ಜಿಲ್ಲಾ ಎಸ್ ವೈ ಎಸ್ ವತಿಯಿಂದ ರಂಝಾನ್ ಕಿಟ್ ವಿತರಣೆ

ವರದಿ:ಝಕರಿಯ ನಾಪೋಕ್ಲು

 

ನಾಪೋಕ್ಲು :ಸುನ್ನಿ ಯುವಜನ ಸಂಘ (ಎಸ್ ವೈ ಎಸ್) ಕೊಡಗು ಜಿಲ್ಲಾ ಸಮಿತಿ ವತಿಯಿಂದ ಪವಿತ್ರ ರಂಜಾನ್ ತಿಂಗಳ ಪ್ರಯುಕ್ತ ಜಿಲ್ಲೆಯಲ್ಲಿರುವ ನೂರಾರು ಬಡ ರೋಗಿಗಳು ಹಾಗೂ ವಿಧವೆಯರಿಗೆ ಅಕ್ಕಿ ಹಾಗೂ ಅಗತ್ಯ ಆಹಾರ ಧಾನ್ಯಗಳ ಕಿಟ್ ಅನ್ನು ಎಸ್ ವೈ ಎಸ್ ಜಿಲ್ಲಾಧ್ಯಕ್ಷರಾದ ಮುನೀರ್ ಮಹ್ಳರಿಯವರ ನೇತೃತ್ವದಲ್ಲಿ ವಿತರಿಸಲಾಯಿತು.

 

ಈ ಸಂದರ್ಭ ಎಸ್ ವೈ ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್, ಕೋಶಾಧಿಕಾರಿ ಶರೀಫ್ ಮಾಸ್ಟರ್, ರಾಜ್ಯ ಸಮಿತಿಯ ಸದಸ್ಯ ಅಶ್ರಫ್ ಎಮ್ಮೆಮಾಡು, ಸಾಂತ್ವನ ಕಾರ್ಯದರ್ಶಿ ಬಷೀರ್ ಕೊಟ್ಟಮುಡಿ, ಜಿಲ್ಲಾ ಸಮಿತಿ ಸದಸ್ಯ ಮೊಯ್ದು ಪಡಿಯಾಣಿ ಮತ್ತಿತರರು ಪಾಲ್ಗೊಂಡಿದ್ದರು.

Exit mobile version