ಕಾರ್ಮಾಡು ರಾಮಮಂದಿರದಲ್ಲಿ ಜೆಡಿಎಸ್ ಯುವ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರ ಹುಟ್ಟು ಹಬ್ಬ ಆಚರಣೆ.
ಕೊಡಗು ಜಿಲ್ಲೆಯ
ವಿರಾಜಪೇಟೆ ತಾಲೂಕುಸಮೀಪದ ಅಮ್ಮತ್ತಿ ಕಾರ್ಮಾಡುವಿನ ರಾಮಮಂದಿರದಲ್ಲಿ ಜಾತ್ಯತೀತ ಜನತಾದಳದ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿಯವರ ಹುಟ್ಟು ಹಬ್ಬವನ್ನು ಎಸ್ಸಿ ಎಸ್ಟಿ ಘಟಕದ ಜಿಲ್ಲಾಧ್ಯಕ್ಷೆ ಮಾಜಿ ಗ್ರಾಮ ಪಂಚಾಯಿತಿ ಸದಸ್ಯೆ ಅಮ್ಮತಿ ಜಯಮ್ಮ ಅವರ ನೇತೃತ್ವದಲ್ಲಿ ಪುಟಾಣಿ ಮಕ್ಕಳು ಸಾರ್ವಜನಿಕರು ಮಹಿಳೆಯರು ಹಾಗೂ ಪಕ್ಷದ ಮುಖಂಡರು ಸೇರಿಕೇಕ್ ಕಟ್ ಮಾಡುವ ಮೂಲಕ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿರಾಜಪೇಟೆ ತಾಲೂಕು ಅಧ್ಯಕ್ಷ ಪಿ ಎ ಮಂಜುನಾಥ್, ವಿರಾಜಪೇಟೆ ತಾಲೂಕುಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಮಜೀದ್ ಚೋಕಂಡಳ್ಳಿ , ಮಡಿಕೇರಿ ತಾಲೂಕಿನ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಅಶ್ರಫ್ ಹಾಕತ್ತೂರು, ಕುಶಾಲನಗರ ತಾಲೂಕು ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಶಿ ಯಾಬುದ್ದೀನ್ ವಿ.ಪಿ.ಎಸ್, ನಲ್ಯ ಹುದಿಕೇರಿ,ವಿರಾಜಪೇಟೆ ತಾಲ್ಲೂಕು ಕಾರ್ಯದರ್ಶಿ,ಹರ್ಷ ಟಿ ಆರ್, ಮೇಘನಾ, ಸುಮತಿ,ಗೀತಾ , ಸರಸು ಸೇರಿದಂತೆ ಪಕ್ಷದ ಕಾರ್ಯಕರ್ತರು, ಗ್ರಾಮಸ್ಥರು ಪುಟಾಣಿಗಳು ಉಪಸ್ಥಿತರಿದ್ದರು.
Janata Dal Secular H D Kumaraswamy Nikhil ಗೌಡ
ಕೊಡಗು ನ್ಯೂಸ್



