
ಸುಂಟಿಕೊಪ್ಪ: ಗದ್ದೆಹಳ್ಳ ಬಸ್ ನಿಲ್ದಾಣದಲ್ಲಿ ವೃದ್ಧರೊಬ್ಬರು ಮಳೆ–ಗಾಳಿಯ ನಡುವೆಯೇ ನೆಲದ ಮೇಲೆ ಮಲಗಿರುವ ಹೃದಯವಿದ್ರಾವಕ ದೃಶ್ಯ ಕಂಡುಬಂದಿದೆ.
ಆಶ್ರಯವಿಲ್ಲದೆ ಬಸ್ ನಿಲ್ದಾಣವನ್ನೇ ಆಸರೆಯಾಗಿಸಿಕೊಂಡಿರುವ ವೃದ್ಧರಿಗೆ ಸ್ಥಳೀಯರು ತಮ್ಮ ಕೈಲಾದಷ್ಟು ಊಟೋಪಚಾರ ಹಾಗೂ ಮಾನವೀಯ ನೆರವು ನೀಡುತ್ತಿದ್ದಾರೆ. ಆದರೆ ಮಳೆಗಾಲದಲ್ಲಿ ನೆಲದ ಮೇಲೆಯೇ ಮಲಗುವ ಪರಿಸ್ಥಿತಿ ವೃದ್ಧರಿಗೆ ಮತ್ತಷ್ಟು ಸಂಕಷ್ಟ ತಂದಿದೆ.
ಮಡಿಕೇರಿ ಭಾಗದ ಕೆಲ ವೃದ್ಧಾಶ್ರಮಗಳಲ್ಲಿ ಹಾಸಿಗೆ ಸೇರಿದಂತೆ ಅಗತ್ಯ ಸೌಲಭ್ಯಗಳ ಕೊರತೆ ಇದೆ ಎಂದು ವೃದ್ಧರು ಹೇಳುತ್ತಿರುವ ಹಿನ್ನೆಲೆಯಲ್ಲಿ, ಈ ವೃದ್ಧರಿಗೆ ಸುರಕ್ಷಿತ ಆಶ್ರಯ ಕಲ್ಪಿಸುವ ಅಗತ್ಯವಿದೆ.
ಮನುಷ್ಯತ್ವ ಇನ್ನೂ ಜೀವಂತವಿದ್ದರೆ, ಈ ವೃದ್ಧರತ್ತ ಒಂದು ಸಹಾಯದ ಕೈ ಚಾಚೋಣ. ಯಾರಾದರೂ ಸಂಘ-ಸಂಸ್ಥೆಗಳು, ದಾನಿಗಳು ಅಥವಾ ಸಮಾಜ ಸೇವಕರು ಮುಂದೆ ಬಂದು ವೃದ್ಧರಿಗೆ ಸುರಕ್ಷಿತ ವಸತಿ, ಆಹಾರ ಮತ್ತು ಅಗತ್ಯ ಆರೈಕೆ ಒದಗಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.
👉 ವೃದ್ಧರಿಗೆ ನೆರವು ನೀಡಲು ಸಾಧ್ಯವಿರುವವರು ದಯವಿಟ್ಟು ಸ್ಥಳೀಯರು ಅಥವಾ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ, ಮಾನವೀಯ ನೆರವಿಗೆ ಮುಂದಾಗಬೇಕು.

