Close Menu
Kodagu News
    ಹೊಸ ಸುದ್ದಿ

    ಸಿದ್ದಾಪುರದಲ್ಲಿ ಅಕ್ರಮ ಶ್ರೀಗಂಧ ಕಳವು: ಇಬ್ಬರ ಬಂಧನ, 55 ಕೆಜಿ ಗಂಧ ವಶ

    September 22, 2026

    ಭಾರತೀಯ ಸೇನೆಯಲ್ಲಿ ಹೊಸ ಇತಿಹಾಸ: ರಾಷ್ಟ್ರಪತಿಯ ADC ಆದ ಮೇಜರ್ ನವ್ಯಾ ಶೇಖಾವತ್

    September 21, 2026

    ವಿರಾಜಪೇಟೆ ಗಣೇಶೋತ್ಸವ: ಸೆ.25ರಿಂದ ವಾಹನ ಸಂಚಾರದಲ್ಲಿ ಬದಲಾವಣೆ

    September 21, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ಸಿದ್ದಾಪುರದಲ್ಲಿ ಅಕ್ರಮ ಶ್ರೀಗಂಧ ಕಳವು: ಇಬ್ಬರ ಬಂಧನ, 55 ಕೆಜಿ ಗಂಧ ವಶ
    • ಭಾರತೀಯ ಸೇನೆಯಲ್ಲಿ ಹೊಸ ಇತಿಹಾಸ: ರಾಷ್ಟ್ರಪತಿಯ ADC ಆದ ಮೇಜರ್ ನವ್ಯಾ ಶೇಖಾವತ್
    • ವಿರಾಜಪೇಟೆ ಗಣೇಶೋತ್ಸವ: ಸೆ.25ರಿಂದ ವಾಹನ ಸಂಚಾರದಲ್ಲಿ ಬದಲಾವಣೆ
    • ಆನೆಕಾಡು ಅಪಘಾತದಲ್ಲಿ ದಾಖಲೆಗಳುಳ್ಳ ಬ್ಯಾಗ್ ಕಳೆದುಹೋಗಿದೆ.
    • ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರಿಗೆ ಬಸ್ ಡಿಕ್ಕಿ
    • ಬುಡಕಟ್ಟು ಕಲಾವಿದರ ಪ್ರತಿಭೆಗೆ ಜಾಗತಿಕ ವೇದಿಕೆ ಸಿಗಲಿ: ಸಂಕೇತ್ ಪೂವಯ್ಯ
    • “ವನ್ಯಜೀವಿಗಳಿಗೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು?” — ರಂಜಿ ಪೂಣಚ್ಚ ಆಕ್ರೋಶ
    • ಕಾವೇರಿ ಉಳಿವಿಗೆ ಮಳೆನೀರು ಕೊಯ್ಲು, ಮರಗಳ ಸಂರಕ್ಷಣೆ ಅಗತ್ಯ: ಬಿದ್ದಂಡ ಮಾದಯ್ಯ.
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಅಂತರರಾಷ್ಟ್ರೀಯ»ಸಿದ್ದಾಪುರದಲ್ಲಿ ಅಕ್ರಮ ಶ್ರೀಗಂಧ ಕಳವು: ಇಬ್ಬರ ಬಂಧನ, 55 ಕೆಜಿ ಗಂಧ ವಶ
    ಅಂತರರಾಷ್ಟ್ರೀಯ

    ಸಿದ್ದಾಪುರದಲ್ಲಿ ಅಕ್ರಮ ಶ್ರೀಗಂಧ ಕಳವು: ಇಬ್ಬರ ಬಂಧನ, 55 ಕೆಜಿ ಗಂಧ ವಶ

    ಸಿದ್ದಾಪುರದಲ್ಲಿ ಅಕ್ರಮ ಶ್ರೀಗಂಧ ಕಳವು: ಇಬ್ಬರ ಬಂಧನ, 55 ಕೆಜಿ ಗಂಧ ವಶ

    ಸಿದ್ದಾಪುರ: ನೆಲ್ಯಹುದಿಕೇರಿ ಗ್ರಾಮದ ಕೆ.ಎಂ. ಪ್ರಕಾಶ್ ಎಂಬುವರ ಜಾಗದಿಂದ ಅಕ್ರಮವಾಗಿ ಶ್ರೀಗಂಧದ ಮರ ಕಡಿದು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟೆ ಪೈಸಾರಿ ಗ್ರಾಮದ ನಿವಾಸಿ ಚಂದ್ರ ಎಂ.ಎಂ. (47) ಹಾಗೂ ಜಲ್ಲಕಟ್ಟೆ ಗ್ರಾಮದ ಉಮೇಶ್ ಹೆಚ್.ಪಿ. (27) ಬಂಧಿತ ಆರೋಪಿಗಳು. ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಅರಣ್ಯ ಇಲಾಖೆ ಶೋಧ ಕಾರ್ಯ ಮುಂದುವರಿಸಿದೆ.

    ಕಳವು ಮಾಡಿದ್ದ ಶ್ರೀಗಂಧದ ಮರವನ್ನು ಆರೋಪಿಗಳು ತಂದು, ಅದರ ಚಕ್ಕೆ ಹಾಗೂ ಛೇಗು ಬೇರ್ಪಡಿಸಿ ಶುಚಿಗೊಳಿಸುತ್ತಿದ್ದ ವೇಳೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ 20 ಕೆಜಿ ಗಂಧದ ಕೊರಡು, 15 ಕೆಜಿ ಗಂಧದ ತುಂಡುಗಳು ಹಾಗೂ 20 ಕೆಜಿ ಗಂಧದ ಚಕ್ಕೆ ಸೇರಿದಂತೆ ಒಟ್ಟು 55 ಕೆಜಿ ಹಸಿ ಶ್ರೀಗಂಧವನ್ನು ವಶಪಡಿಸಿಕೊಳ್ಳಲಾಗಿದೆ.

    ವಿರಾಜಪೇಟೆ ಡಿಸಿಎಫ್ ವಿನಿತಾ ಚೌಹಾಣ್ ಹಾಗೂ ಎಸಿಎಫ್ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ರಾಕೇಶ್ ಮತ್ತು ಡಿಆರ್‌ಎಫ್‌ಒ ಶಶಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು.

    ಅರಣ್ಯ ರಕ್ಷಕ ರಾಜೇಶ್, ಆರ್‌ಆರ್‌ಟಿ ತಂಡದ ರೋಷನ್, ಪ್ರದೀಪ್, ಪ್ರವೀಣ್, ನಿತಿನ್, ಮಂಜು, ಪ್ರಮೋದ್ ಹಾಗೂ ಚಾಲಕ ಸಂಜು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

    ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದೆ.

    Previous Articleಭಾರತೀಯ ಸೇನೆಯಲ್ಲಿ ಹೊಸ ಇತಿಹಾಸ: ರಾಷ್ಟ್ರಪತಿಯ ADC ಆದ ಮೇಜರ್ ನವ್ಯಾ ಶೇಖಾವತ್

    Related Posts

    ಭಾರತೀಯ ಸೇನೆಯಲ್ಲಿ ಹೊಸ ಇತಿಹಾಸ: ರಾಷ್ಟ್ರಪತಿಯ ADC ಆದ ಮೇಜರ್ ನವ್ಯಾ ಶೇಖಾವತ್

    September 21, 2026

    ವಿರಾಜಪೇಟೆ ಗಣೇಶೋತ್ಸವ: ಸೆ.25ರಿಂದ ವಾಹನ ಸಂಚಾರದಲ್ಲಿ ಬದಲಾವಣೆ

    September 21, 2026

    ಆನೆಕಾಡು ಅಪಘಾತದಲ್ಲಿ ದಾಖಲೆಗಳುಳ್ಳ ಬ್ಯಾಗ್ ಕಳೆದುಹೋಗಿದೆ.

    September 21, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ಸಿದ್ದಾಪುರದಲ್ಲಿ ಅಕ್ರಮ ಶ್ರೀಗಂಧ ಕಳವು: ಇಬ್ಬರ ಬಂಧನ, 55 ಕೆಜಿ ಗಂಧ ವಶ

    September 22, 2026

    ಭಾರತೀಯ ಸೇನೆಯಲ್ಲಿ ಹೊಸ ಇತಿಹಾಸ: ರಾಷ್ಟ್ರಪತಿಯ ADC ಆದ ಮೇಜರ್ ನವ್ಯಾ ಶೇಖಾವತ್

    September 21, 2026

    ವಿರಾಜಪೇಟೆ ಗಣೇಶೋತ್ಸವ: ಸೆ.25ರಿಂದ ವಾಹನ ಸಂಚಾರದಲ್ಲಿ ಬದಲಾವಣೆ

    September 21, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.