ಎಸ್‌ಎಸ್‌ಎಫ್ ನೆಲ್ಲಿಹುದಿಕೇರಿ ಸೆಕ್ಟರ್ 2026-27ನೇ ಸಾಲಿನ ನೂತನ ಕಾರ್ಯಾಕಾರಿಣಿ ಸಮಿತಿ ಅಸ್ತಿತ್ವಕ್ಕೆ
ನೆಲ್ಲಿಹುದಿಕೇರಿ: ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ಎಸ್‌ಎಸ್‌ಎಫ್) ನೆಲ್ಲಿಹುದಿಕೇರಿ ಸೆಕ್ಟರ್‌ನ 2026-27ನೇ ಸಾಲಿನ ಪುನರ್ರಚನಾ ಕೌನ್ಸಿಲ್ ಜನವರಿ 5, ಸೋಮವಾರದಂದು ನೆಲ್ಲಿಹುದಿಕೇರಿ ಸಾಂತ್ವನ ಭವನದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಜರುಗಿತು. ಸಂಘಟನಾತ್ಮಕ ಬಲವರ್ಧನೆ ಮತ್ತು ವಿದ್ಯಾರ್ಥಿ ಚಟುವಟಿಕೆಗಳಿಗೆ ಹೊಸ ವೇಗ ನೀಡುವ ನಿಟ್ಟಿನಲ್ಲಿ ನೂತನ ಸಾರಥಿಗಳನ್ನು ಈ ಸಂದರ್ಭದಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳು (2026-27):
ಅಧ್ಯಕ್ಷರು: ಅಬ್ದುಲ್ ಹಕೀಂ ಅನ್ವಾರಿ ಅಲ್ ಅಹ್ಸನಿ ನೆಲ್ಲಿಹುದಿಕೇರಿ
ಪ್ರಧಾನ ಕಾರ್ಯದರ್ಶಿ: ಮುಹಮ್ಮದ್ ರಿಯಾಜ್ ನೆಲ್ಲಿಹುದಿಕೇರಿ
ಹಣಕಾಸು ಕಾರ್ಯದರ್ಶಿ: ಇಸ್ಹಾಕ್ ಕಂಡಕ್ಕರೆ
ಉಪಾಧ್ಯಕ್ಷರು: ಇಬ್ರಾಹಿಂ ಅನ್ವಾರಿ ಸಖಾಫಿ ಕಂಡಕ್ಕರೆ
ಹಾಗೂ ಸಂಘಟನೆಯ ವಿವಿಧ ವಿಭಾಗಗಳ ಉಸ್ತುವಾರಿಗಾಗಿ ಕಾರ್ಯದರ್ಶಿಗಳು ಕನ್ವೀನರ್ಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರನ್ನು ಒಳಗೊಂಡ ಬಲಿಷ್ಠ ತಂಡವನ್ನು ರಚಿಸಲಾಯಿತು.
ಎಸ್‌ಎಸ್‌ಎಫ್ ಕೊಡಗು ಜಿಲ್ಲಾ ಸಮಿತಿ ಹಾಗೂ ಸೋಮವಾರಪೇಟೆ ಡಿವಿಷನ್ ಸಮಿತಿಯ ಪ್ರಮುಖ ನಾಯಕರ ಘನ ಉಪಸ್ಥಿತಿಯಲ್ಲಿ ಈ ಆಯ್ಕೆ ಪ್ರಕ್ರಿಯೆಯು ಸಂಪನ್ನಗೊಂಡಿತು. ಕೌನ್ಸಿಲ್ ಉದ್ದೇಶಿಸಿ ಮಾತನಾಡಿದ ನಾಯಕರು, ಶೈಕ್ಷಣಿಕ ಕ್ರಾಂತಿ ಮತ್ತು ಸಾಮಾಜಿಕ ಸೇವೆಯಲ್ಲಿ ಎಸ್‌ಎಸ್‌ಎಫ್ ಕಾರ್ಯಕರ್ತರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.
ನೂತನ ಸಮಿತಿಯು ಮುಂಬರುವ ಅವಧಿಯಲ್ಲಿ ಸೆಕ್ಟರ್ ವ್ಯಾಪ್ತಿಯಲ್ಲಿ ಮಾದರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದೆ. ಕಾರ್ಯಕ್ರಮದಲ್ಲಿ ವಿವಿಧ ಶಾಖೆಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪಾಲ್ಗೊಂಡು ನೂತನ ನಾಯಕತ್ವಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.


