Close Menu
Kodagu News
    ಹೊಸ ಸುದ್ದಿ

    ಸ್ಟೀಲ್ ರೋಪ್ ಬ್ಯಾರಿಕೇಡ್‌ಗೆ ಅಭಿಮನ್ಯುವಿನಿಂದ ಪ್ರಾಯೋಗಿಕ ಪರೀಕ್ಷೆ

    October 6, 2026

    ಮಡಿಕೇರಿಯಲ್ಲಿ ಲೋಕಾಯುಕ್ತ ದಾಳಿ: ₹25 ಸಾವಿರ ಲಂಚ ಪಡೆಯುವಾಗ ಜಿಲ್ಲಾ ವಿಮಾ ಅಧಿಕಾರಿ ಲೋಕಾಯುಕ್ತ ಬಲೆಗೆ

    October 5, 2026

    ವಿರಾಜಪೇಟೆ ವಿದ್ಯುತ್ ದುರಂತ: ಗಾಯಗೊಂಡಿದ್ದ ಯುವಕ ಸಾವು

    October 5, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ಸ್ಟೀಲ್ ರೋಪ್ ಬ್ಯಾರಿಕೇಡ್‌ಗೆ ಅಭಿಮನ್ಯುವಿನಿಂದ ಪ್ರಾಯೋಗಿಕ ಪರೀಕ್ಷೆ
    • ಮಡಿಕೇರಿಯಲ್ಲಿ ಲೋಕಾಯುಕ್ತ ದಾಳಿ: ₹25 ಸಾವಿರ ಲಂಚ ಪಡೆಯುವಾಗ ಜಿಲ್ಲಾ ವಿಮಾ ಅಧಿಕಾರಿ ಲೋಕಾಯುಕ್ತ ಬಲೆಗೆ
    • ವಿರಾಜಪೇಟೆ ವಿದ್ಯುತ್ ದುರಂತ: ಗಾಯಗೊಂಡಿದ್ದ ಯುವಕ ಸಾವು
    • 44 ವರ್ಷಗಳ ಕಾಯುವಿಕೆಗೆ ಅಂತ್ಯ: ಚಿನ್ನ ಗೆದ್ದ ಭಾರತದ ಮಹಿಳಾ ಹಾಕಿ ತಂಡ
    • ವಿರಾಜಪೇಟೆಯಲ್ಲಿ ಸ್ಮರಣೀಯ ಹೆಜ್ಜೆ: ಮಾತಂಡ ಮೊಣ್ಣಪ್ಪ ಹೆಸರಿನಲ್ಲಿ ರಸ್ತೆ
    • ನಿರ್ಗತಿಗರ ನೆರವಿಗೆ ನಿಂತ ಕರವೇ.
    • ನಿಗದಿತ ಮಿತಿಮೀರಿಸಿ ಮರದ ದಿಮ್ಮಿ ಸಾಗಾಟ: 5 ಲಾರಿ ವಶ, ₹2.97 ಲಕ್ಷ ದಂಡ
    • ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಟ್ಟು ನಿಂತ ಲಾರಿ: ವಾಹನ ಸವಾರರಿಗೆ ಕಿರಿಕಿರಿ
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಅಡುಗೆ ಮನೆ»ನಿರ್ಗತಿಗರ ನೆರವಿಗೆ ನಿಂತ ಕರವೇ.
    ಅಡುಗೆ ಮನೆ

    ನಿರ್ಗತಿಗರ ನೆರವಿಗೆ ನಿಂತ ಕರವೇ.

    Updated:October 1, 2026

    ಕುಶಾಲನಗರ: ಜಾತ್ರೆ ಮೈದಾನದ ಗುಡಿಸಲು ನಿವಾಸಿಗಳ ನೆರವಿಗೆ ಧಾವಿಸಿದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ, ದಾನಿಗಳ ಸಹಕಾರದೊಂದಿಗೆ ಎಂಟು ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿ ಹಾಗೂ ತರಕಾರಿ ಕಿಟ್‌ಗಳನ್ನು ವಿತರಿಸಿ ಮಾನವೀಯತೆ ಮೆರೆದಿದೆ.

    ಕುಶಾಲನಗರದ ಜಾತ್ರೆ ಮೈದಾನದಲ್ಲಿ ಕಳೆದ 18–20 ವರ್ಷಗಳಿಂದ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿರುವ ಈ ಕುಟುಂಬಗಳು ದಿನಗೂಲಿ ಕೆಲಸವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿವೆ. ಅತ್ಯಂತ ಕಡುಬಡತನದಲ್ಲಿ ಬದುಕುತ್ತಿರುವ ಕುಟುಂಬಗಳ ಸಂಕಷ್ಟ ಅರಿತ ಕರವೇ ಸ್ವಾಭಿಮಾನಿ ಸೇನೆ, ದಾನಿಗಳ ಸಹಕಾರದೊಂದಿಗೆ ಆಹಾರ ಸಾಮಗ್ರಿ ಮತ್ತು ತರಕಾರಿ ಕಿಟ್‌ಗಳನ್ನು ವಿತರಿಸಿತು.

    ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಸ್ವಾಭಿಮಾನಿ ಸೇನೆ ಕೊಡಗು ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಕಳೆದ ಎರಡು ದಶಕಗಳಿಂದ ಕಷ್ಟದ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಕುಟುಂಬಗಳಿಗೆ ನೆರವು ನೀಡುತ್ತಿರುವುದು ಸಂತಸ ತಂದಿದೆ. ನಿಜವಾದ ನಿರ್ಗತಿಕರಿಗೆ ನೆರವಿನ ಹಸ್ತ ಚಾಚುವುದು ಸಂಘಟನೆಯ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದರು.

    ಬಡವರ ಕಲ್ಯಾಣಕ್ಕಾಗಿ ಸಂಘಟನೆಯಿಂದ ನೆರವು ಕೋರಿದಾಗಲೆಲ್ಲ ತಕ್ಷಣ ಸ್ಪಂದಿಸುತ್ತಿರುವ ಕೂಪರ್ ಎಸ್ಟೇಟ್ ಮಾಲೀಕ ನಿಶಾಂತ್ ಅವರನ್ನು ಫ್ರಾನ್ಸಿಸ್ ಡಿಸೋಜ ಇದೇ ವೇಳೆ ವಿಶೇಷವಾಗಿ ಸ್ಮರಿಸಿ, ಅವರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.

    ಆಹಾರ ಕಿಟ್ ಪಡೆದ ಗುಡಿಸಲು ನಿವಾಸಿಯೊಬ್ಬರು ಮಾತನಾಡಿ, ದಿನನಿತ್ಯದ ಊಟಕ್ಕೂ ಕಷ್ಟಪಡುತ್ತಿದ್ದ ನಮಗೆ ಈ ನೆರವು ಬಹಳಷ್ಟು ಸಂತಸ ತಂದಿದೆ. ನಮ್ಮ ಕಷ್ಟವನ್ನು ಅರಿತು ತಾವಾಗಿಯೇ ಬಂದು ಆಹಾರ ಸಾಮಗ್ರಿ ನೀಡಿದ ಕರವೇ ಸ್ವಾಭಿಮಾನಿ ಸೇನೆ ಹಾಗೂ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.

    ಕಾರ್ಯಕ್ರಮದಲ್ಲಿ ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾ ಉಪಾಧ್ಯಕ್ಷ ರಾಜಶೇಖರ್ ಗೌಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಯಶ್ರೀ ಮುರುಗೇಶ್, ಜಿಲ್ಲಾ ಗೌರವಾಧ್ಯಕ್ಷ ನಂಜಪ್ಪ, ಕುಶಾಲನಗರ ತಾಲೂಕು ಅಧ್ಯಕ್ಷ ಶಿವು, ಕಾರ್ಮಿಕ ಘಟಕದ ಅಧ್ಯಕ್ಷ ಚಂದ್ರ, ತಾಲೂಕು ಉಪಾಧ್ಯಕ್ಷ ನಾಸಿರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಣಿಕಂಠ, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಭವ್ಯ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಖಾಸಿಂ, ರಾಜ್ಯೋತ್ಸವ ಖಜಾಂಜಿ ಅಂತೋನಿ, ತಾಲೂಕು ಮಹಿಳಾ ಘಟಕದ ಉಪಾಧ್ಯಕ್ಷೆ ದಿವ್ಯ ಡಿಸೋಜ, ತಾಲೂಕು ಗೌರವಾಧ್ಯಕ್ಷೆ ನಾಗರತ್ನ, ತಾಲೂಕು ಸಂಚಾಲಕ ವಿ.ಪಿ. ಚಂದ್ರಶೇಖರ್, ವಿಲ್ಸನ್, ಚಂದ್ರು, ಡ್ಯಾನಿಯಲ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

    Previous Articleನಿಗದಿತ ಮಿತಿಮೀರಿಸಿ ಮರದ ದಿಮ್ಮಿ ಸಾಗಾಟ: 5 ಲಾರಿ ವಶ, ₹2.97 ಲಕ್ಷ ದಂಡ
    Next Article ವಿರಾಜಪೇಟೆಯಲ್ಲಿ ಸ್ಮರಣೀಯ ಹೆಜ್ಜೆ: ಮಾತಂಡ ಮೊಣ್ಣಪ್ಪ ಹೆಸರಿನಲ್ಲಿ ರಸ್ತೆ

    Related Posts

    ಸ್ಟೀಲ್ ರೋಪ್ ಬ್ಯಾರಿಕೇಡ್‌ಗೆ ಅಭಿಮನ್ಯುವಿನಿಂದ ಪ್ರಾಯೋಗಿಕ ಪರೀಕ್ಷೆ

    October 6, 2026

    ಮಡಿಕೇರಿಯಲ್ಲಿ ಲೋಕಾಯುಕ್ತ ದಾಳಿ: ₹25 ಸಾವಿರ ಲಂಚ ಪಡೆಯುವಾಗ ಜಿಲ್ಲಾ ವಿಮಾ ಅಧಿಕಾರಿ ಲೋಕಾಯುಕ್ತ ಬಲೆಗೆ

    October 5, 2026

    ವಿರಾಜಪೇಟೆ ವಿದ್ಯುತ್ ದುರಂತ: ಗಾಯಗೊಂಡಿದ್ದ ಯುವಕ ಸಾವು

    October 5, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ಸ್ಟೀಲ್ ರೋಪ್ ಬ್ಯಾರಿಕೇಡ್‌ಗೆ ಅಭಿಮನ್ಯುವಿನಿಂದ ಪ್ರಾಯೋಗಿಕ ಪರೀಕ್ಷೆ

    October 6, 2026

    ಮಡಿಕೇರಿಯಲ್ಲಿ ಲೋಕಾಯುಕ್ತ ದಾಳಿ: ₹25 ಸಾವಿರ ಲಂಚ ಪಡೆಯುವಾಗ ಜಿಲ್ಲಾ ವಿಮಾ ಅಧಿಕಾರಿ ಲೋಕಾಯುಕ್ತ ಬಲೆಗೆ

    October 5, 2026

    ವಿರಾಜಪೇಟೆ ವಿದ್ಯುತ್ ದುರಂತ: ಗಾಯಗೊಂಡಿದ್ದ ಯುವಕ ಸಾವು

    October 5, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.