ಜೋಪಡಿಯಲ್ಲಿದ್ದ ಬೈರಿ ಅಜ್ಜಿಗೆ ಸೂರು ಒದಗಿಸಿ ದೇವರಾದ ಪಿ.ಎಂ. ಲತೀಫ್
✍️ದೇವಪ್ಪ, ಹರದೂರು
ಕೊಡಗು ಜಿಲ್ಲೆಯ ಗರಗಂದೂರು ಮಲ್ಲಿಕಾರ್ಜುನ ಕಾಲೋನಿಯಲ್ಲಿ ಬಡ ಕೂಲಿ ಕಾರ್ಮಿಕರು ಹೆಚ್ಚಾಗಿ ವಾಸವಾಗಿರುವ ಸುಮಾರು ಇನ್ನೂರು ಮನೆಗಳಿವೆ.
ಅವರಲ್ಲಿ ಕೌಟುಂಬಿಕ ಕಲಹದಿಂದ ನಿರ್ಲಕ್ಷ್ಯಕ್ಕೆ ಒಳಗಾದ ಪರಿಶಿಷ್ಠ ಜಾತಿಯ ಬೈರಿ ಅಜ್ಜಿ ಮತ್ತು ಬುದ್ದಿ ಮಾಂದ್ಯ ಮಗ, ದುಡಿದು ಬದುಕಲು ಸಾಧ್ಯವಿಲ್ಲದ ಪರಿಸ್ಥಿತಿ ಸರ್ಕಾರದಿಂದ ಮನೆ ಮಂಜೂರಾಗಿದ್ದರೂ ಕೂಡ ಕಟ್ಟಿಕೊಳ್ಳಲಾಗದೆ ಗುಡಿಸಲಿನಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಬದುಕುತಿದ್ದರು. ಅದನ್ನು ಪ್ರಜ್ಞಾವಂತ ನಾಗರಿಕರು ಮಾಧ್ಯಮಗಳ ಮೂಲಕ ಬೆಳಕಿಗೆ ತಂದುದ್ದರಿಂದ ಸರಕಾರ ಮತ್ತು ದಾನಿಗಳ ನೆರವಿನಿಂದ ನೇರವಾಗಿ ಮನೆ ಬಾಗ್ಯ ಒಲಿದು ಬಂತು.
ಶಾಸಕರಾದ ಡಾ. ಮಂತರ್ ಗೌಡ ಹಾಗೂ ದಾನಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸುಂಟಿಕೊಪ್ಪದ ಪಿ.ಎಂ. ಲತೀಪ್ ರವರು ಮಾನವೀಯತೆ ಮೆರೆದು ಮನೆ ನಿರ್ಮಿಸಿ ಕೊಟ್ಟು ಅಜ್ಜಿಯ ಬಾಳಿಗೆ ಬೆಳಕಾದರು.
ದೇವರು ಅವರಿಗೆ ಬಡವರ ಸೇವೆಗೆ ಇನ್ನಷ್ಟು ಆರೋಗ್ಯ ಐಶ್ವರ್ಯ ಭಾಗ್ಯ ಕೊಟ್ಟು ಕಾಪಾಡಲಿ ಎಂಬುವುದು ಎಲ್ಲರ ಪ್ರಾರ್ಥನೆ.
ಭಿಕ್ಷೆ ಬೇಡಿ ಬದುಕುವವರಿಗೆ ಒಂದು ರೂಪಾಯಿ ಕೊಡಲು ಹಿಂದೆ ಮುಂದೆ ನೋಡುವ ಜನರಿರುವ ಈ ಪ್ರಪಂಚದಲ್ಲಿ ಎಷ್ಟೋ ಜನ ದೊಡ್ಡ ದೊಡ್ಡ ಶ್ರೀಮಂತರು ಇದ್ದಾರೆ. ಅಂತವರಲ್ಲಿ ಇಂತಹ ಹೃದಯ ಶ್ರೀಮಂತಿಕೆ ಇರುವವರು
ಬಹಳ ಕಡಿಮೆ. ಇಂತಹ ಪುಣ್ಯಾತ್ಮರು ಎಲ್ಲಾರೀಗೂ ಸ್ಫೂರ್ತಿ ಯಾಗಲಿ. ದಯೆಯೆ ಧರ್ಮದ ಮೂಲವಯ್ಯ
ದಯೆಗಿಂತ ದೊಡ್ಡ ಧರ್ಮ ಯಾವುದಯ್ಯ ಎಂಬಂತೆ
ಇಂತಹ ಮಹಾನುಭವರು
ಇನ್ನಷ್ಟು ಬಡವರ ಬದುಕಿಗೆ ಬೆಳಕಾಗಿ ಬರಲಿ.
ಸರ್ಕಾರದಿಂದ ಮನೆ ಮಂಜೂರಾದರೂ ದಾಖಲೆಗಳ
ಕೊರತೆಯಿಂದ ಎಷ್ಟೋ ಬಡ ಕುಟುಂಬಗಳು ಆಶ್ರಯಕ್ಕೆ ಮನೆಯಿಲ್ಲದೆ ವಂಚಿತರಾಗಿದ್ದಾರೆ. ಅಂತವರ ಕಷ್ಟಕ್ಕೆ ಸರ್ಕಾರ ಶಾಸಕರ ಜನಪ್ರತಿನಿಧಿಗಳ ಮತ್ತು ದಾನಿಗಳ ನೆರವು ಅಗತ್ಯವಾಗಿದೆ.
ಆದ್ದರಿಂದ ದಯಮಾಡಿ ಎಲ್ಲರೂ ಮುಂದೆ ಬಂದು ಕೈ ಜೋಡಿಸಿದರೆ ಆದಷ್ಟು ಬೇಗನೆ
ಅದೆಷ್ಟೋ ಕತ್ತಲಲ್ಲಿ ಬದುಕುತ್ತಿರುವ ಬಡವರ ಬಾಳು ಬೆಳಕಾಗಬಹುದು.
✍️ದೇವಪ್ಪ, ಹರದೂರು


