ಹೊಸ್ಕೇರಿ ತೋಟದ ಲೈನ್ ಮನೆಯಲ್ಲಿ ಕೊಲೆ ಪ್ರಕರಣ – ಎಂಟು ಮಂದಿ ಆರೋಪಿಗಳ ಬಂಧನ
ಮಡಿಕೇರಿ : ಕುಡಿದ ಮತ್ತಿನಲ್ಲಿ ತಂದೆಯನ್ನೇ ಹತ್ಯೆ ಮಾಡಿದ ಮಗ ಹಾಗೂ ಉಳಿದ ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಹೊಸ್ಕೇರಿ ಗ್ರಾಮದ ದೇವಯ್ಯರವರ ತೋಟದ ಲೈನ್‌ಮನೆಯಲ್ಲಿದ್ದ ಪ್ರಶಾಂತ್ ಮುದಿ (27), ದೇವಯ್ಯ ಎಂ ಎಸ್ (71), ಭಾರತಿ ಎಂ.ಡಿ (57), ಶ್ರೀಕಾಂತ್ ಮುದಿ (25), ಸುಧನ್ ಮುದಿ (25), ಲಕ್ಷ್ಮಿ ಮುದಿ (37), ತನುಶ್ರೀ (20), ಬಸಂತಿ ಮುದಿ (49) ಬಂಧಿತ ಆರೋಪಿಗಳು.
ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಟ್ಟೆಮಾಡು ಗ್ರಾಮದ ಹೊಸ್ಕೇರಿಯಲ್ಲಿ ತೋಟದ ಲೈನ್‌ಮನೆಯಲ್ಲಿ ವಾಸವಿದ್ದ ಬಂಗಾಳ ಮೂಲದ ಕಾರ್ಮಿಕ ಬುರೋ ಎಂಬಾತನನ್ನು ಜ.11 ರಂದು ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿ ಕೊಲೆ ಮಾಡಿ ದೇಹವನ್ನು ಸುಟ್ಟು ಹಾಕಿರುವ ಕುರಿತು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ತನಿಖೆ ನಡೆಸಿದ ಸಂದರ್ಭ ಜ.11 ರಂದು ಮಧ್ಯಪಾನ ಮಾಡಿ ಕ್ಷುಲಕ ಕಾರಣಕ್ಕೆ ಬುರೋ ಹಾಗೂ ಪ್ರಶಾಂತ್ ಮುದಿ ಜಗಳವಾಡಿದ್ದರು. ಈ ಸಂದರ್ಭ ಮಗ ಪ್ರಶಾಂತ್ ಮುದಿ ತಂದೆಯನ್ನು ಹತ್ಯೆ ಮಾಡಿ ದೇಹವನ್ನು ಸುಟ್ಟುಹಾಕಿ ಸಾಕ್ಷ್ಯನಾಶ ಮಾಡಿರುವುದು ತನಿಖೆಯಲ್ಲಿ ಕಂಡು ಬಂದಿದೆ, ಉಳಿದ ಆರೋಪಿಗಳು ಮೃತದೇಹವನ್ನು ಸಾಗಿಸಲು ಸಹಾಯ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


