ಬೆಟ್ಟತ್ತೂರು ಗ್ರಾಮದ ಕೊಂಪುಳಿ ಮನೆಯಲ್ಲಿ ಅದ್ದೂರಿಯಾಗಿ ನಡೆದ “ಧರ್ಮ ದೈವಗಳ” ಆರಾಧನೆ

 

ಮಡಿಕೇರಿ ತಾಲ್ಲೂಕು ಬೆಟ್ಟತೂರು ಗ್ರಾಮದಲ್ಲಿ ಕೊಂಪುಳಿ ಕುಟುಂಬದವರು ಇದೆ ಮೊದಲ ಭಾರಿಗೆ ನಡೆಸಿದ ಎರಡು ದಿನಗಳ ಧರ್ಮ ದೈವಗಳ ಆರಾಧನೆ ಅದ್ದೂರಿಯಾಗಿ ನೆರವೇರಿತು. ಇಲ್ಲಿವರೆಗೆ ಕೇವಲ ಕುಟುಂಬದ ಕುಲದೇವರು ವೆಂಕಟರಮಣ ಹರಿಸೇವೆಗೆ ಸೀಮಿತವಾಗಿದ್ದ ಆಚರಣೆಗಳು ಇದೀಗ ಕುಟುಂಬದ ಅಭಿವೃದ್ಧಿ ಹಾಗೂ ಸಂಕಷ್ಟ ಪರಿಹಾರವಾಗಿ ಕಾರ್ಯಗಳು ಯಶಸ್ವಿಯಾಗಿ ನಡೆದವು. ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಗುರುಕಾರಣದಿಂದ ಆರಂಭವಾಗಿ ಕುಕ್ಕೆತಿ ಮತ್ತು ಬಲ್ಲು, ಪಾಷಾಣ ಮೂರ್ತಿ ವರ್ಣರ ಪಂಜುರ್ಲಿ, ರಾಜಗುಳಿಗ ಭಾನುವಾರ ಬೆಳಗಿನ ಜಾವದ ವರೆಗೆ ನಡೆದಿದ್ದು, ಮರುದಿನ ರುದ್ರ ಚಾಮುಂಡಿ (ಧರ್ಮ ದೈವ ) ಕೋಲ ನಡೆದು ಕುಟುಂಬಸ್ಥರಿಗೆ ಪರಿಹಾರ ನೀಡಿ ಮುಂದಿನ ದೈವ ಕಾರ್ಯಗಳನ್ನು ನಡೆಸುವ ಬಗ್ಗೆ ಮಾರ್ಗದರ್ಶನ ನೀಡಲಾಯಿತು. ಎರಡು ದಿಂದ ಈ ಕಾರ್ಯಕ್ರಮಕ್ಕೆ ಗ್ರಾಮಸ್ಥರು, ಕುಟುಂಬಸ್ಥರು, ನೆಂಟರಿಷ್ಟರು ಸಹಸ್ರ ಸಂಖ್ಯೆಯಲಿ ಬಂದು ಉತ್ಸವಕ್ಕೆ ಸಾಕ್ಷಿಯಾದರು.

Exit mobile version