ಚೆಯ್ಯಂಡಾಣೆ ಮುಖ್ಯ ರಸ್ತೆ ಬದಿಯ ಗದ್ದೆಯಲ್ಲೇ ಪ್ರತ್ಯಕ್ಷವಾದ ಕಾಡಾನೆ ಹಿಂಡು

-ಕಾಡಿಗಟ್ಟಿದ ಅರಣ್ಯ ಇಲಾಖೆ

ವರದಿ:ಝಕರಿಯ ನಾಪೋಕ್ಲು

 

ನಾಪೋಕ್ಲು :ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮುಂದುವರೆದಿದ್ದು.ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಕಾಫಿ,ಬಾಳೆ,ಅಡಿಕೆ,ಮತ್ತಿತರ ಗಿಡಗಳನ್ನು ತುಳಿದು ಹಾನಿಪಡಿಸಿದೆ.

ಮಂಗಳವಾರ ಮಧ್ಯಾಹ್ನ ನಾಪೋಕ್ಲು,ವಿರಾಜಪೇಟೆ ಮುಖ್ಯ ರಸ್ತೆಯ ಬೊವ್ವೇರಿಯಂಡ ರಮೇಶ್ ರವರ ಗದ್ದೆಯಲ್ಲಿ ಕಾಣಿಸಿಕೊಂಡ 6 ಕಾಡಾನೆಗಳ ಹಿಂಡನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಕರಡ ಕೀಮಲೆ ಕಾಡು ಮೂಲಕ ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

 

ಗ್ರಾಮಸ್ಥರಾದ ಬೊವ್ವೇರಿಯಂಡ ಮೋಹನ್ ಅವರು ಮಾಹಿತಿ ನೀಡಿ ನಮ್ಮಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ವಿತಿಮೀರಿದ್ದು ಬೆಳಿಗ್ಗೆ ಹಾಗೂ ಮಧ್ಯಾಹ್ನ ಸಮಯದಲ್ಲಿ ಮುಖ್ಯ ರಸ್ತೆಯ ಮೂಲಕವೇ ಕಾಡಾನೆಗಳು ಸಂಚರಿಸುತ್ತಿದ್ದು ಗ್ರಾಮಸ್ಥರು ಭಯಬೀತರಾಗಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಕಾಡಾನೆಯನ್ನು ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಬೇಕು, ಆನೆಗಳನ್ನು ಕಾಡಿಗಟ್ಟಿ ಯಾವುದೇ ಪ್ರಯೋಜನವಿಲ್ಲ ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆಗಳನ್ನು ಕಾಡಿಗಟ್ಟಿ ಹಿಂತಿರುಗುವ ಮುನ್ನ ಕಾಡಾನೆಗಳು ಮರಳಿ ತೋಟಕ್ಕೆ ಲಗ್ಗೆ ಇಡುತ್ತಿದೆ. ಇದರಿಂದ ಯಾವುದೇ ಪ್ರಯೋಜನ ವಿಲ್ಲ ಎಂದರು.

 

ಆರ್ ಎಫ್ಓ ಶಿವರಾಂ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಆರ್ ಎಫ್ಒ ಶ್ರೀನಿವಾಸ್,ಇಟಿಎಫ್ ಡಿ ಆರ್ ಎಫ್ಒ ಪ್ರಶಾಂತ್ ಹಾಗೂ ತಂಡ, ಚೆಯ್ಯಂಡಾಣೆ ಹಾಗೂ ಹೆಗ್ಗಳ ಕ್ಯಾಂಪ್ ಸಿಬ್ಬಂದಿಗಳು ಪಾಲ್ಗೊಂಡಿದರು.

Exit mobile version