
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಚನ್ನಯ್ಯನಕೋಟೆಯ ಧ್ರುವ ಎಜುಕೇಶನ್ ಟ್ರಸ್ಟ್ ರವರ ನೂತನ ಶಾಲಾ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು.
ಶಾಲಾ ಕಟ್ಟಡ ಉದ್ಘಾಟಿಸಿ ಶುಭ ಕೋರಿದ ಶಾಸಕರು, ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಲು ಉತ್ತಮ ಶಾಲಾ ವಾತಾವರಣದ ಅವಶ್ಯಕತೆ ತುಂಬಾ ಮುಖ್ಯವಾದದ್ದು. ನೂತನ ಕಟ್ಟಡದೊಂದಿಗೆ ಆಧುನಿಕ ಸೌಲಭ್ಯಗಳನ್ನು ಗ್ರಾಮೀಣ ಮಕ್ಕಳಿಗೆ ಕಲ್ಪಿಸಿದಷ್ಟು ಅವರಲ್ಲಿ ಓದಲು ಹುಮ್ಮಸ್ಸು ಮೂಡುತ್ತದೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ದೊರಕಿದರೆ ದೇಶದ ಭವಿಷ್ಯಕ್ಕೆ ಅದು ಒಳಿತಾಗಲಿದೆ. ಗ್ರಾಮೀಣ ಭಾಗದಲ್ಲಿ ಧ್ರುವ ಎಜುಕೇಶನ್ ಟ್ರಸ್ಟ್ ರವರ ಈ ಒಂದು ಶ್ರಮ ಶ್ಲಾಘನೀಯ. ಈ ಶಾಲೆ ವತಿಯಿಂದ ದೇಶದ ಉತ್ತಮ ಪ್ರಜೆಗಳು ಹೊರಬರುವಂತಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪಟ್ಟಡ ರಂಜಿ ಪೂಣಚ್ಚ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಗಣೇಶ್, ಪಂಚಾಯಿತಿ ಅಧ್ಯಕ್ಷರು ಜಯ ಲಕ್ಷ್ಮಿ, ಸದಸ್ಯರು ವಿಜು ನಾರಾಯಣ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರು ಹನೀಫ್, ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರು ರಾಫಿಕ್, ಪಾಲಿಬೆಟ್ಟ ವಲಯ ಅಧ್ಯಕ್ಷರು ಸಾಬ ಕಾಳಪ್ಪ, ಪಂಚಾಯಿತಿ ಸದಸ್ಯರು ನಾಸಿರ್, ಸಿದ್ದಪ್ಪ, ಮಿಲನ್ ಸುಬ್ಬಯ್ಯ, ಅಜಿತ್, ಚೆಕು, ಅನಿಲ್, ಸಭು, ರವೀಂದ್ರ ಭಾವೆ, ಶಾಲಾ ಮುಖ್ಯಸ್ಥರು, ಸಿಬ್ಬಂದಿ ವರ್ಗದವರು ಹಾಗೂ ಶಾಲಾ ಮಕ್ಕಳು, ಸ್ಥಳೀಯರು ಉಪಸ್ಥಿತರಿದ್ದರು.

