Close Menu
Kodagu News
    ಹೊಸ ಸುದ್ದಿ

    ಭಾರೀ ಗಾಳಿ ಮಳೆಗೆ ಮರ ಉರುಳಿ ಇಬ್ಬರು ಮಹಿಳಾ ಕಾರ್ಮಿಕರ ದುರ್ಮರಣ

    July 29, 2026

    ಮಡಿಕೇರಿ ವ್ಯಾಪ್ತಿಯಲ್ಲಿ ಭಾರಿ ಮಳೆ: ಸಂಜೆಯಿಂದ ಬಿಡುವಿಲ್ಲದೆ ಸುರಿಯುತ್ತಿರುವ ವರುಣ

    July 29, 2026

    ಪ್ರವಾಸಿಗರ ಸ್ವರ್ಗ ಮಡಿಕೇರಿಯಲ್ಲಿ ದಿನಾ ನರಕಯಾತನೆ

    July 29, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ಭಾರೀ ಗಾಳಿ ಮಳೆಗೆ ಮರ ಉರುಳಿ ಇಬ್ಬರು ಮಹಿಳಾ ಕಾರ್ಮಿಕರ ದುರ್ಮರಣ
    • ಮಡಿಕೇರಿ ವ್ಯಾಪ್ತಿಯಲ್ಲಿ ಭಾರಿ ಮಳೆ: ಸಂಜೆಯಿಂದ ಬಿಡುವಿಲ್ಲದೆ ಸುರಿಯುತ್ತಿರುವ ವರುಣ
    • ಪ್ರವಾಸಿಗರ ಸ್ವರ್ಗ ಮಡಿಕೇರಿಯಲ್ಲಿ ದಿನಾ ನರಕಯಾತನೆ
    • ಎಸ್ ಎಸ್ ಎಫ್ ಸಾಹಿತ್ಯೋತ್ಸವ ನಾಪೋಕ್ಲುವಿನ ಅಸ್ಕರ್ ರಾಜ್ಯಮಟ್ಟಕ್ಕೆ ಆಯ್ಕೆ
    • ಗರ್ಭಿಣಿ ಹಾಗೂ ಗರ್ಭದಲ್ಲಿದ್ದ ಅವಳಿ ಮಕ್ಕಳ ಸಾವಿಗೆ ವೈದ್ಯಕೀಯ ನಿರ್ಲಕ್ಷ್ಯ ಕಾರಣ?: ಜಿಲ್ಲಾ ಆಸ್ಪತ್ರೆ ವೈದ್ಯರು, ಸಿಬ್ಬಂದಿ ವಿರುದ್ಧ ದೂರು
    • ಮಡಿಕೇರಿಯ ಜಿಟಿ ರಸ್ತೆಯಲ್ಲಿ ಕೆಸರಿನ ಕಾಟ: ಸಾರ್ವಜನಿಕರ ಆಕ್ರೋಶ
    • ಮಾಲ್ದಾರೆ ಸಿದ್ದೇಶ್ವರ ದೇವಸ್ಥಾನ ಪ್ರಕರಣ: ಎಫ್‌ಐಆರ್ ವಿಳಂಬ ಖಂಡಿಸಿ ಪ್ರತಿಭಟನೆ ಮುಂದುವರಿಕೆ
    • ಸೋಮವಾರಪೇಟೆಯಲ್ಲಿ ಬಿಜೆಪಿ ಪ್ರತಿಭಟನೆ: ಕಾಂಗ್ರೆಸ್‌ ವಿರುದ್ಧ ಆಕ್ರೋಶ
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ದೇಶ ವಿದೇಶ»ರಸ್ತೆ ಅಪಘಾತ ತಡೆಯಲು ಹೊಸ ತಂತ್ರಜ್ಞಾನ ಪರಿಚಯಿಸಿದ ಕೇಂದ್ರ ಸರ್ಕಾರ
    ದೇಶ ವಿದೇಶ

    ರಸ್ತೆ ಅಪಘಾತ ತಡೆಯಲು ಹೊಸ ತಂತ್ರಜ್ಞಾನ ಪರಿಚಯಿಸಿದ ಕೇಂದ್ರ ಸರ್ಕಾರ

    ರಸ್ತೆ ಅಪಘಾತ ತಡೆಯಲು ಹೊಸ ತಂತ್ರಜ್ಞಾನ ಪರಿಚಯಿಸಿದ ಕೇಂದ್ರ ಸರ್ಕಾರ

    2026ಕ್ಕೆ ಎಲ್ಲ ವಾಹನಗಳಿಗೆ ಅಳವಡಿಕೆ

    ರಸ್ತೆ ಸಾರಿಗೆ ಸಚಿವಾಲಯ 2026 ರ ವೇಳೆಗೆ ಭಾರತದಲ್ಲಿ V2V ಸಂವಹನ ವ್ಯವಸ್ಥೆಗಳನ್ನು ಪರಿಚಯಿಸಲು ಸಜ್ಜಾಗಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಿಸಿದಂತೆ, ಈ ತಂತ್ರಜ್ಞಾನವು ವಾಹನಗಳ ನಡುವೆ ಸುರಕ್ಷತಾ ಮಾಹಿತಿ ವಿನಿಮಯಕ್ಕೆ ನೆರವಾಗಲಿದೆ. ಇಂಟರ್ನೆಟ್ ಇಲ್ಲದೆ ಸ್ಥಳೀಯ ವೈರ್‌ಲೆಸ್ ಸಿಗ್ನಲ್‌ಗಳ ಮೂಲಕ ಕಾರ್ಯನಿರ್ವಹಿಸುವ ಇದು ಅಪಘಾತಗಳನ್ನು ತಡೆಯಲು ನಿರ್ಣಾಯಕವಾಗಿದೆ. ಪ್ರತಿ ವಾಹನಕ್ಕೆ ಕೆಲವು ಸಾವಿರ ರೂ. ವೆಚ್ಚವಾಗುವ ನಿರೀಕ್ಷೆಯಿದೆ.

     

    ಭಾರತದಾದ್ಯಂತ ಅಪಘಾತಗಳನ್ನು ತಪ್ಪಿಸಲು ಹೊಸ ತಂತ್ರಜ್ಞಾನವನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ. ವಾಹನದಿಂದ ವಾಹನಕ್ಕೆ (V2V) ಸಂವಹನ ವ್ಯವಸ್ಥೆಗಳನ್ನು (V2V Tech Revolution) ಪರಿಚಯಿಸುವ ನಿಟ್ಟಿನಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನೂತನ ಕ್ರಮವನ್ನು ತಂದಿದೆ. ಈ ಯೋಜನೆ 2026 ರ ವೇಳೆಗೆ ಇದನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ. ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. V2V ತಂತ್ರಜ್ಞಾನವು ರಸ್ತೆಗಳಲ್ಲಿ ವಾಹನಗಳ ಸುರಕ್ಷತೆಗೆ ಸಂಬಂಧಿಸಿದ ಮಾಹಿತಿಯನ್ನು ನೇರವಾಗಿ ಪರಸ್ಪರ ವಿನಿಮಯ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಸಂವಹನವು ಮೊಬೈಲ್ ನೆಟ್‌ವರ್ಕ್‌ಗಳು ಅಥವಾ ಇಂಟರ್ನೆಟ್ ಸಂಪರ್ಕವಿಲ್ಲದೆ, ಬದಲಾಗಿ, ವಾಹನಗಳು ಸ್ಥಳೀಯವಾಗಿ ಅಲ್ಪ-ಶ್ರೇಣಿಯ ವೈರ್‌ಲೆಸ್ ಸಿಗ್ನಲ್‌ಗಳನ್ನು ಬಳಸಿಕೊಂಡು ಸಂವಹನ ನಡೆಸುತ್ತವೆ. ನೆಟ್‌ವರ್ಕ್ ಇಲ್ಲದ ಪ್ರದೇಶಗಳಲ್ಲಿಯೂ ಸಹ ಈ ವ್ಯವಸ್ಥೆಯು ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.

    ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಭಿವೃದ್ಧಿಪಡಿಸುತ್ತಿರುವ ಚೌಕಟ್ಟಿನ ಅಡಿಯಲ್ಲಿ, ವಾಹನಗಳಿಗೆ ಮೀಸಲಾದ ಹಾರ್ಡ್‌ವೇರ್ ಮಾಡ್ಯೂಲ್ ಅಳವಡಿಸಲಾಗುವುದು. ಇದು ಹತ್ತಿರದ ಸಂಚಾರದೊಂದಿಗೆ ಅಲ್ಪ-ಶ್ರೇಣಿಯ ಸಂವಹನ ನಡೆಸುತ್ತದೆ. ಇದು ವಾಹನಗಳು ವ್ಯಾಪ್ತಿಯಲ್ಲಿರುವವರೆಗೆ ನೈಜವಾಗಿ ಕಾರ್ಯನಿರ್ವಹಿಸುತ್ತದೆ. ಇದರ ವಿನಿಮಯವಾಗುವ ಡೇಟಾ ಸೀಮಿತವಾಗಿರುತ್ತದೆ. ಇದು ಮುಂದೆ ಇರುವ ಅಪಾಯಕಾರಿ ಪರಿಸ್ಥಿತಿಯನ್ನು ಗುರುತಿಸುತ್ತದೆ. ಉದಾಹರಣೆಗೆ, ಮುಂದಿರುವ ವಾಹನವು ವೇಗವಾಗಿ ಬರುತ್ತಿದ್ದರೆ, ಅದನ್ನು ನಿಧಾನವಾಗಿಸುವಂತೆ ಸೂಚಿಸುತ್ತದೆ. ಒಂದು ವೇಳೆ ಚಾಲಕನ ನಿಯಂತ್ರಣ ತಪ್ಪಿ ವೇಗವಾಗಿ ಬಂದರೆ ಅದನ್ನು ತಡೆಯುವುದಿಲ್ಲ. ಆದರೆ ಮೊದಲೇ ಈ ಬಗ್ಗೆ ಸೂಚನೆಯನ್ನು ನೀಡುತ್ತದೆ.

    ಸಚಿವಾಲಯದ ದೃಷ್ಟಿಕೋನದ ಪ್ರಕಾರ, V2Vಯು ವಾಹನಗಳಿಗೆ ಮುಖ್ಯವಾಗಿರುತ್ತದೆ. ಹಲವು ಅಪಾಯಗಳನ್ನು ತಡೆಯುತ್ತದೆ. ಬ್ರೇಕ್​​ ಫೇಲ್, ವೇಗವಾಗಿ ಬರುವುದು, ಇತರ ಅಪಾಯಕಾರಿ ವಿಚಾರಗಳ ಬಗ್ಗೆ ಸೂಚನೆಯನ್ನು ನೀಡುತ್ತದೆ. ಈ ವ್ಯವಸ್ಥೆಗೆ ತಾಂತ್ರಿಕ ಮಾನದಂಡಗಳು ಮತ್ತು ಸಂವಹನ ಪ್ರೋಟೋಕಾಲ್‌ಗಳನ್ನು ಅಂತಿಮಗೊಳಿಸುವ ಉದ್ದೇಶದಿಂದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಕಾರಿಗಳು ವಾಹನ ತಯಾರಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ತಕ್ಷಣದಲ್ಲಿ ಈ ನಿಯಮ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ದೇಶಾದ್ಯಂತ ಈ ಬಗ್ಗೆ ಕಾರ್ಯಚರಣೆ ಹಾಗೂ ಅಭಿಯಾನವನ್ನು ನಡೆಸಲಾಗುವುದು ಎಂದು ಸಚಿವಾಲಯ ಹೇಳಿದೆ. ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ವಿಶ್ವಾಸಾರ್ಹ ಕಾರ್ಯಾಚರಣೆ ಮಾಡುತ್ತದೆ ಎಂದು ಹೇಳಲಾಗಿದೆ.

    ಇದನ್ನು ವಾಹನದಲ್ಲಿ ಅಳವಡಿಸಲು ಆಗುವ ವೆಚ್ಚದ ಬಗ್ಗೆ ನಿಖರವಾಗಿ ತಿಳಿಸಿಲ್ಲ. ಆದರೆ ಹೆಚ್ಚುವರಿ ಹಾರ್ಡ್‌ವೇರ್ ಪ್ರತಿ ವಾಹನಕ್ಕೆ ಕೆಲವು ಸಾವಿರ ರೂಪಾಯಿ ಆಗಬಹುದು ಎಂದು ಹೇಳಲಾಗಿದೆ. ಈ ವ್ಯವಸ್ಥೆಯು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳಂತಹ ಅಸ್ತಿತ್ವದಲ್ಲಿರುವ ಸುರಕ್ಷತಾ ತಂತ್ರಜ್ಞಾನಗಳ ಜೊತೆಗೆ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ. ಈಗಾಗಲೇ ಹಲವು ವಾಹಳಲ್ಲಿ ಕ್ಯಾಮರ ಹಾಗೂ ಇತರ ಎಚ್ಚರಿಕೆ ಧ್ವನಿವರ್ಧಕಗಳನ್ನು ಬಳಸುವ ಬದಲು ಈ ತಂತ್ರಜ್ಞಾನವನ್ನು ಬಳಸುವುದು ಉತ್ತಮ ಎಂದು ಹೇಳಲಾಗಿದೆ. ಪ್ರತಿ ವರ್ಷವೂ ರಸ್ತೆ ಅಪಘಾತಗಳು ಹೆಚ್ಚುತ್ತ ಇದೆ . ಇದನ್ನು ತಡೆಯಲು ಸರ್ಕಾರದ ದೃಷ್ಟಿಕೋನದಿಂದ, V2V ಸಂವಹನವು ಸಾಧನ ತರಲಾಗಿದೆ.

    Previous Articleಪ್ರಜಾಪ್ರಭುತ್ವವನ್ನು ನಾಶಗೊಳಿಸಲು ಬಿಜೆಪಿ ಹುನ್ನಾರ ನಡೆಸುತ್ತಿದೆ. ಸಚಿವ ಬೋಸರಾಜ್ ಆಕ್ರೋಶ
    Next Article ಗ್ರಾಮೀಣ ಪ್ರದೇಶ ಶೈಕ್ಷಣಿಕವಾಗಿ ಮುಂದುವರೆದಿದೆ-ಪಟ್ಟಡ ಧನು ಉತ್ತಯ್ಯ

    Related Posts

    ಭಾರೀ ಗಾಳಿ ಮಳೆಗೆ ಮರ ಉರುಳಿ ಇಬ್ಬರು ಮಹಿಳಾ ಕಾರ್ಮಿಕರ ದುರ್ಮರಣ

    July 29, 2026

    ಮಡಿಕೇರಿ ವ್ಯಾಪ್ತಿಯಲ್ಲಿ ಭಾರಿ ಮಳೆ: ಸಂಜೆಯಿಂದ ಬಿಡುವಿಲ್ಲದೆ ಸುರಿಯುತ್ತಿರುವ ವರುಣ

    July 29, 2026

    ಪ್ರವಾಸಿಗರ ಸ್ವರ್ಗ ಮಡಿಕೇರಿಯಲ್ಲಿ ದಿನಾ ನರಕಯಾತನೆ

    July 29, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ಭಾರೀ ಗಾಳಿ ಮಳೆಗೆ ಮರ ಉರುಳಿ ಇಬ್ಬರು ಮಹಿಳಾ ಕಾರ್ಮಿಕರ ದುರ್ಮರಣ

    July 29, 2026

    ಮಡಿಕೇರಿ ವ್ಯಾಪ್ತಿಯಲ್ಲಿ ಭಾರಿ ಮಳೆ: ಸಂಜೆಯಿಂದ ಬಿಡುವಿಲ್ಲದೆ ಸುರಿಯುತ್ತಿರುವ ವರುಣ

    July 29, 2026

    ಪ್ರವಾಸಿಗರ ಸ್ವರ್ಗ ಮಡಿಕೇರಿಯಲ್ಲಿ ದಿನಾ ನರಕಯಾತನೆ

    July 29, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.