ಐನ್ ಆಪ್ಟಿಕಲ್ಸ್ ಆಪ್ರೋಮೆಟ್ರಿ ಕ್ಲಿನಿಕ್ ಇವರ ಆಶ್ರಯದಲ್ಲಿ ಏರ್ಪಡಿಸಲಾದ ಉಚಿತ ನೇತ್ರ ತಪಾಸಣಾ ಶಿಬಿರ ವನ್ನು ಜಿಲ್ಲಾ ಜೆ ಡಿ ಎಸ್ ಘಟಕದ ಮುಖಂಡರಿಂದ ಉದ್ಘಾಟಿಸಲಾಯಿತು

 

ಐನ್ ಆಪ್ಟಿಕಲ್ಸ್ ಅಪ್ರೋಮೆಟ್ರಿ ಕ್ಲಿನಿಕ್, ಕುಶಾಲನಗರ ಇವರ ಆಶ್ರಯದಲ್ಲಿ

ಅಭ್ಯತ್ ಮಂಗಲ ಗ್ರಾಮೀಣ ಕೃಷಿಪತ್ತಿನ ಸಹಕಾರ ಸಂಘ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಉಚಿತ ನೇತ್ರ ತಪಾಸಣಾ ಶಿಬಿರ, ಹಾಗೂ ಚಿಕಿತ್ಸೆ ಶಿಬಿರವನ್ನು ಕೊಡಗು ಜಿಲ್ಲಾ ಜೆ.ಡಿ.ಎಸ್ ಸಾಮಾಜಿಕ ಜಾಲತಾಣ ಉಪಾಧ್ಯಕ್ಷರು, ನೆಲ್ಯಹುದಿಕೇರಿ ಜೆಡಿಎಸ್ ಗ್ರಾಮ ಸಮಿತಿ ಅಧ್ಯಕ್ಷರಾದ

ಶಿಯಾಬುದ್ದೀನ್ ವಿ.ಪಿ.ಎಸ್ ಉದ್ಘಾಟಿಸಿದರು.

 

ಬಳಿಕಮಾತನಾಡಿದವರು ಅವರು ಸಂಸ್ಥೆಯು ನೀಡುತ್ತಿರುವ ಕಣ್ಣಿನ ತಪಾಸಣೆ ಹಾಗೂ ಉಚಿತ ಸೇವೆಯನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕೆಂದರು.

 

50ಕ್ಕಿಂತಲೂ ಅಧಿಕ ಮಂದಿ ಉಚಿತ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಉಚಿತ ಶಿಬಿರದ ಸದುಪಯೋಗವನ್ನು ಪಡೆದುಕೊಂಡರು.

 

ಶಿಬಿರದಲ್ಲಿ

ಅಗತ್ಯವಿದ್ದವರಿಗೆ ರಿಯಾಯಿತಿ ದರದಲ್ಲಿ ಕನ್ನಡಕಗಳನ್ನು ಸಹ ವಿತರಿಸಲಾಯಿತು.

ಸಂಸ್ಥೆಯಮುಖ್ಯಸ್ಥರಾದ ಫಾಸಿಲ್ ರಹೀಮ್, ಅನ್ಸಾರ್, ಅನ್ಸಾರುದ್ದೀನ್ , ಶಿಫಾನತ್, ಫಾತಿಮತ್ ಅಫೀಫ ಇಬ್ರಾಹಿಂ, ಮತ್ತಿತರರು ಉಪಸ್ಥಿತರಿದ್ದರು.

Exit mobile version