ಅಸ್ಸಾಂ ಕಾರ್ಮಿಕರ ಬಗ್ಗೆ ಮಾಹಿತಿ ನೀಡಿ:ಪೊಲೀಸ್ ಪ್ರಕಟಣೆ

ಈ ಮೂಲಕ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಾರ್ವಜನಿಕರಲ್ಲಿ ತಿಳಿಯಪಡಿಸುವುದೇನೆಂದರೆ, ಮಡಿಕೇರಿ ಗ್ರಾಮಾತರ ವ್ಯಾಪ್ತಿಯಲ್ಲಿ ಬರುವ ಮೇಕೇರಿ, ಬಿಳಿಗೇರಿ ಮತ್ತು ಕಗ್ಗೋಡ್ಲು ಗ್ರಾಮದ ಕಾಫಿ ತೋಟದ ಮಾಲೀಕರು, ಹೋಟೆಲ್ ಮಾಲೀಕರು,ಅಂಗಡಿ ಮಾಲೀಕರು,ವ್ಯಾಪಾರಸ್ಥರು,ಮನೆ ಕಟ್ಟಡ ಮಾಲೀಕರು ಹೊರ ರಾಜ್ಯದಿಂದ ಕೂಲಿ ಕೆಲಸಕ್ಕೆ ಬಂದಂತಹ ವ್ಯಕ್ತಿಗಳ ಬಗ್ಗೆ ಪೊಲೀಸ್ ಠಾಣೆಗೆ ಅವರ ವಿವರಗಳನ್ನು ನೀಡಬೇಕಾಗಿದ್ದು, ಮಾಹಿತಿ ನೀಡಲು ತಪ್ಪಿದ್ದಲ್ಲಿ, ಅಕ್ರಮ/ವಲಸಿಗ ಕೂಲಿ ಕಾರ್ಮಿಕರು ಯಾವುದೇ ರೀತಿ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದರೆ ಆಶ್ರಯ/ಕೆಲಸ ಕೊಟ್ಟವರ ಮೇಲೆ ಸೂಕ್ತ ಕಾನೂನು ರೀತಿ ಕ್ರಮ ಕೈಗೊಳ್ಳಗವುದು ಎಂದು ಈ ಮೂಲಕ ತಿಳಿಸಲಾಗಿದೆ.

ಕೊಡಗು ನ್ಯೂಸ್

Exit mobile version