ಸೋಮವಾರಪೇಟೆಯಲ್ಲಿ ತೆನೆ ಬರಿತ ಗಾಂಜ ಸೇವನೆ ಹಾಗೂ ಮಾರಾಟ ಇಬ್ಬರ ಬಂಧನ

ಹೊರ ಜಿಲ್ಲೆಯಿಂದ ತೆನೆ ಬರಿತ ಗಾಂಜಾವನ್ನು ತರಿಸಿ ಪಟ್ಟಣ ವ್ಯಾಪ್ತಿಯಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪತ್ತೆ ಹಚ್ಚಿ ಬಂದಿಸುವಲ್ಲಿ ಅಬಕಾರಿ ಇಲಾಖೆ ಯಶಸ್ವಿಯಾಗಿದೆ.

ನಗರದ ಕರ್ಕಳ್ಳಿ ಬಾಣೆ ನಿವಾಸಿಗಳಾದ ಎ.ಡಿ ಯಶವಂತ ಹಾಗೂ ಎಸ್.ಡಿ ಚೇತನ್ ಬಂದಿತ ಆರೋಪಿಗಳಾಗಿದ್ದಾರೆ.

ಆರೋಪಿಗಳು ದಿನದ ಬೆಳಗಿನ ಹೊತ್ತಿನಲ್ಲಿ ಗಾಂಜಾ ಮಾರಾಟಕ್ಕೆ ತೊಡಗಿದ್ದಾರೆ ಎಂಬ ಮಾಹಿತಿ ಆಧರಿಸಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು.

ದಾಳಿ ವೇಳೆ ಆರೋಪಿಗಳು ಸ್ವತಃ ಗಾಂಜಾ ಸೇವನೆ ಮಾಡುತ್ತಿರುವುದು ಕೂಡ ತನಿಖೆಯಲ್ಲಿ ಬೆಳಕಿಗೆ ಬಂದಿದೆ.ಅಧಿಕಾರಿಗಳು ಅವರ ಬಳಿಯಿಂದ ಸುಮಾರು 335 ಗ್ರಾಂ ತೆನೆ ಬರಿತ ಗಾಂಜಾ ಹಾಗೂ ಮಾರಾಟಕ್ಕೆ ಬಳಸಲಾಗುತ್ತಿದ್ದ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

Exit mobile version