ನಾಪೋಕ್ಲು ಮಾಜಿ ಪಂಚಾಯತ್ ಸದಸ್ಯನ ಮೇಲೆ ಹಲ್ಲೆ ಪ್ರಕರಣ

-ರಾಜಕೀಯ ಪ್ರಭಾವ ಎಂಬ ರೋಗಕ್ಕೆ ನ್ಯಾಯಾಲಯದಿಂದ ಔಷಧಿ- ಆರು ಜನರ ವಿರುದ್ಧ ಎಫ್ ಐ ಆರ್ ದಾಖಲು

 

ಮಡಿಕೇರಿ :ನಾಪೋಕ್ಲು ಬಳಿಯ ಚೆರಿಯಪರಂಬು ಗ್ರಾಮದಲ್ಲಿ ಶಾದಿ ಮಹಲ್ ನಿರ್ಮಾಣದ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಟಿ.ಎ.ಮೊಹಮ್ಮದ್ ಅನೀಫ್ ಎಂಬುವವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದ ಆದೇಶದ ಮೇರೆಗೆ ಹಲ್ಲೆ ನಡೆಸಿದ ಆರು ಜನರ ವಿರುದ್ಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

 

ದಿನಾಂಕ 13 -11- 2025ರಂದು ನಾಪೋಕ್ಲು ಬಳಿಯ ಚೆರಿಯಪರಂಬುವಿನಲ್ಲಿ ಶಾದಿ ಮಹಲ್ ನಿರ್ಮಾಣದ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಸಕ ಪೊನ್ನಣ್ಣ ಅವರು ಕಾರ್ಯಕ್ರಮ ಮುಗಿಸಿ ತಮ್ಮ ಕಾರಿನಲ್ಲಿ ತೆರಳುವ ವೇಳೆ ಟಿ.ಎ.ಮೊಹಮ್ಮದ್ ಅನೀಫ್ ಅವರು ಶಾದಿ ಮಹಲ್ ವಿಚಾರವಾಗಿ ಶಾಸಕರಲ್ಲಿ ಮಾತನಾಡಲು ತೆರಳುವ ಸಂದರ್ಭ ಎಡಪಾಲ ಗ್ರಾಮದ ಶಾಫಿ ಎಂಬುವವರು ಅವಾಚ್ಯ ಶಬ್ದಗಳಿಂದ ಬೈದು ವಖ್ಫ್ ಬೋರ್ಡ್ ವಿಚಾರದಲ್ಲಿ ನನ್ನನ್ನು ವಿರೋಧಿಸಿದ್ದೀಯ ನನ್ನ ಬಗ್ಗೆ ಚಾಡಿ ಹೇಳಲು ಶಾಸಕರ ಬಳಿ ಹೋಗುತ್ತಿದ್ದೆಯಾ ಎಂದು ಹೇಳಿ ನನ್ನನ್ನು ಹಿಡಿದು ರಸ್ತೆ ಬದಿಗೆ ತಳ್ಳಿದಾರೆ.ಅದೇ ಸಂದರ್ಭ ಅಲ್ಲಿಗೆ ಬಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ಮತ್ತಿತರರು ಸೇರಿ ಹಲ್ಲೆ ಮಾಡಿದ್ದಾರೆಂದು ಅನೀಫ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಬಳಿಕ ಹಲ್ಲೆಗೊಳಗಾದ ಅನೀಫ್ ಮಡಿಕೇರಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಜಿಲ್ಲಾಸ್ಪತ್ರೆಯಿಂದ ನೀಡಿದ ಮಾಹಿತಿ ಮೇರೆಗೆ ನಾಪೋಕ್ಲು ಪೊಲೀಸರು ಆಸ್ಪತ್ರೆಗೆ ತೆರಳಿ ಅನೀಫ್ ಅವರಿಂದ ಹೇಳಿಕೆಯನ್ನು ದಾಖಲಿಸಿಕೊಂಡು ಎಲ್ ಪಿ. ಟಿ ಎನ್ ದಾಖಲಿಸಿ ತನಿಖೆಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.ದಿನಾಂಕ 2-12-2025ರಂದು ಸರಿಯಾದ ತನಿಖೆ ನಡೆಸದೆ ಪೊಲೀಸರು ಆರೋಪಿಗಳು ನೀಡಿರುವ ಹೇಳಿಕೆ ಮೇರೆಗೆ ಅನಿಫ್ ಅವರು ನೀಡಿದ ಪುಕಾರಿನ ಮೇಲೆ ದಾಖಲಾಗಿದ್ದ ಎಲ್ ಪಿ ಟಿ ಎನ್ ಅರ್ಜಿ 251/2025ಅನ್ನು ಮುಕ್ತಾಯಗೊಳಿಸಿದ್ದರು. ಆರೋಪಿಗಳು ರಾಜಕೀಯ ನಾಯಕರು ಮತ್ತು ಸ್ಥಳೀಯ ಗೂಂಡಾಗಳ ಬೆಂಬಲದೊಂದಿಗೆ ಪ್ರಭಾವಶಾಲಿಯಾಗಿದ್ದು ರಾಜಕೀಯ ನಾಯಕರ ಪ್ರಭಾವದಿಂದ ನನ್ನ ದೂರಿಗೆ ಮನ್ನಣೆ ಸಿಗದೆ ಅನ್ಯಾಯವಾಗಿದೆ ಎಂದು ಜಿಲ್ಲಾ ನ್ಯಾಯಾಲಯದಲ್ಲಿ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅನೀಫ್ ಅವರು ಅರ್ಜಿಸಲ್ಲಿಸಿದ್ದರು. ಅನೀಫ್ ಅವರ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯವು ಕೂಡಲೇ ಪ್ರಕರಣ ದಾಖಲಿಸುವಂತೆ ನಾಫೋಕ್ಲು ಪೊಲೀಸರಿಗೆ ಆದೇಶ ನೀಡಿದ ಮೇರೆಗೆ 20-02-2026 ರಂದು ಹಲ್ಲೆ ನಡೆಸಿದ ಆರೋಪಿಗಳಾದ 1) ನಾಪೋಕ್ಲು ಬೇತು ಗ್ರಾಮದ ಕೆ.ಎ. ಇಸ್ಮಾಯಿಲ್,2)ಕೇಬಲ್ ಅಬ್ಬಾಸ್ 3)ಕೆ.ಯು.ಶಾಫಿ ಎಡಪಾಲ 4)ಹಳೇತಾಲೂಕಿನ ಟಿ.ಎ. ಮೊಹಮ್ಮದ್,5)ಟಿ.ಎ. ಇಬ್ರಾಹಿಂ, 6)ಕಟ್ಟೆ ನಾಸಿರ್, ಎಂಬುವವರ ವಿರುದ್ಧ ಭಾರತೀಯ ನ್ಯಾಯ ಸಂಹಿತ BNS 2023(U/S 114,115(1),115(2),118,351,352,r/w(5) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version