ಅಶೋಕ್_ಮಡಿಕೇರಿ
ಕುಶಾಲನಗರ: ರಾಜ್ಯ ಹೆದ್ದಾರಿಗಳಲ್ಲಿನ ಹಂಪ್ಗಳಿಗೆ ಬಣ್ಣವಿಲ್ಲದೆ ವಾಹನ ಚಾಲಕರಿಗೆ ಅಪಾಯ ಎದುರಾಗುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಕೊಡಗು ಜಿಲ್ಲಾ ಘಟಕ ಸಾಮಾಜಿಕ ಕಳಕಳಿಯಿಂದ ರಸ್ತೆಗಿಳಿದಿದೆ.
ಮೈಸೂರು–ಕುಶಾಲನಗರ ಮುಖ್ಯ ಹೆದ್ದಾರಿ ಸೇರಿದಂತೆ ಕುಶಾಲನಗರ ತಾಲೂಕಿನ ಪ್ರಮುಖ ರಸ್ತೆಗಳಲ್ಲಿ ಒಟ್ಟು ಆರು ಹಂಪ್ಗಳಿಗೆ ಸ್ವತಃ ಬಿಳಿ ಬಣ್ಣ ಬಳಿದು ವಾಹನ ಚಾಲಕರಿಗೆ ಹಂಪ್ಗಳು ದೂರದಿಂದಲೇ ಗೋಚರಿಸುವಂತೆ ಮಾಡಲಾಗಿದೆ.
ಬೈಲಕುಪ್ಪೆಯ ಗೋಲ್ಡನ್ ಟೆಂಪಲ್ಗೆ ತೆರಳುವ ರಸ್ತೆಯ ಬಳಿಯ ಹೆದ್ದಾರಿ ಹಂಪ್, ಕುಶಾಲನಗರ ಹಳೆ ಮಾರ್ಕೆಟ್ ರಸ್ತೆಯ ಎರಡು ಹಂಪ್ಗಳು, ಐಬಿ ರಸ್ತೆಯ ಎರಡು ಹಂಪ್ಗಳು ಹಾಗೂ ಸೋಮವಾರಪೇಟೆ ಮುಖ್ಯ ರಸ್ತೆಯ ಒಂದು ಹಂಪ್ಗೆ ಬಣ್ಣ ಬಳಿಯಲಾಗಿದೆ.
ಸರಣಿ ಅಪಘಾತಗಳ ಬಗ್ಗೆ ಸಾರ್ವಜನಿಕರಿಂದ ಬರುತ್ತಿದ್ದ ದೂರುಗಳಿಗೆ ಸ್ಪಂದಿಸಿ ಕೈಗೊಂಡ ಈ ಕಾರ್ಯಕ್ಕೆ ಸ್ಥಳೀಯ ಸಾರ್ವಜನಿಕರು ಹಾಗೂ ವಾಹನ ಚಾಲಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಜಿಲ್ಲಾ ಉಪಾಧ್ಯಕ್ಷ ರಾಜಶೇಖರ್ ಗೌಡ, ಗೌರವಾಧ್ಯಕ್ಷ ಚಂದ್ರು, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಯಶ್ರೀ ಮುರುಗೇಶ್, ಪ್ರಚಾರ ಸಮಿತಿ ಅಧ್ಯಕ್ಷ ಫ್ರೆಡ್ಡಿ, ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಎಸ್. ಶಿವ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದ
ರು.

