ”* ಎಂಬುದಾಗಿ *ತಿದ್ದುಪಡಿ* ಮಾಡಿಸಿರುವುದು, *ಕೋವಿ ಹಕ್ಕಿನ* ಬಗ್ಗೆ ನಿರ್ದಿಷ್ಟವಾದ ನಿರ್ಧಾರ ಕೈಗೊಳ್ಳಲು ಕ್ರಮ ಕೈಗೊಂಡಿರುವುದು, ನಮ್ಮನ್ನು ದಶಕಗಳಿಂದ ಕಾಡುತ್ತಿರುವ *ಜಮ್ಮಾ ಬಾಣೆ* ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವುದು ಮಾತ್ರವಲ್ಲದೆ, ಕೊಡವ ಜನಾಂಗದವರು ಹಾಗೂ ಈ ನಾಡಿನ ಎಲ್ಲಾ ಜನಾಂಗದವರ *ಅಭಿವೃದ್ಧಿಗೆ ವಿಶೇಷ ಅನುದಾನ* ಗಳನ್ನು ತಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು, ಜನರು ನನಗೆ ನೀಡಿದ ಅಧಿಕಾರದ *ಸದ್ಬಳಕೆಗಾಗಿ ಹಾಗೂ ನಾಡಿನ ಏಳಿಗೆಗಾಗಿ* ಎಂದು ಬಣ್ಣಿಸಿದರು.
    ಈ ಸಂದರ್ಭದಲ್ಲಿ ಕೊಡವ ಸಮಾಜ ಅಧ್ಯಕ್ಷರು ಶ್ರೀ ವಾಂಚೀರ ಮನು ನಂಜುಂಡ, ಕುಶಾಲನಗರ ಕೊಡವಾಮೆರ ಕೊಂಡಾಟ ಕೊರವುಕಾರರು ಹಾಗೂ ಸಂಪಾದಕರು ನಡುಬಾಡೆ ಇ-ನ್ಯೂಸ್ ಶ್ರೀ ಚಾಮೆರ ದಿನೇಶ್ ಬೆಳ್ಯಪ್ಪ, ಕೊಡವ ಸಮಾಜದ ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

    Previous Articleರಾಜ್ಯದಲ್ಲಿಯೇ ತಾಲೂಕು ಕೇಂದ್ರದಲ್ಲಿ ಮೊದಲ ಜಿಲ್ಲಾಸ್ಪತ್ರೆ
    Next Article ಸಿಎಂ ನೇತೃತ್ವತ್ವದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಪ್ರಗತಿ ಪರಿಶೀಲನೆ ಸಭೆ

    Related Posts

    ಮಡಿಕೇರಿಯಲ್ಲಿ ಲೋಕಾಯುಕ್ತರ ಭರ್ಜರಿ ದಾಳಿ: ನಗರಸಭೆ ಆಯುಕ್ತ ರಮೇಶ್ ಮನೆ ಸೇರಿ 8 ಕಡೆ ಶೋಧ

    September 22, 2026

    ಗೌರವದ ಬದುಕಿಗಾಗಿ ಸ್ಟೇರಿಂಗ್ ಹಿಡಿದ ಮೃದು ಕೈಗಳಿಗೆ ಹೇಳೋಣ ಒಂದು ಸಲಾಂ

    September 22, 2026

    ಕಸ್ತೂರಿ ರಂಗನ್ ವರದಿ ತಿರಸ್ಕರಿಸಿದ ರಾಜ್ಯ ಸರ್ಕಾರ

    September 22, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ಮಡಿಕೇರಿಯಲ್ಲಿ ಲೋಕಾಯುಕ್ತರ ಭರ್ಜರಿ ದಾಳಿ: ನಗರಸಭೆ ಆಯುಕ್ತ ರಮೇಶ್ ಮನೆ ಸೇರಿ 8 ಕಡೆ ಶೋಧ

    September 22, 2026

    ಗೌರವದ ಬದುಕಿಗಾಗಿ ಸ್ಟೇರಿಂಗ್ ಹಿಡಿದ ಮೃದು ಕೈಗಳಿಗೆ ಹೇಳೋಣ ಒಂದು ಸಲಾಂ

    September 22, 2026

    ಕಸ್ತೂರಿ ರಂಗನ್ ವರದಿ ತಿರಸ್ಕರಿಸಿದ ರಾಜ್ಯ ಸರ್ಕಾರ

    September 22, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.