Close Menu
Kodagu News
    ಹೊಸ ಸುದ್ದಿ

    ಮೇಕೇರಿಯ ಇಂಪನ ಕೆ.ಡಿ.ಗೆ BCAಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ

    August 25, 2026

    ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕೊಡಗಿನ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ

    August 25, 2026

    ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಕೊಡಗಿನಲ್ಲಿ ಮಹತ್ವದ ಸಮಾಲೋಚನಾ ಸಭೆ

    August 25, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ಮೇಕೇರಿಯ ಇಂಪನ ಕೆ.ಡಿ.ಗೆ BCAಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ
    • ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕೊಡಗಿನ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ
    • ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಕೊಡಗಿನಲ್ಲಿ ಮಹತ್ವದ ಸಮಾಲೋಚನಾ ಸಭೆ
    • ವರ್ಷವಾದರೂ ತಡೆಗೋಡೆ ನಿರ್ಮಿಸದ ಜಿಲ್ಲಾಡಳಿತ; ಅಪಾಯದ ತಿರುವಿನಲ್ಲಿ ವಾಹನ ಸವಾರರ ಪರದಾಟ!
    • ಕೊಡಗು ಸೇರಿದಂತೆ ಇಂದು 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
    • ಮಹಮ್ಮದ್ ಯಾಸೀನ್‌ಗೆ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ
    • ಕಾಫಿ ಶಾಪ್ ಕಳವು ಪ್ರಕರಣ: ಕೇರಳ ಮೂಲದ ಆರೋಪಿ ಬಂಧನ
    • ಎಸ್ ಐ ಆರ್ ಕೊಡಗಿನಲ್ಲಿ 51,932 ಮತದಾರರ ಇಳಿಕೆ
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಆರೋಗ್ಯ»ಕೊಡಗು ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದಿಂದ ಫಾಮ೯ ಭವನ ಲೋಕಾಪ೯ಣೆ; ಆನ್ ಲೈನ್ ಔಷಧ ವಹಿವಾಟಿಗೆ ಕಡಿವಾಣ ಮೂಲಕ ಮಾದಕ ದ್ರವ್ಯ ಮಾರಾಟ ಸ್ಥಗಿತಗೊಳಿಸಿ – ಆರ್. ರಘುನಾಥ ರೆಡ್ಡಿ ಒತ್ತಾಯ
    ಆರೋಗ್ಯ

    ಕೊಡಗು ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದಿಂದ ಫಾಮ೯ ಭವನ ಲೋಕಾಪ೯ಣೆ; ಆನ್ ಲೈನ್ ಔಷಧ ವಹಿವಾಟಿಗೆ ಕಡಿವಾಣ ಮೂಲಕ ಮಾದಕ ದ್ರವ್ಯ ಮಾರಾಟ ಸ್ಥಗಿತಗೊಳಿಸಿ – ಆರ್. ರಘುನಾಥ ರೆಡ್ಡಿ ಒತ್ತಾಯ

    ಮಡಿಕೇರಿ ಫೆ.19 ಆನ್ ಲೈನ್ ನಲ್ಲಿ ಔಷಧ ವ್ಯಾಪಾರಕ್ಕೆ ಕಡಿವಾಣ ಹಾಕದೇ ಹೋದಲ್ಲಿ ಮಾದಕ ದ್ರವ್ಯಗಳಿಗೂ ಸಂಪೂಣ೯ ತಡೆ ಸಾಧ್ಯವಾಗದು ಎಂದು ಅಭಿಪ್ರಾಯಪಟ್ಟಿರುವ ಕನಾ೯ಟಕ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಆರ್ ರಘುನಾಥ ರೆಡ್ಡಿ, ಆನ್ ಲೈನ ಮೂಲಕ ಮಾದಕ ದ್ರವ್ಯ ಸಾಗಾಣಿಕೆ ಊಹೆಗೂ ಮೀರಿ ಬೆಳೆಯುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ.

    ನೂತನವಾಗಿ ನಿಮಿ೯ಸಲಾದ ಸಂಘದ ಕಛೇರಿ, ಸಭಾಂಗಣವನ್ನು ಹೊಂದಿರುವ ಎರಡಂತಸ್ತಿನ ಫಾಮಾ೯ ಭವನ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮಾದಕ ದ್ರವ್ಯ ಸಾಗಾಣಿಕೆ ದೇಶವ್ಯಾಪಿ ವಿಸ್ತಾರಗೊಳ್ಳುತ್ತಿದೆ. ಆನ್ ಲೈನ್ ನಲ್ಲಿ ಔಷಧಿ ವಹಿವಾಟು ನೆಪದಲ್ಲಿ ಮಾದಕ ದ್ರವ್ಯ ಸಾಗಾಣಿಕೆಯೂ ಹೆಚ್ಚಾಗುತ್ತಿದೆ. ಇಂಥ ಸಂದಭ೯ ಅನಗತ್ಯವಾಗಿ ಔಷಧಿ ವ್ಯಾಪಾರಿಗಳನ್ನು ತನಿಖಾ ಸಂಸ್ಥೆಗಳು ವಿಚಾರಣೆಗೊಳಪಡಿಸುತ್ತಿವೆ

    ಸಾಗಾಣಿಕೆ ಮಾಡುವ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆನ್ ಲೈನ್ ಔಷಧಿ ವಹಿವಾಟಿಗೇ ತಡೆಯೊಡ್ಡುವ ನಿಟ್ಟಿನಲ್ಲಿ ಸಕಾ೯ರ ಮುಂದಾಗಬೇಕೆಂದು ಒತ್ತಾಯಿಸಿದರು. ಸಂಘದ ಅಧೀನದಲ್ಲಿರುವ ಔಷಧ ವ್ಯಾಪಾರಿಗಳು ಯಾವುದೇ ಕಾರಣಕ್ಕೂ ಮಾದಕ ಪದಾಥ೯ಗಳು, ಮಾದಕ ದ್ರವ್ಯಗಳ ಮಾರಾಟಕ್ಕೆ ಅವಕಾಶ ನೀಡಬಾರದೆಂದೂ ಈಗಾಗಲೇ ಕಟ್ಟು ನಿಟ್ಟಾಗಿ ಸೂಚಿಸಲಾಗಿದೆ ಎಂದೂ ರಘುನಾಥ ರೆಡ್ಡಿ ಹೇಳಿದರು. ಕನಾ೯ಟಕದಲ್ಲಿ ಪ್ರಸ್ತುತ 26 ಸಾವಿರ ಔಷಧ ಅಂಗಡಿಗಳಿದ್ದು, 45 ಸಾವಿರದಷ್ಟು ಔಷಧ ವ್ಯಾಪಾರಿಗಳಿದ್ದಾರೆ. ಔಷಧ ವ್ಯಾಪಾರಿಗಳು ಸಮಾಜಮುಖಿಯಾಗಿ ನಿಯಮಪಾಲಿಸಿಕೊಂಡು ಕಾಯ೯ನಿವ೯ಹಿಸುತ್ತಾ ಬಂದಿದ್ದಾರೆ. ಹೀಗಿದ್ದರೂ ಸಕಾ೯ರಗಳು ಒಂದಿಲ್ಲೊಂದು ನಿಯಮಗಳ ಮೂಲಕ ಔಷಧ ವ್ಯಾಪಾರಿಗಳಿಗೆ ಸಮಸ್ಯೆಯುಂಟು ಮಾಡುತ್ತಿದೆ ಎಂದೂ ರಘುನಾಥ ರೆಡ್ಡಿ ಅಸಮದಾನ ವ್ಯಕ್ತಪಡಿಸಿದರು.

    ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದಿಂದ ಮುಂದಿನ ದಿನಗಳಲ್ಲಿ ಸಂಘದ ಸದಸ್ಯರ ಆಥಿ೯ಕತೆಗೆ ನೆರವಾಗುವ ನಿಟ್ಟಿನಲ್ಲಿ ಬ್ಯಾಂಕ್ ಪ್ರಾರಂಭಿಸುವಂತೂ ಅವರು ಸಲಹೆ ನೀಡಿದರು. ಫಾಮಾ೯ ಭವನ ಕೊಡಗಿನ ಔಷಧ ವ್ಯಾಪಾರಸ್ಥಲ್ಲರ ಒಗ್ಗಟ್ಟಿನ ಪ್ರತೀಕದ ಭವನವಾಗಲಿ ಎಂದೂ ರಘುನಾಥ ರೆಡ್ಡಿ ಹಾರೈಸಿದರು. ಕೊಡಗು ಜಿಲ್ಲೆಯ ಸಹಾಯಕ ಔಷಧ ನಿಯಂತ್ರಕರಾದ ಅಜಯ್ ರಾಜ್ ಷಾ ಮಾತನಾಡಿ, ಭೂಮಿಯಲ್ಲಿ ಜನಿಸಿದವರೆಲ್ಲರೂ ಪ್ರವಾಸಿಗರಂತೆ ಆಗಿದ್ದೇವೆ. ಆ ದೇವನು ಪ್ರವಾಸಿ ಮಾಗ೯ದಶ೯ಕನಂತೆ ನಮಗೆ ದಾರಿದೀಪವಾಗಿದ್ದಾನೆ. ಹೀಗಿರುವಾಗ ಜೀವಿಸುವ ಅಲ್ಪಾವಧಿಯಲ್ಲಿ ಸ್ವಾಥಿ೯ಗಳಾಗದೇ ಪರರ ಹಿತಚಿಂತನೆಯನ್ನೂ ಮಾಡುವಂತೆ ಸಲಹೆ ನೀಡಿದರು.

    ಸಂಘದ ರಾಜ್ಯ ಕಾನೂನು ಸಲಹೆಗಾರ ಕೆ.ಹರೀಶ್ ಮಾತನಾಡಿ, ಸಕಾ೯ರಗಳು ಸದಾ ಒಂದೊಂದು ನಿಯಮಗಳ ಮೂಲಕ ಔಷಧ ವ್ಯಾಪಾರಿಗಳ ನೆಮ್ಮದಿ ಕಸಿಯುತ್ತಿವೆ. ಅವೈಜ್ಞಾನಿಕವಾದ ಕಾನೂನುಗಳು ವ್ಯಾಪಾರಸ್ಥರನ್ನು ಅತಂತ್ರಗೊಳಿಸುತ್ತಿವೆ. ಹೀಗಿದ್ದರೂ, ಇಂಥ ಕಾನೂನುಗಳ ವಿರುದ್ದ ರಾಜ್ಯ ಸಂಘವು ನಿರಂತರ ಹೋರಾಟ ಮಾಡುತ್ತಾ ಔಷಧ ವ್ಯಾಪಾರಿಗಳ ಹಿತಚಿಂತನೆ ಕಾಯಲು ಬದ್ದವಾಗಿದೆ ಎಂದು ಹೇಳಿದರು. ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಂಬೇಕಲ್ ಜೀವನ್ ಕುಶಾಲಪ್ಪ ಮಾತನಾಡಿ, ಔಷಧ ವ್ಯಾಪಾರಿಗಳು ಸಮಾಜದ ಆರೋಗ್ಯ ರಕ್ಷಕರಂತೆ ಇದ್ದಾರೆ. ವೈದ್ಯರು ಸೂಚಿಸುವ ಔಷಧವನ್ನು ರೋಗಿಗೆ ಸುರಕ್ಷಿತವಾಗಿ ತಲುಪಿಸುವ ಸೇತುವೆಯಂತೆ ಔಷಧಿ ವ್ಯಾಪಾರಸ್ಥರಿದ್ದಾರೆ.

    ಔಷಧಿ ವ್ಯಾಪಾರಸ್ಥರದ್ದು ಖಂಡಿತಾ ಕೇವಲ ವಹಿವಾಟಲ್ಲ. ನಿಜಾಥ೯ದಲ್ಲಿ ಅವರದ್ದು ಮಹೋನ್ನತ ಸೇವೆಯಾಗಿದೆ ಎಂದರು. ಹೊಸ ಫಾಮಾ೯ಭವನ ಕೊಡಗಿನ ಔಷಧ ವ್ಯಾಪಾರಿಗಳ ಪಾಲಿಗೆ ನವನವೀನ ಚಿಂತನೆಯ ಸ್ವರೂಪವಾಗಿದೆ. ಇಲ್ಲಿ ಕೈಗೊಳ್ಳುವ ನಿಧಾ೯ರಗಳು ವ್ಯಾಪಾರಸ್ಥರ ರಕ್ಷಣೆಗೋಸ್ಕರ ಇರಲಿದೆ. ಫಾಮಾ೯ ಭವನ ಜಿಲ್ಲೆಯ ಔಷಧಿ ವ್ಯಾಪಾರಸ್ಥರ ಒಗ್ಗಟ್ಟಿನ ಮನೆಯಂತಿರಲಿದೆ ಎಂದರು. ಸಂಘವು ಜನರ ಆರೋಗ್ಯದ ಹಿತಚಿಂತನೆಯೊಂದಿಗೆ, ಸಮಾಜಮುಖಿಯಾಗಿ ಕಾಯ೯ನಿವ೯ಹಿಸಲಿದೆ ಎಂದೂ ಅವರು ಹೇಳಿದರು. ಜಿಲ್ಲೆಯ ಔಷದ ವ್ಯಾಪಾರಸ್ಥರು ನೈತಿಕತೆಯೊಂದಿಗೆ, ನ್ಯಾಯಯುತ ಮಾಗ೯ದಲ್ಲಿ ಮುಂದೆಯೂ ಹೆಜ್ಜೆಯಿಡಲಿದ್ದಾರೆ ಎಂದೂ ಜೀವನ್ ಭರವಸೆಯಿಂದ ನುಡಿದರು.

    . ಕನಾ೯ಟಕ ಔಷದ ವ್ಯಾಪಾರಿಗಳ ಸಂಘದ ಖಜಾಂಜಿ ಬಿ. ಉಮೇಶ್, ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಗೌರವ ಕಾಯ೯ದಶಿ೯ ಡಿ.ಐ. ಪುರುಷೋತ್ತಮ್, ಉಪಾಧ್ಯಕ್ಷರುಗಳಾದ ಅಂಬೆಕಲ್ ವಿನೋದ್, ಮೇವಿ೯ನ್ ಫನಾ೯ಂಡೀಸ್, ಜಂಟಿ ಕಾಯ೯ದಶಿ೯ ಕೆ.ವಸಂತ್ ಕುಮಾರ್, ಖಜಾಂಚಿ ಪ್ರಸಾದ್ ಗೌಡ, ನಿದೇ೯ಶಕ ಜಗನ್ನಾಥ್, ಡಾ. ಸುಧಾಕರ್ ಶೆಟ್ಟಿ ವೇದಿಕೆಯಲ್ಲಿದ್ದರು..ಶೖಧ್ದಾ ಶಾಸ್ತ್ರಿ ಪ್ರಾಥಿ೯ಸಿ, ಡಿ.ಐ. ಪುರುಷೋತ್ತಮ್,ಸ್ವಾಗತಿಸಿ, ಜಂಟಿ ಕಾಯ೯ದಶಿ೯ ವಸಂತ್ ಕುಮಾರ್ ವಂದಿಸಿ, ವಿನಯ್ ಕುಮಾರ್ ನಿರೂಪಿಸಿದ ಕಾಯ೯ಕ್ರಮದಲ್ಲಿ ಕೊಡಗಿನ ವಿವಿಧೆಡೆಗಳಿಂದ ಬಂದಿದ್ದ ಔಷಧ ವ್ಯಾಪಾರಸ್ಥರು ಪಾಲ್ಗೊಂಡಿದ್ದರು.

    ಸನ್ಮಾನದ ಗೌರವ

    ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದಿಂದ ನಿಮಿ೯ಸಲಾದ ಫಾಮಾ೯ ಭವನದ ಉದ್ಘಾಟನೆ ಸಂದಭ೯ ಹಿರಿಯ ಔಷಧ ವ್ಯಾಪಾರಸ್ಥರನ್ನು ಸನ್ಮಾನಿಸಿ ಗೌರವಿಸಲಾಯಿತು ಫಾಮಾ೯ ಭವನದ ಲೋಕಾಪ೯ಣೆ ಸಂದಭ೯ ಕೊಡಗಿನ ಹಿರಿಯ ಔಷಧ ವ್ಯಾಪಾರಸ್ಥರುಗಳಾದ ವೀರಾಜಪೇಟೆಯ ಗಣೇಶ್ ಮೆಡಿಕಲ್ಸ್ ನ ಸುದಶ೯ನ್ ರೈ, ಕುಶಾಲನಗರದ ರಾಧಾಕೖಷ್ಣ ಮೆಡಿಕಲ್ಸ್ ನ ಶ್ರೀಪತಿ ಎಸ್.ಎಲ್., ಸುಂಟಿಕೊಪ್ಪದ ಅಶ್ವಿನಿ ಮೆಡಿಕಲ್ಸ್ ನ ಕೆ. ಗೋಪಾಲ ಭಟ್ , ನಾಪೋಕ್ಲುವಿನ ರಾಘವೇಂದ್ರ ಮೆಡಿಕಲ್ಸ್ ನ ಎಂ.ಎಂ.ನರೇಂದ್ರ, ಸೋಮವಾರಪೇಟೆಯ ಮೆಡಿಕಲ್ ಎಂಪೋರಿಯಂ ಮೇವಿ೯ನ್ ಫೆನಾ೯ಂಡೀಸ್, ಮಡಿಕೇರಿಯ ವಿನೋದ್ ಮೆಡಿಕಲ್ಸ್ ನ ಅಂಬೆಕಲ್ ಕುಶಾಲಪ್ಪ, ಶನಿವಾರಸಂತೆಯ ಅನ್ನಪೂಣ೯ ಮೆಡಿಕಲ್ಸ್ ನ ಹೆಚ್.ಎಸ್. ಸುರೇಶ್, ಕೊಡ್ಲಿಪೇಟೆಯ ಶ್ರೀನಿವಾಸ ಮೆಡಿಕಲ್ಸ್ ನ ಎಸ್.ಎಸ್. ಶ್ರೀನಿವಾಸ್, ಗೋಣಿಕೊಪ್ಪಲುವಿನ ಕಾವೇರಿ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ನ ಎನ್.ಯು. ಭೀಮಯ್ಯ ಸಂಘದ ಪೂವಾ೯ಧ್ಯಕ್ಷರಾದ ಮಡಿಕೇರಿಯ ರಾಜ್ ಮೆಡಿಕಲ್ಸ್ ನ ಜಿ.ಎಸ್. ಬಸವರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪಾಮಾ೯ ಭವನದ ಗುತ್ತಿಗೆದಾರರಾದ ಮನೋಜ್ಞ ಮತ್ತು ಇಂಜಿನಿಯರ್ ಪ್ರಮೋದ್ ಕುಮಾರ್ ರೈ , ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎ.ಕೆ. ಜೀವನ್, ಸುಮಾ ಜೀವನ್ ಅವರನ್ನೂ ಈ ಸಂದಭ೯ ಸನ್ಮಾನಿಸಲಾಯಿತು

    Previous Article1.5 ಕೋಟಿ ವೆಚ್ಚದ ಕ್ಯಾಮಾಟ್ ಕುಂಬಳದಾಳು ಮೂರ್ನಾಡ್ ರಸ್ತೆ ನವೀಕರಣಕ್ಕೆ ಡಾ ಮಂತರ್ ಗೌಡ ಚಾಲನೆ
    Next Article ಕಬಡಗೇರಿ ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ ವಿತರಿಸಿದ ಶಾಸಕ ಡಾ.ಮಂತರ್ ಗೌಡ

    Related Posts

    ಮೇಕೇರಿಯ ಇಂಪನ ಕೆ.ಡಿ.ಗೆ BCAಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ

    August 25, 2026

    ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕೊಡಗಿನ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ

    August 25, 2026

    ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಕೊಡಗಿನಲ್ಲಿ ಮಹತ್ವದ ಸಮಾಲೋಚನಾ ಸಭೆ

    August 25, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ಮೇಕೇರಿಯ ಇಂಪನ ಕೆ.ಡಿ.ಗೆ BCAಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ

    August 25, 2026

    ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕೊಡಗಿನ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ

    August 25, 2026

    ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಕೊಡಗಿನಲ್ಲಿ ಮಹತ್ವದ ಸಮಾಲೋಚನಾ ಸಭೆ

    August 25, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.