ನಿರ್ಗತಿಕ ಕುಟುಂಬಕ್ಕೆ ಧರ್ಮಸ್ಥಳ ಸಂಘ ಆಶ್ರಯ-

ಕೋಕೇರಿಯಲ್ಲಿ ವಾತ್ಸಲ್ಯ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ

ವರದಿ:ಝಕರಿಯ ನಾಪೋಕ್ಲು

 

ನಾಪೋಕ್ಲು :ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಮಡಿಕೇರಿ ತಾಲೂಕಿನ ಭಾಗಮಂಡಲ ವಲಯದ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಕೇರಿಗ್ರಾಮದಲ್ಲಿ ವಾಸವಿರುವ ಜಾಜಿ ಎಂಬವರಿಗೆ ವಾಸಿಸಲು ಯೋಗ್ಯವಾದ ಮನೆ ಇಲ್ಲದ ಕಾರಣ ಧರ್ಮಸ್ಥಳ ಸಂಘದಿಂದ ವಾತ್ಸಲ್ಯ ಮನೆ ಮಂಜುರಾಗಿದ್ದು ಮನೆ ನಿರ್ಮಾಣ ಕಾಮಗಾರಿಯ ಗುದ್ದಲಿ ಪೂಜೆಯನ್ನು ನೆರವೇರಿಸಲಾಯಿತು.

 

ಈ ಸಂದರ್ಭ ಬಾಬು ಆಚಾರ್ಯ, ತೀರ್ಥರಾಮ್, ನಯನ್ ಕುಮಾರ್,ವಲಯ ಮೇಲ್ವಿಚಾರಕರಾದ ಸುನಿಲ್, ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಮಾಲಿನಿ ಸೇವಾ ಪ್ರತಿನಿಧಿ ಪ್ರಭಾ,ಟ್ರಸ್ಟಿನ ಸದಸ್ಯರು,ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

Exit mobile version