ಕಾರಿನಿಂದ ಬೈಕ್ ಹಾಗೂ ವಿದ್ಯುತ್ ಕಂಬಕ್ಕೆ ಡಿಕ್ಕಿ

ವಿರಾಜಪೇಟೆ ಖಾಸಗಿ ಬಸ್ ನಿಲ್ದಾಣದ ಇಳಿಜಾರು ರಸ್ತೆಯಲ್ಲಿ ಬರುತ್ತಿದ್ದ ಕೇರಳ ರಾಜ್ಯದ ಕಾರಿನ ಚಾಲಕನಿಗೆ ಮೂರ್ಛೆ ರೋಗ ಕಾಣಿಸಿಕೊಂಡ ಪರಿಣಾಮ, ಕಾರು ನಿಯಂತ್ರಣಕ್ಕೆ ಸಿಗದೆ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ನಂತರ ರಸ್ತೆಯ ಪಕ್ಕದ ವಿದ್ಯುತ್ ಕಂಬಕ್ಕೆ ಅಪ್ಪಳಿಸಿ ನಿಂತಿದೆ.

ಅ ರಸ್ತೆಯಲ್ಲಿ ಪ್ರತಿದಿನವೂ ನೂರಾರು ವಾಹನಗಳ ಸಂಚಾರ ವಿರುತ್ತದೆ ಮತ್ತು ಜನಸಂಚಾರ ಜಾಸ್ತಿ ಇರುವ ನಗರದ ಏಕಮುಖ ರಸ್ತೆಯಾಗಿದ್ದು, ಅದೃಷ್ಟವಶಾತ್ ಈ ಅವಘಡದಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

Exit mobile version