ಸಂಪಾಜೆ ಗ್ರಾಮ ಪಂಚಾಯಿತಿಯಲ್ಲಿ ಯಶಸ್ವಿಯಾಗಿ ನಡೆದ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆ

ವರದಿ:ಝಕರಿಯ ನಾಪೋಕ್ಲು

 

ನಾಪೋಕ್ಲು :ಸಂಪಾಜೆ ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಲಾದ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆ ಭೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

 

ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯತ್ ಅಧ್ಯಕ್ಷರಾದ ರಮಾದೇವಿ ಬಾಲಚಂದ್ರ ಕಳಗಿಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾ ಅಶೋಕ್ ರವರು ಮಾತನಾಡಿ ಮಕ್ಕಳ ಸಹಾಯವಾಣಿ ಮತ್ತು ಅದರ ಉಪಯೋಗ, ಮಕ್ಕಳ ಸ್ವಚ್ಛತೆ ಕುರಿತು ಮಾಹಿತಿ ನೀಡಿದರು.

ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಸಂಯೋಜಕರಾದ ಕೇಶಿನಿ ಅವರು ಬೇಟಿ ಬಚಾವೋ ಬೇಟಿ ಪಡಾವೋ, ಸಹಾಯವಾಣಿ 181,112, ಕುರಿತು ಮಾಹಿತಿ ನೀಡಿ, ಸಂಬಲ್ ಮತ್ತು ಸಾಮರ್ಥ್ಯ ಕಾರ್ಯಕ್ರಮದ ಕುರಿತು ಸಮಗ್ರ ವಿವರಣೆ ನೀಡಿದರು. ಕಾರ್ಯಕ್ರಮದಲ್ಲಿ ವಿಶೇಷ ಚೇತನರ ಸಭೆಯನ್ನು ಕೂಡ ನಡೆಸಲಾಯಿತು.

 

ಈ ಸಂದರ್ಭ ಕಾರ್ಯಕ್ರಮದಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಎ. ಬಿ. ಪೂರ್ಣಿಮಾ ಅರೆಕಲ್ಲು, ಅಭಿವೃದ್ಧಿ ಅಧಿಕಾರಿ ಯಾದವ್, ಪಂಚಾಯತ್ ಸದಸ್ಯರಾದ ನವೀನ,ಪಿ.ಎಲ್. ಸುರೇಶ್,ಸಿ. ವಿ. ಕುಮಾರ,ನಿರ್ಮಲಾ ಭರತ್, ಸಹಾಯವಾಣಿಯ ಜಿಲ್ಲಾ ಸಂಯೋಜಕರಾದ ಮಧು,ಸಂಪಾಜೆ, ಕೊಯಿನಾಡು ಶಾಲೆಯ ಮಕ್ಕಳು, ಶಾಲೆಯ ಶಿಕ್ಷಕ ವೃಂದ,ಪಂಚಾಯತ್ ಸಿಬ್ಬಂದಿಗಳು, ಮಹಿಳೆಯರು, ವಿಶೇಷ ಶೇತನರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.

 

ಕೊಡಗು ನ್ಯೂಸ್

Exit mobile version