ಮೈಸೂರು: ಅರಮನೆಯ ಅಂಗಳದಲ್ಲಿರುವ ಬೀಡಾರದಲ್ಲಿ ರಾಜಗಾಂಭೀರ್ಯದಿಂದ ಕಂಗೊಳಿಸುತ್ತಿರುವ ಗಜಪಡೆಗೆ ನೀಡಲಾಗುತ್ತಿರುವ ಪೌಷ್ಟಿಕ ಆಹಾರ ಹಾಗೂ ಅವುಗಳ ಆರೋಗ್ಯ ನಿರ್ವಹಣೆಯ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ಈ ವೇಳೆ ಗಜಪಡೆಗೆ ಪ್ರತಿದಿನ ನೀಡಲಾಗುವ ಆಹಾರದ ಪ್ರಮಾಣ, ಪೌಷ್ಟಿಕಾಂಶಯುಕ್ತ ಆಹಾರ ಪದ್ಧತಿ ಹಾಗೂ ಆನೆಗಳ ಆರೋಗ್ಯ ಕಾಪಾಡಲು ಕೈಗೊಳ್ಳಲಾಗುತ್ತಿರುವ ವಿಶೇಷ ಆರೈಕೆ ಕ್ರಮಗಳ ಕುರಿತು ವಿವರಿಸಲಾಯಿತು.

ಗಜಪಡೆಯ ಆರೋಗ್ಯ, ಸಾಮರ್ಥ್ಯ ಮತ್ತು ಕ್ಷೇಮವನ್ನು ಕಾಪಾಡುವ ನಿಟ್ಟಿನಲ್ಲಿ ಪೌಷ್ಟಿಕ ಆಹಾರ ಪ್ರಮುಖ ಪಾತ್ರ ವಹಿಸುತ್ತಿದ್ದು, ಈ ಸಂಬಂಧ ಅಧಿಕಾರಿಗಳು ಅಗತ್ಯ ಮಾಹಿತಿಯನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಸಿಎಫ್ ರವಿಶಂಕರ್, ಡಿಸಿಎಫ್ ಪ್ರಭುಗೌಡ, ಪಶುವೈದ್ಯ ಡಾ. ಆದರ್ಶ್, ಆರ್‌ಎಫ್‌ಒ ಯಾಶ್ಮ ಸೇರಿದಂತೆ ಅರಣ್ಯ ಇಲಾಖೆಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version