
ಗುಡ್ಡೆ ಹೊಸೂರು – ಅತ್ತೂರು- ಹಾರಂಗಿ ರಸ್ತೆಯಲ್ಲಿ ಜೆಲ್ಲಿ ಕಲ್ಲು ಟಿಪ್ಪರ್ ಗಳ ಹಾವಳಿ ಶಾಲಾ ಮಕ್ಕಳು ಹಾಗೂ ದ್ವಿಚಕ್ರ ಸವಾರ ರಿಗೆ ಹೈರಾಣ. -ವ್ಯವಸ್ಥೆಯ ಬಗ್ಗೆ ಹಿಡಿಶಾಪ.
ಕುಶಾಲನಗರ ತಾಲೂಕಿನ ಹಾರಂಗಿ- ಅತ್ತೂರು- ಬೊಳ್ಳೂರು- ಗುಡ್ಡೆಹೊಸೂರು ರಸ್ತೆಯ ಮಾರ್ಗವಾಗಿ ಕುಶಾಲನಗರ ಮತ್ತು ಸೋಮವಾರಪೇಟೆ ತಾಲೋಕು ಭಾಗದ ಕಲ್ಲುಕೋರೆಗಳಿಂದ ಜಿಲ್ಲೆಯ ವಿವಿಧ ಕಡೆಗಳಿಗೆ ವಿವಿಧ ಮಾದರಿಯ ಕಲ್ಲು, ಜೆಲ್ಲಿಕಲ್ಲು, ಎಂ. ಸ್ಯಾಂಡ್ ತುಂಬಿದ ಟಿಪ್ಪರ್ ಗಳ ಹಾವಳಿ ಜಾಸ್ತಿಯಾಗಿದ್ದು ಪ್ರತಿನಿತ್ಯ ನೂರಾರು ಟಿಪ್ಪರಗಳು ಓಡಾಡುತ್ತಿದ್ದು ದುರಂತವೇನೆಂದರೇ ಇಂತಹ ಟಿಪ್ಪರ್ ಲಾರಿಗಳು ಸವಾರಿ ಲೋಡ್ ಹಾಕಿಕೊಂಡು ಬೇಕಾಬಿಟ್ಟಿಯಾಗಿ ಅತೀ ವೇಗದಿಂದ ಚಾಲನೆ ಮಾಡುವುದಲ್ಲದೆ ಜೆಲ್ಲಿ ಕಲ್ಲು ಮತ್ತು ಎಂ. ಸ್ಯಾಂಡ್ ತುಂಬಿದ ಲಾರಿಯವರು ಅದನ್ನು ಕಾನೂನಿನ ಪ್ರಕಾರ ಟಾರ್ಪಲ್ ನಿಂದ ಮುಚ್ಚದೆ ರಸ್ತೆಯಲ್ಲಿ ಚೆಲ್ಲುತ್ತಾ ಸಾಗುತ್ತಿದ್ದಾರೆ. ಇದರಿಂದಾಗಿ ಈ ರಸ್ತೆಯಲ್ಲಿ ಪ್ರತಿನಿತ್ಯ ಓಡಾಡುತ್ತಿರುವ ಸಾಮಾನ್ಯ ನಾಗರಿಕರಿಗೆ ತುಂಬಾ ತೊಂದರೆಯಾಗಿರುವುದಲ್ಲದೆ ಅದೇ ಮಾರ್ಗದಲ್ಲಿರುವ ಪ್ರತಿಷ್ಠಿತ ವಿದ್ಯಾ ಸಂಸ್ಥೆಗೆ ನೂರಾರು ಶಾಲಾಮಕ್ಕಳನ್ನು ಕರೆತರುವ ವಾಹನಗಳು ಮತ್ತು ಪ್ರತಿನಿತ್ಯ ಕೆಲಸಕಾರ್ಯಗಳಿಗೆ ಓಡಾಡುವ ದ್ವಿ ಚಕ್ರ ವಾಹನ ಚಾಲಕರಿಗೆ ತುಂಬಾ ತೊಂದರೆಯಾಗಿರುವುದಲ್ಲದೆ ಇಂತಹ ಲಾರಿಗಳಿಂದ ಹೊರ ಬರುತ್ತಿರುವ ದೂಳು ಮತ್ತು ಹರಳು ರೂಪದ ಕಲ್ಲುಗಳು ನೇರವಾಗಿ ಸಾರ್ವಜನಿಕರ ಮತ್ತು ಪುಟಾಣಿ ಮಕ್ಕಳ ಕಣ್ಣಿಗೆ ಬಡಿಯುವ ರಭಸಕ್ಕೆ ಕಣ್ಣು ಹಾನಿಯಾಗುವುದಲ್ಲದೆ ಲಾರಿಯ ಹಿಂಬದಿ ಮತ್ತು ಸೈಡ್ ಗಳಿಂದ ಸುರಿಯುವ ದೂಳು ನೇರವಾಗಿ ವ್ಯಕ್ತಿಯ ದೇಹಕ್ಕೆ ಬೀಳುತ್ತಿದ್ದು ಇದರಿಂದ ಅಸ್ತಮಾ, ಅಲರ್ಜಿ, ಕೆಮ್ಮು ಮುಂತಾದ ರೋಗ ಉಲ್ಬಣಗೊಳ್ಳುವುದಲ್ಲದೆ ಓಡಾಡುವ ವಾಹನಗಳು ಸಹ ಅಪಘಾತಕ್ಕೂಳಗಾಗುವ ಮತ್ತು ತಾರು ರಸ್ತೆಯಲ್ಲಿ ಅಲ್ಲಲ್ಲಿ ಜೆಲ್ಲಿ ಕಲ್ಲುಗಳು ಬೀಳುತ್ತಿರುವುದರಿಂದ ರಸ್ತೆ ಮೂಲಕ ಸಂಚರಿಸುವ ಬೈಕ್ ಗಳು ಸ್ಕಿಡ್ ಆಗಿ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ( ಬಿದ್ದು ಕೈ ಕಾಲು ಮುರಿದುಕೊಂಡು ವ್ಯವಸ್ಥೆಗೆ ಹಡಿ ಶಾಪ ಹಾಕಿ ಅಸಾಯಕತೆಯಿಂದ ಮನೆಗೆ ಹೋದವರು ಆನೇಕರಿದ್ದಾರೆ) ಅಲ್ಲದೆ ಕೆಲವು ಚಾಲಕರು ದರ್ಪದಿಂದ ವರ್ತಿಸುವುದಲ್ಲದೆ ” ನಾವು ಟಾರ್ಪಲ್ ಹಾಕಲ್ಲ ಬೈಕಲ್ಲಿ ಓಡಾಡುವವರು ಬೇಕಾದ್ರೆ ಹೆಲ್ಮೆಟ್ ಹಾಕೊಂಡು ಓಡಾಡಲಿ ಅದು ಅವರ ಹಣೆ ಬರಹ ” ಸ್ಕೂಲ್ ಬಸ್ ಗೆ ಸೈಡ್ ಗ್ಲಾಸ್ ಇಲ್ವಾ ಹಾಕೊಳಿ ಎಂದು ಹೇಳುವಷ್ಟು ಕೊಬ್ಬಿರುತ್ತಾರೆ”
ಮೊದಲೇ ಟ್ರಿಪ್ ಶೀಟ್ ಇಲ್ಲದೆ ರಾಯಲ್ಟಿ ಕಟ್ಟದೆ ಸರ್ಕಾರಕ್ಕೆ ಮೋಸ ಮಾಡಿ ದೋಖಾ ನಂಬರ್ ಬ್ಯುಸಿನೆಸ್ ಮಾಡುತ್ತಾ ಕಳ್ಳದಾರಿಯಲ್ಲಿ ಬರಲು ಈ ಮಾರ್ಗವನ್ನು ಬಳಸುತ್ತಿರುವುದಲ್ಲದೆ ಭ್ರಷ್ಟ ವ್ಯವಸ್ಥೆಯಿಂದಾಗಿ ಯಾವನೋ ಒಬ್ಬಿಬ್ಬರು ಕೋಟ್ಯಾಂತರ ರೂಪಾಯಿ ಗಳ್ಳನ್ನು ಸಂಪಾದಿಸಲು ಅದಕ್ಕೆ ಸಾಥ್ ನೀಡುವ ಭ್ರಷ್ಟ ವ್ಯವಸ್ಥೆಯಿಂದಾಗಿ ಸಾಮಾನ್ಯ ನಾಗರೀಕರು ಮತ್ತು ಶಾಲಾ ಮಕ್ಕಳು ದಿನನಿತ್ಯ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹಾರಂಗಿಗೆ ದಿನನಿತ್ಯ ಬೇರೆ ಬೇರೆ ಕಡೆಗಳಿಂದ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದು ಹೆಚ್ಚಿನ ವಾಹನ ಓಡಾಟವಿರುವ ರಸ್ತೆಯಾಗಿದ್ದು ಇಂತಹ ಭಾರೀ ತೂಕದ ಟಿಪ್ಪರ್ ಲಾರಿಗಳ ಓಡಾಟದ ಹಾವಳಿಯಿoದಾಗಿ ರಸ್ತೆಯು ಸಹ ಹದಗೆಟ್ಟಿದ್ದು ಅಲ್ಲಲ್ಲಿ ಹೊಂಡದಂತಹ ಗುಂಡಿಗಳಾಗಿದ್ದು ಅದರ ನಡುವೆ ಈ ದೂಳಿನ ನರಕವನ್ನು ಸಹ ಅನುಭವಿಸುವoತಾಗಿರುವುದು ದೊಡ್ಡ ದುರಂತವೇ ಸರಿ.
ಇಂತಹ ಲಾರಿಗಳ ಚಾಲಕರಲ್ಲಿ ಹಲವರಿಗೆ ಸರಿಯಾದ ಡ್ರೈವಿಂಗ್ ಲೈಸನ್ಸ್ ಇಲ್ಲ ಕೆಲವರು ಕ್ಲಿನರ್ ಗೆ ಗಾಡಿ ಕೊಟ್ಟು ಮೊಬೈಲ್ ನಲ್ಲಿ ಬ್ಯುಸಿಯಾಗ್ತಾರೆ. ಇನ್ನು ಕೆಲವರು ಹೆದ್ದಾರಿ ರಸ್ತೆ ತಲುಪಿದ ತಕ್ಷಣ ಸಿಗುವ ಬಾರ್ ಗಳಲ್ಲಿ ಸಣ್ಣ ವಿಶ್ರಾಂತಿ ಪಡೆಯಲು ತೆರಳುವ ದೃಶ್ಯ ಕಾಣ ಸಿಗುತ್ತಿದ್ದು ಮತ್ತೆ ಕೈಲ್ಲೊಂದು ಸಿಗರೇಟ್ ಇಲ್ಲದೆ ಗಾಡಿ ಮೂವ್ ಆಗೋದೇ ಇಲ್ಲ ಎಂಬಂತಹ ಪರಿಸ್ಥಿತಿ ಇದೆ.
ಸಂಬಂಧಪಟ್ಟವರು ಇನ್ನಾದರು ಎಚ್ಛೆಟ್ಟುಕೊಂಡು ಇಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಈ ಭಾಗದ ನಿವಾಸಿಗಳ ನ್ಯಾಯಯುತ ಬೇಡಿಕೆಯಾಗಿರುತ್ತದೆ.

