ಕರಡಿಗೋಡುವಿನಲ್ಲಿ ಒಂಟಿ ಸಲಗ ಹಾವಳಿ

ಕರಡಿಗೋಡಿನಲ್ಲಿ ಒಂಟಿ ಸಲಗ ಹಾವಳಿ
ಮುಂಜಾನೆ ಸಮಯ 4ರ ಹೊತ್ತಿನಲ್ಲಿ ಕರಡಿಗೋಡುವಿನ ಕೃಷಿಕ ಕುಕ್ಕುನೂರು ಚಿದಾನಂದ ರವರ ಕಾಫಿ ತೋಟಕ್ಕೆ ಬೃಹತ್ ಗಾತ್ರದ ಒಂಟಿ ಸಲಗವೊಂದು ಲಗ್ಗೆ ಇಟ್ಟು ಕಾಫಿ, ಕರಿಮೆಣಸು ಗಿಡಮರ ಹಾಗು ತೋಟದಲ್ಲಿ ಹಾದು ಹೋದ ಸ್ಪೀoಕ್ಲರ್ ಅಲ್ಯೂಮಿನಿಯಂ ಪೈಪನ್ನು ತುಳಿದು ನಾಶಪಡಿಸಿದೆ. ತುಂಬಾ ರೋಷದಿಂದ ಕೂಡಿದ ಈ ಒಂಟಿ ಸಲಗ ತೋಟದಲ್ಲಿ ಅಪಾರ ಪ್ರಮಾಣದ ನಷ್ಟವನ್ನು ಉಂಟು ಮಾಡಿದ್ದು ಇದೀಗ ಮಳೆ ಇಲ್ಲದ ಕಾರಣ ತೋಟದಲ್ಲಿ ಕಾಫಿ ಗಿಡಗಳಿಗೆ ನೀರಾವರಿ ವ್ಯವಸ್ಥೆ ಕೈಗೊಳ್ಳಲು ಕಷ್ಟಕರವಾಗುತ್ತಿದೆ ಎಂದು ಕೃಷಿಕ ಚಿದಾನಂದ ರವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸಂಬಂಧ ಪಟ್ಟ ಅರಣ್ಯ ಇಲಾಖೆ ಯವರು ಆದಷ್ಟು ಬೇಗ ಒಂಟಿ ಸಲಗವನ್ನು ಸೆರೆ ಹಿಡಿದು ನಾಡಿನಿಂದ ಬೇರೆಡೆಗೆ ಸ್ಥಳಾoತರಿಸಬೇಕೆಂದು ಒತ್ತಾಯಿಸಿದ್ದಾರೆ.

