ಮೇ 20ರಂದು ದೇಶದಾದ್ಯಂತ ಮೆಡಿಕಲ್ ಸ್ಟೋರ್ ಇರಲ್ಲ.
ಗಮನಿಸಿ, ಕೊಡಗಿನಲ್ಲೂ ಮೇ 20 ಕ್ಕೆ ಮೆಡಿಕಲ್ ಸ್ಟೋರ್ ಒಪನ್ ಇರಲ್ಲ.
ಮಡಿಕೇರಿ: ಆನ್ಲೈನ್ ಗಳಲ್ಲಿ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷದಿಗಳ ಮಾರಾಟವನ್ನು ನಿಲ್ಲಿಸಬೇಕೆಂಬ ಆಲ್ ಇಂಡಿಯಾ ಮೆಡಿಕಲ್ ಅಸೋಸಿಯೇಶನ್ ಹಲವು ಬಾರಿ ಸರಕಾರಕ್ಕೆ ಮನವಿ ಮಾಡಿದರೂ ಹಳೇ ಆದೇಶವನ್ನು ಹಿಂಪಡೆಯದ ಸರಕಾರದ ನೀತಿಯನ್ನು ಖಂಡಿಸಿ ದೇಶದಾದ್ಯಂತ ಮೇ 20 ರಂದು ಮೆಡಿಕಲ್ ಸ್ಟೋರ್ ಗಳನ್ನು ಮುಚ್ಚಲಾಗುವುದು ಮತ್ತು ಬಂಧ್ ಹಿಂಪಡೆಯಲಾಗಿದೆ ಎಂಬ ಸುಳ್ಳು ವದಂತಿಗಳಿಗೆ ಯಾರೂ ಕಿವಿಗೊಡುವ ಅವಶ್ಯಕತೆಯಿಲ್ಲ ಎಂದು ಕರ್ನಾಟಕ ಔಷದ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಕೊಡಗು ಜಿಲ್ಲಾ ಔಷದ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಂಬೆಕಲ್ಲು ಜೀವನ್ ಕುಶಾಲಪ್ಪ ಸ್ಪಷ್ಟಪಡಿಸಿದ್ದಾರೆ.
ಯಾಕೆ ಬಂದ್? ಯಾಕೆ ವಿರೋದ:
2020 ಹಾಗೂ 2021 ರ ಕೋವಿಡ್ ಸಂದರ್ಭ ಇಡೀ ದೇಶವೇ ದಿಗ್ಬಂದನಕ್ಕೊಳಗಾದಾಗ ಸಿಲಿಕಾನ್ ಸಿಟಿಗಳಂತಹ ನಗರ ಪ್ರದೇಶಗಳಲ್ಲಿನ ಜನರಿಗೆ ಸಮಸ್ಯೆಯಾಗದಿರಲಿ ಎಂಬ ಏಕೈಕ ದೃಷ್ಟಿಕೋನದಿಂದ ಆನ್ಲೈನ್ ಪೋರ್ಟಲ್ ಗಳಲ್ಲಿ ಕೋವಿಡ್ ಅನಿವಾರ್ಯ ಪರಿಸ್ಥಿತಿಯನ್ನ ನಿಭಾಯಿಸಲು ಅನುಮತಿಯನ್ನು ಕೇಂದ್ರ ಸರಕಾರ ನೀಡಿತ್ತು. ಡ್ರಗ್ಸ್ ಮತ್ತು ಕಾಸ್ಮಟಿಕ್ಸ್ ನಿಯಮದಲ್ಲಿ ಆನ್ಲೈನ್ ಪೋರ್ಟಲ್ ಗಳಲ್ಲಿ ಔಷದಿಯನ್ನು ಮಾರಾಟ ಮಾಡಲು ಅವಕಾಶವಿಲ್ಲದಿದ್ದರೂ, ದೇಶ ಸಂಕಟದಲ್ಲಿದ್ದಾಗ ಅದಕ್ಕೆ ಕೈಜೋಡಿಸುವ ಒಂದೇ ಒಂದು ಉದ್ದೇಶದಿಂದ ಔಷದಿ ವ್ಯಾಪಾರಿಗಳ ಸಂಘ ಅಂದು ವಿರೋಧ ವ್ಯಕ್ತಪಡಿಸಿರಲಿಲ್ಲ. ಅದರೆ ಇದನ್ನೇ ದುರಪಯೋಗ ಪಡಿಸಿಕೊಂಡಿರುವ ಆನ್ಲೈನನ್ ಪೋರ್ಟಲ್ ಗಳು ನಿಯಮವನ್ನು ಮೀರಿ ಔಷದಿಗಳ ಮಾರಾಟ ಮಾಡುವುದು ಈಗ ಬೆಳಕಿಗೆ ಬಂದಿದೆ.
ಏನಾಗಿದೆ ಈಗ! ಹೇಗೆ ಉಲ್ಲಂಘನೆ?
National List of Essential Medicines – NLEM) ಪ್ರಕಾರ, 27 ಚಿಕಿತ್ಸಕ ವಿಭಾಗಗಳಲ್ಲಿ ಒಟ್ಟು 384 ಔಷಧಗಳು ಮತ್ತು 1000 ಕ್ಕೂ ಹೆಚ್ಚು ಸೂತ್ರೀಕರಣಗಳು (ಫಾರ್ಮುಲೇಶನ್) ನಿಗದಿತ ಅಥವಾ ಪರಿಶಿಷ್ಟ ಔಷಧಗಳಾಗಿವೆ. ಇವುಗಳನ್ನು ವೈದ್ಯರ ಚೀಟಿ ಇಲ್ಲದೆ ಮಾರಾಟ ಮಾಡಲು ಅವಕಾಶವಿಲ್ಲ. ಪ್ರಿಸ್ಕ್ರಿಪ್ಷನ್ ಇದ್ದರು ಅದು ಅಂದಿನ ದಿನಾಂಕದಲ್ಲಿರಬೇಕು ಮತ್ತು ಅವುಗಳನ್ನು ನೇರವಾಗಿ ಮೆಡಿಕಲ್ ಸ್ಟೋರ್ ಗಳಲ್ಲಿ ತೋರಿಸಿ ಸೀಲ್ ಹಾಕಿಸಿಕೊಂಡು ಪಡೆದುಕೊಳ್ಳಬೇಕು. ಒಮ್ಮೆ ಪಡೆದುಕೊಂಡ ಶೆಡ್ಯೂಲ್ ಔಷದಿಗಳನ್ನು ಮತ್ತೊಮ್ಮೆ ಪಡೆಯಲು ಖಡ್ಡಾಯ ವೈದ್ಯರ ಚೀಟಿ ಅವಶ್ಯ. ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷದಿಗಳನ್ನು ನೀಡಿದರೇ ಕಠಿಣ ಕಾನೂನೂ ಕ್ರಮ ಕೂಡ ಇದ್ದು ಹಲವು ಮೆಡಿಕಲ್ ಸ್ಟೋರ್ ಗಳು ಶಿಕ್ಷೆ ಅನುಭವಿಸಿದ ಉದಾಹರಣೆಗಳು ಇದೆ. ಅದರೆ ಆನ್ಲೈನ್ ಪೋರ್ಟಲ್ ಗಳಲ್ಲಿ ಇಂತ ಔಷದಿಗಳನ್ನು ಮಾರಾಟ ಮಾಡಲು ನಿಯಮಾನುಸಾರ ಯವುದೇ ಆವಕಾಶ ಇಲ್ಲದಿದ್ದರೂ ಕಾನೂನೂ ಮೀರಿ ಶೆಡ್ಯೂಲ್ ಡ್ರಗ್ ಮಾರಾಟ ಮಾಡುತ್ತಿರುವುದನ್ನು ಮತ್ತು ಅದಕ್ಕೆ ಆವಕಾಶ ಮಾಡಿಕೊಟ್ಟಿರುವ ಪತ್ರವನ್ನು ತಕ್ಷಣ ಹಿಂಪಡೆಯುವಂತೆ ಔಷದಿ ವ್ಯಾಪಾರಿಗಳ ಸಂಘ ಒತ್ತಾಯ ಮಾಡಿ ಬಂಧ್ ಮಾಡುತ್ತಿದೆ.
ಸರಕಾರವೇ ಯುವ ಜನತೆಯನ್ನು ದಾರಿತಪ್ಪಿಸುತ್ತಿದೆಯೇ?
ಹೌದು, ಮೆಡಿಕಲ್ ಸ್ಟೋರ್ ಗಳಲ್ಲಿ ವೈದ್ಯರ ಚೀಟಿಯಿಲ್ಲದೆ ನೀಡಲು ಅವಕಾಶವಿಲ್ಲದ ಮತ್ತು ಬರುವ ಔಷದಿಗಳು ನಿಯಮ ಮೀರಿ ಕೆಲವು ಆನ್ಲೈನ್ ಪೋರ್ಟಲ್ ಗಳಲ್ಲಿ ಸಿಗುತಿದ್ದು ಯುವ ಪೀಳಿಗೆ ಅದನ್ನೇ ಬಂಡವಾಳವನ್ನಾಗಿ ಇಟ್ಟುಕೊಂಡು ಎಸ್ಟು ಬೇಕೆಂದರಷ್ಟು ಖರೀದಿ ಮಾಡುತ್ತಿರುವುದು ಈಗ ಬೆಳಕಿಗೆ ಬಂದಿದೆ. ಡ್ರಗ್ಸ್ ಮುಕ್ತ ಸಮಾಜವನ್ನ ನಿರ್ಮಿಸಲು ಹೊರಟಿರುವ ಸರಕಾರಗಳು ಹಿಂಬದಿ ಬಾಗಿಲಿನಿಂದ ಯುವ ಜನತೆಯನ್ನು ಡ್ರಗ್ಸ್ ಎಂಬ ಪ್ರಪಾತಕ್ಕೆ ಬೀಳಿಸುತ್ತಿದ್ದೆ ಎಂಬುವುದು ಕೂಡ ಇಲ್ಲಿ ಅಷ್ಟೆ ಸತ್ಯ. ಮತ್ತು ಬರಿಸುವ ಕೆಲವು ಔಷದಿಗಳಿಗೆ ಯುವಕರು ಎಡಿಕ್ಟ್ ಆಗಿದ್ದು ಪ್ರತೀ ದಿನ ಒಂದಲ್ಲ ಒಂದು ಮೆಡಿಕಲ್ ಸ್ಟೋರ್ ಗಳಿಗೆ ತೆರಳಿ ಪಡೆಯಲು ಪ್ರಯತ್ನಿಸಿ ವಿಫಲವಾಗುತ್ತಿರುವುದು ಈಗ ಸಾಮಾನ್ಯ. ಈಗದಾಗ ಯುವಕರು ಆನ್ಲೈನ್ ಗಳಲ್ಲಿ ಮತ್ತೇರಿಸುವ ಔಷದಿಗಳನ್ನು ಪಡೆದು ಸಮಾಜದ ಮತ್ತು ಮನೆಯವರ ಸ್ವಾಸ್ಥ್ಯ ಹಾಳು ಮಾಡುವುದರಲ್ಲಿ ಎರಡು ಮಾತಿಲ್ಲ ಬಿಡಿ.
ಔಷದಿ ವ್ಯಾಪಾರಿಗಳ ಸಂಘದ ಬೇಡಿಕೆ ಏನು?
ಕೋವಿಡ್ ಸಂದರ್ಭ ಕೇಂದ್ರ ಸರಕಾರ 20-03-2020 ರಂದು ಆನ್ಲೈನ್ ಪೋರ್ಟಲ್ ಗಳಿಗೆ ಔಷದಿಗಳನ್ನು ವಿತರಿಸಬಹುದು ಎಂದು ನೀಡಿರುವ ಪತ್ರ ಅಥವಾ ಆದೇಶ ಹಿಂಪಡೆಯಬೇಕು. NPPA ನ್ಯಾಷನಲ್ ಪ್ರೈಸ್ ಅಥಾರಿಟಿ ಪ್ರಕಾರ ಎಥಿಕಲ್ ಮೆಡಿಸಿನ್ ಗಳಿಗೆ MRP ಬೆಲೆಯಿಂದ ಶೇಕಡಾ 17 ರಿಂದ ಶೇಕಡಾ 20 ಮಾತ್ರ ಲಾಭವನ್ನು ಸರಕಾರವೇ ನಿಗದಿಪಡಿಸಿದೆ. ಅದರೆ ಆನ್ಲೈನ್ ಪೋರ್ಟಲ್ ಗಳಲ್ಲಿ ಶೇಕಡಾ 50 ರಷ್ಟು ಡಿಸ್ಕೌಂಟ್ ಕೊಡಲು ಹೇಗೆ ಸಾದ್ಯ ಎಂಬ ಪ್ರಶ್ನೆಯನ್ನು ಔಷದಿ ವ್ಯಾಪಾರಿಗಳ ಸಂಘ ಪ್ರಶ್ನಿಸಿದೆ. ಒಟ್ಟು ಮೂರು ಹಂತಗಳಲ್ಲಿ ಸರಕಾರವೇ ದರವನ್ನು ನಿಗದಿಪಡಿಸಿದೆ. ಸೂಪರ್ ಸ್ಟಾಕಿಸ್ಟ್, ಹೋಲ್ ಸೇಲ್ ಹಾಗೂ ರಿಟೈಲ್ ದರವನ್ನು ಮೂರು ಹಂತಗಳಲ್ಲಿ ಸರಕಾರವೇ ದರ ನಿಗದಿ ಮಾಡಿದ್ದು ಮತ್ತೆಗೆ ಆನ್ಲೈನ್ ಪೋರ್ಟಲ್ ಗಳು ಸರಕಾರದ ದರ ನಿಗದಿ ನಿಯಮವನ್ನು ಮೀರಿ ಮಾರಾಟ ಮಾಡಲು ಸಾದ್ಯ ಎಂಬ ಪ್ರಶ್ನೆಯನ್ನು ಔಷದಿ ವ್ಯಾಪಾರಿಗಳ ಸಂಘ ಸರಕಾರಕ್ಕೆ ಪ್ರಶ್ನೆ ಮಾಡಿದೆ.
ಬೇಡಿಕೆ ಈಡೇರಿದದ್ದರೆ ಬಂಧ್ ವಾಪಸ್ ಪಡೆಯುವುದಿಲ್ಲ
ಕೇಂದ್ರ ಸರಕಾರ ಆನ್ಲೈನ್ ಪೋರ್ಟಲ್ ಗಳಿಗೆ 2020 ರಲ್ಲಿ ನೀಡಿರುವ ಔಷದಿ ಮಾರಾಟ ಮಾಡಬಹುದೆನ್ನುವ ಪತ್ರವನ್ನು ಹಿಂಪಡೆದರೆ ಮಾತ್ರ ಬಂದ್ ವಾಪಸ್ ಹೊರತು ಯಾವುದೇ ಕಾರಣಕ್ಕೂ ಬಂದ್ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯ ಔಷದಿ ವಿತರಕರ ಮತ್ತು ಮಾರಾಟಗಾರರ ಸಂಘದ ಕಾರ್ಯದರ್ಶಿ ಜೀವನ್ ಕುಶಾಲಪ್ಪ ಸ್ಪಷ್ಟಪಡಿಸಿದ್ದು ಅಂದು ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಮೆಡಿಕಲ್ ಸ್ಟೋರ್ ಗಳು ತೆರೆಯುವುದಿಲ್ಲ ಎಂದು ಅವರು ಇದೆ ವೇಳೆ ಸ್ಪಷ್ಟಪಡಿಸಿದ್ದಾರೆ.



