ಶಾಸಕ ಎ. ಎಸ್ ಪೊನ್ನಣ್ಣನವರಿಂದ ಕ್ರೀಡಾ ತರಬೇತಿ ಕೇಂದ್ರದ ಕಾಮಗಾರಿ ಪರಿಶೀಲನೆ

ವಿ ಬಾಡಗದಲ್ಲಿ ಆಯೋಜನೆಗೊಂಡ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕ್ರಮದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು.

ವಿ.ಬಾಡಗದಲ್ಲಿ ನಡೆಯುತ್ತಿರುವ ಕ್ರೀಡಾ ತರಬೇತಿ ಕೇಂದ್ರದ ಕಾಮಗಾರಿಯನ್ನು ಮಾನ್ಯ ಶಾಸಕರು ವೀಕ್ಷಿಸಿದರು. ಈ ಸಂದರ್ಭದಲ್ಲಿ ಮಾನ್ಯ ಶಾಸಕರೊಂದಿಗಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಕಾಮಗಾರಿ ಹಾಗೂ ರೂಪುರೇಷೆಗಳ ಬಗ್ಗೆ ಮಾಹಿತಿ ಒಡಗಿಸಿದರು.

ಈ ಸಂದರ್ಭದಲ್ಲಿ ಕೊಲ್ಲಿರ ಬೋಪಣ್ಣ ,ಉಮೇಶ್ ಕೆಚಮಯ್ಯ,ಕಂಜಿತಂಡ ಗಿಣಿ ಮೊಣ್ಣಪ್ಪ, ಕಂಜಿತಂಡ ಪೂವಣ್ಣ, ಕೊಂಗಂಡ ಕಾಶಿ ಕಾರ್ಯಪ್ಪ, ತೀತಿಮಾಡ ಸಧಾ, ಕೊಂಗಂಡ ರಚನ್ ಉತಪ್ಪ, ಚೆಂದಂಡ ರಂಜಿತ್, ಚೇಮಿರ ಧವನ್ ದೇವಯ್ಯ, ತೀತಿಮಾಡ ಬೋಸು ಅಯ್ಯಪ್ಪ, ಚೇಮಿರ ಪ್ರಕಾಶ್ ಪೂವಯ್ಯ, ಚಂದುರ ಜಗನ್ ಬೋಪಯ್ಯ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Exit mobile version