Close Menu
Kodagu News
    ಹೊಸ ಸುದ್ದಿ

    ಹಬ್ಬದ ಸಂಭ್ರಮಕ್ಕೆ ಶಬ್ದದ ಕಿರಿಕಿರಿ ಬೇಡ: ‘ಪ್ರೆಶರ್ ಮೈಕ್’ ನಿಷೇಧ

    September 11, 2026

    ಮಡಿಕೇರಿಯಲ್ಲಿ ಸಾವಿರಾರು ರೈತರ ಬೃಹತ್ ಪ್ರತಿಭಟನಾ ಮೆರವಣಿಗೆ

    September 11, 2026

    ಕೊಡಗಿನಲ್ಲೂ ಮುಂದುವರೆದ ಹೊಸ ಟ್ರೆಂಡ್: ಅಂದಿನ ಕಾಲ ನೋಡದವರೇ ಇಂದು 80ರ ದಶಕದ ಫೋಟೋಗಳಲ್ಲಿ ಮಿಂಚಿಂಗ್

    September 10, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ಕರಿಕೆ ಗಡಿಯಲ್ಲಿ ಕಡವೆ ಬೇಟೆ: ನಾಡ ಬಂದೂಕು, 40 ಕೆಜಿ ಮಾಂಸ ವಶ
    • ಹಬ್ಬದ ಸಂಭ್ರಮಕ್ಕೆ ಶಬ್ದದ ಕಿರಿಕಿರಿ ಬೇಡ: ‘ಪ್ರೆಶರ್ ಮೈಕ್’ ನಿಷೇಧ
    • ಮಡಿಕೇರಿಯಲ್ಲಿ ಸಾವಿರಾರು ರೈತರ ಬೃಹತ್ ಪ್ರತಿಭಟನಾ ಮೆರವಣಿಗೆ
    • ಕೊಡಗಿನಲ್ಲೂ ಮುಂದುವರೆದ ಹೊಸ ಟ್ರೆಂಡ್: ಅಂದಿನ ಕಾಲ ನೋಡದವರೇ ಇಂದು 80ರ ದಶಕದ ಫೋಟೋಗಳಲ್ಲಿ ಮಿಂಚಿಂಗ್
    • ಕೊಡಗು ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಧರ್ಮಜ ಉತ್ತಪ್ಪ ಮುಂದುವರಿಕೆ
    • ಸಾಮರಸ್ಯದ ಕೊಡಗಿಗೆ ಬೆಂಕಿ ಹಚ್ಚುತ್ತಿರುವವರು ಯಾರು?
    • ಲಂಡನ್‌ನಲ್ಲಿ ಕೊಡಗಿನ ಕೊನೆಯ ರಾಜನ ನೆನಪು: ಚಿಕ್ಕವೀರ ರಾಜೇಂದ್ರ ವಾಸಿಸಿದ್ದ ಮನೆಗೆ ಬ್ಲೂ ಪ್ಲೇಕ್‌
    • ಸಿದ್ದಾಪುರ–ಒಂಟಿಅಂಗಡಿ ರಸ್ತೆ ಅಭಿವೃದ್ಧಿಗೆ ಚಾಲನೆ: ₹3 ಕೋಟಿ ವೆಚ್ಚದ ಸಿಮೆಂಟ್ ಕಾಂಕ್ರೀಟ್ ರಸ್ತೆ ಕಾಮಗಾರಿ
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»Uncategorized»ಪೆರುಂಬಾಡಿ ಚೆಕ್‌ಪೋಸ್ಟ್ ಗಲಾಟೆ: ಚೆತ್ತು ಕಲ್ಲು ಲಾರಿಗಳ ಹಿಂದಿನ ನಿಗೂಢ ಕಲೆಕ್ಷನ್ ಕಥೆ ಏನು?
    Uncategorized

    ಪೆರುಂಬಾಡಿ ಚೆಕ್‌ಪೋಸ್ಟ್ ಗಲಾಟೆ: ಚೆತ್ತು ಕಲ್ಲು ಲಾರಿಗಳ ಹಿಂದಿನ ನಿಗೂಢ ಕಲೆಕ್ಷನ್ ಕಥೆ ಏನು?

    Updated:September 2, 2026

    ಸುರೇಶ್ ಬಿಳಿಗೇರಿ

    ಮಡಿಕೇರಿ: ಪೆರುಂಬಾಡಿ ಚೆಕ್‌ಪೋಸ್ಟ್‌ನಲ್ಲಿ ಇತ್ತೀಚೆಗೆ ನಡೆದ ಗಲಾಟೆ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೇರಳದಿಂದ ಮಾಕುಟ್ಟ ಮಾರ್ಗವಾಗಿ ಕರ್ನಾಟಕಕ್ಕೆ ಪ್ರತಿದಿನ ಸುಮಾರು 40 ರಿಂದ 55 ಲಾರಿಗಳಲ್ಲಿ ‘ಚೆತ್ತು ಕಲ್ಲು’ ಸಾಗಾಟವಾಗುತ್ತಿದೆ ಎಂಬ ಆರೋಪದ ನಡುವೆ, ಈ ವಾಹನಗಳ ಸಂಚಾರಕ್ಕೆ ಸಂಬಂಧಿಸಿದಂತೆ ನಡೆಯುತ್ತಿದೆ ಎನ್ನಲಾದ ನಿಗೂಢ ಹಣದ ವಸೂಲಿಯೇ ಈಗ ಕೊಡಗಿನ ಚರ್ಚೆಯ ಕೇಂದ್ರಬಿಂದುವಾಗಿದೆ.

    ಮೂಲಗಳ ಪ್ರಕಾರ, ಕೇರಳದಿಂದ ಈ ರೀತಿಯ ಕಲ್ಲುಗಳನ್ನು ಕರ್ನಾಟಕಕ್ಕೆ ಸಾಗಿಸಲು ಕಾನೂನಾತ್ಮಕವಾಗಿ ನಿರ್ಬಂಧಗಳಿವೆ. ಆದರೆ ಮನೆ ನಿರ್ಮಾಣ ಸೇರಿದಂತೆ ಸ್ಥಳೀಯ ಕಟ್ಟಡ ನಿರ್ಮಾಣಗಳ ಅಗತ್ಯಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ, ಯಾವುದೇ ಲಿಖಿತ ಆದೇಶವಿಲ್ಲದೆ ಒಂದು ರೀತಿಯ ಮೌಖಿಕ ಒಪ್ಪಂದದ ಆಧಾರದಲ್ಲಿ ವಾಹನಗಳ ಸಂಚಾರಕ್ಕೆ ಈ ಹಿಂದೆಯಿಂದಲೂ ಅವಕಾಶ ಕಲ್ಪಿಸಲಾಗುತ್ತಿತ್ತು ಎಂಬುವುದು ಸತ್ಯ.

    ಆದರೆ ಇದರ ಹಿಂದೆ ಹಣದ ವಸೂಲಿಯ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆಯೇ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ. ಈ ಹಿಂದಿನಿಂದಲೂ ಪ್ರತಿ ಲಾರಿಗೆ ನಿಗದಿತ ಮೊತ್ತವನ್ನು ಪಡೆಯಲಾಗುತ್ತಿತ್ತು ಎಂಬ ಆರೋಪಗಳಿದ್ದು, ತಿಂಗಳಿಗೆ ಒಂದು ಲಾರಿಗೆ ಸುಮಾರು ₹5,500 ನೀಡಬೇಕೆಂಬ ‘ಅಲಿಖಿತ ನಿಯಮ’ ಜಾರಿಯಲ್ಲಿತ್ತು ಎನ್ನಲಾಗಿದೆ. ಇದೀಗ ಈ ಮೊತ್ತಕ್ಕೆ ಹೆಚ್ಚುವರಿಯಾಗಿ ಸುಮಾರು ₹3,000 ಸೇರಿಸಿ ₹8,500ಕ್ಕೆ ಏರಿಸಲಾಗಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಇದು ಹೆಚ್ಚುವರಿ ಮಾಡಿದ್ಯಾರು ಎಂಬುವುದು ನಿಗೂಢ.

    ಆದರೆ ಲಾರಿ ಚಾಲಕರಿಂದ ಹಣವನ್ನು ಯಾರು ಸಂಗ್ರಹಿಸುತ್ತಾರೆ? ಯಾರಿಗೆ ತಲುಪಿಸುತ್ತಾರೆ? ಯಾವ ಉದ್ದೇಶಕ್ಕೆ ಬಳಸಲಾಗುತ್ತದೆ? ಎಂಬ ಪ್ರಶ್ನೆಗಳಿಗೆ ಇದುವರೆಗೂ ಸ್ಪಷ್ಟ ಅಲ್ಲ ಉತ್ತರವೇ ಸಿಕ್ಕಿಲ್ಲ.

    ಕೆಲವರು ಈ ಹಣ ಆಡಳಿತ ಪಕ್ಷದ ಪ್ರಭಾವಿ ರಾಜಕೀಯ ವ್ಯಕ್ತಿಗಳ ಕೈ ಸೇರುತ್ತದೆ ಎಂದು ಆರೋಪಿಸಿದರೆ, ಇನ್ನೂ ಕೆಲವರು ಪೊಲೀಸ್ ಅಧಿಕಾರಿಗಳು ಸೇರಿದಂತೆ ವಿವಿಧ ಹಂತಗಳಿಗೆ ಹಂಚಿಕೆಯಾಗುತ್ತಿದೆ ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಆರೋಪಗಳಿಗೆ ಅಧಿಕೃತ ದಾಖಲೆ ಅಥವಾ ದೃಢೀಕರಣ ಯಾವುದು ಸದ್ಯಕ್ಕಿಲ್ಲ.

    ಇದೇ ವಿಚಾರ ಸ್ಥಳೀಯ ಜನಪ್ರತಿನಿಧಿಗಳ ಹೆಸರಿಗೂ ಕಳಂಕ ತರುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಕೆಲ ದಿನಗಳ ಹಿಂದೆ ಕಾಂಗ್ರೆಸ್ ಮುಖಂಡರೊಬ್ಬರು ಪೆರುಂಬಾಡಿ ಚೆಕ್‌ಪೋಸ್ಟ್‌ಗೆ ತೆರಳಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. “ನಿಮ್ಮ ನಡೆ-ನುಡಿಯಿಂದ ನಮ್ಮ ಶಾಸಕರ ಹೆಸರೇ ಹಾಳಾಗುತ್ತಿದೆ” ಎಂದು ಎಚ್ಚರಿಕೆ ನೀಡಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. “ನೀವು ಪಡೆಯುವ ಹಣದಿಂದ ನಮಗೆ ಸಾಮಾನ್ಯರು ಕಿರಿ ಕಿರಿ ಮಾಡುತ್ತಾರೆ” ಎಂದು ಚೆಕ್ಪೋಸ್ಟ್ ನಲ್ಲಿ ಸಣ್ಣ ರಂಪಾಟವೂ ಆಗಿತ್ತು..

    ಈ ಹಿಂದೆ ಸುಮಾರು ₹45ಕ್ಕೆ ದೊರೆಯುತ್ತಿದ್ದ ಇಟ್ಟಿಗೆಯ ಬೆಲೆ ಏಕಾಏಕಿ ₹62ಕ್ಕೆ ಏರಿಕೆಯಾಗಿದೆ. ಅನಧಿಕೃತ ವಸೂಲಿ ಮತ್ತು ಮಧ್ಯವರ್ತಿಗಳ ಹಸ್ತಕ್ಷೇಪವೇ ಬೆಲೆ ಏರಿಕೆಗೆ ಕಾರಣ ಎಂಬ ಆರೋಪವೂ ಕೇಳಿಬಂದಿದೆ. ಅಂತಿಮವಾಗಿ ಇದರ ಹೊರೆ ಮನೆ ಕಟ್ಟುವ ಸಾಮಾನ್ಯ ಜನರ ಮೇಲೆಯೇ ಬೀಳುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

    ಇಲ್ಲಿ ಮತ್ತೊಂದು ಮಹತ್ವದ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿಗಳು ಮತ್ತು ಪೊಲೀಸರು ಇದ್ದರೂ, ಕಾನೂನುಬದ್ಧವಾಗಿ ಸಾಗುತ್ತಿರುವ ಅಥವಾ ಸಾಗಾಟಕ್ಕೆ ಅವಕಾಶ ನೀಡಲಾಗಿರುವ ವಾಹನಗಳನ್ನು ತಡೆಯುವ ಅಧಿಕಾರ ಸಾರ್ವಜನಿಕರಿಗೆ ಯಾರು ನೀಡಿದ್ದು? ಅಧಿಕಾರಿಗಳ ತಪ್ಪಿದ್ದರೆ ಅವರದೇ ಸರಕಾರ ಇರುವಾಗ ಕ್ರಮ ಜರುಗಿಸಬಹುದಿತ್ತಲ್ಲವೇ ಎಂಬ ಪ್ರಶ್ನೆಯೂ ಇಲ್ಲಿ ಕೇಳಿ ಬಂದಿದೆ. ಪಕ್ಷದ ಮುಖಂಡರೊಬ್ಬರು ವಾಹನಗಳನ್ನು ತಡೆದು ಹಣ ವಸೂಲಿ ಮಾಡುವ ವ್ಯವಸ್ಥೆಗೆ ಅನುಮತಿ ನೀಡಿದವರು ಯಾರು?

    ಒಂದು ಕಡೆ ಇದನ್ನು “ಕಲೆಕ್ಷನ್ ಪಾಯಿಂಟ್” ಎಂದು ಕರೆಯಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದ್ದರೆ, ಮತ್ತೊಂದು ಕಡೆ ಸಾರ್ವಜನಿಕವಾಗಿ ವಾಹನಗಳನ್ನು ತಡೆದು ಹಣ ಪಡೆಯುವ ಪರಿಸ್ಥಿತಿ ಏಕೆ ನಿರ್ಮಾಣವಾಯಿತು ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

    ಮನೆ ಕಟ್ಟುವ ಜನರ ಅನುಕೂಲಕ್ಕಾಗಿ ಆರಂಭವಾಯಿತು ಎನ್ನಲಾಗುತ್ತಿರುವ ಮೌಖಿಕ ವ್ಯವಸ್ಥೆ, ಇಂದು ಯಾರ ನಿಯಂತ್ರಣದಲ್ಲಿ ಇದೆ? ಪ್ರತಿ ಲಾರಿಗೆ ವಸೂಲಾಗುತ್ತಿದೆ ಎನ್ನಲಾದ ಸಾವಿರಾರು ರೂಪಾಯಿ ಎಲ್ಲಿಗೆ ಹೋಗುತ್ತಿದೆ? ಈ ಹಣದ ಲೆಕ್ಕ ಯಾರ ಬಳಿ ಇದೆ?

    ಪೆರುಂಬಾಡಿ ಚೆಕ್‌ಪೋಸ್ಟ್ ಗಲಾಟೆ ಕೇವಲ ಒಂದು ದಿನದ ವಾಗ್ವಾದವಲ್ಲ. ಇದರ ಹಿಂದೆ ಅಕ್ರಮ ಸಾಗಾಟದ ಅನುಮಾನ, ಅಲಿಖಿತ ಒಪ್ಪಂದ, ನಿಗೂಢ ಹಣದ ವಸೂಲಿ ಮತ್ತು ರಾಜಕೀಯ ಆರೋಪಗಳ ದೊಡ್ಡ ಜಾಲವೇ ಅಡಗಿದೆಯೇ ಎಂಬ ಪ್ರಶ್ನೆಗೆ ಸಂಬಂಧಪಟ್ಟ ಇಲಾಖೆಗಳು ಸ್ಪಷ್ಟ ಉತ್ತರ ನೀಡಬೇಕಾಗಿದೆ. ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಅವರು ಡಿವೈಎಸ್pಪಿ ನೇತೃತ್ವದಲ್ಲಿ ತನಿಖೆ ನಡೆಸಿ ಏಳು ದಿನದ ಒಳಗಾಗಿ ಕ್ರಮ ಜರುಗಿಸುವ ಭರವಸೆಯನ್ನು ನೀಡಿದ್ದು ಯಾರು ತಪ್ಪಿತಸ್ಥರು ಎಂದು ಕಾಯಬೇಕಿದೆ.

    Previous Articleವಿಳಂಬಕ್ಕೆ ಬ್ರೇಕ್ ಹಾಕಿ, ಗುಣಮಟ್ಟಕ್ಕೆ ಆದ್ಯತೆ ನೀಡಿ: ಅಧಿಕಾರಿಗಳಿಗೆ ಶಾಸಕ ಪೊನ್ನಣ್ಣ ಖಡಕ್ ಸೂಚನೆ
    Next Article ಕುಟ್ಟ ಶ್ರೀಕೃಷ್ಣ ದೇವಸ್ಥಾನದಲ್ಲಿ ಕೃಷ್ಣಾಷ್ಟಮಿ ಸಂಭ್ರಮ: ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭಾಗಿ

    Related Posts

    ಕರಿಕೆ ಗಡಿಯಲ್ಲಿ ಕಡವೆ ಬೇಟೆ: ನಾಡ ಬಂದೂಕು, 40 ಕೆಜಿ ಮಾಂಸ ವಶ

    September 12, 2026

    ಮಡಿಕೇರಿಯಲ್ಲಿ ಸಾವಿರಾರು ರೈತರ ಬೃಹತ್ ಪ್ರತಿಭಟನಾ ಮೆರವಣಿಗೆ

    September 11, 2026

    ಅಡಕೆ ಹಾಳೆ ನಿಷೇಧವಿಲ್ಲ; ಆತಂಕ ಬೇಡ – ನಗರಸಭೆ ಪೌರಾಯುಕ್ತ ರಮೇಶ್ ಸ್ಪಷ್ಟನೆ

    September 5, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ಹಬ್ಬದ ಸಂಭ್ರಮಕ್ಕೆ ಶಬ್ದದ ಕಿರಿಕಿರಿ ಬೇಡ: ‘ಪ್ರೆಶರ್ ಮೈಕ್’ ನಿಷೇಧ

    September 11, 2026

    ಮಡಿಕೇರಿಯಲ್ಲಿ ಸಾವಿರಾರು ರೈತರ ಬೃಹತ್ ಪ್ರತಿಭಟನಾ ಮೆರವಣಿಗೆ

    September 11, 2026

    ಕೊಡಗಿನಲ್ಲೂ ಮುಂದುವರೆದ ಹೊಸ ಟ್ರೆಂಡ್: ಅಂದಿನ ಕಾಲ ನೋಡದವರೇ ಇಂದು 80ರ ದಶಕದ ಫೋಟೋಗಳಲ್ಲಿ ಮಿಂಚಿಂಗ್

    September 10, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.