ರಾಷ್ಟ್ರೀಯ ನಾಟ್ಯ ಕದಂಬ, ರಾಷ್ಟ್ರೀಯ ನಾಟ್ಯ ಪ್ರವೀಣೆ ರಾಷ್ಟ್ರ ಪ್ರಶಸ್ತಿ ಗೆ ಕೊಡಗಿನ ನೃತ್ಯ ಪಟುಗಳು ಬಾಜನ
ಕುಶಾಲನಗರ: ಏಂಜಲ್ಸ್ ವಿಂಗ್ಸ್ ಸ್ಕೂಲ್ ಆಫ್ ಡಾನ್ಸ್ ನೃತ್ಯ ಗುರುಗಳ ಹಾಗೂ ವಿದ್ಯಾರ್ಥಿಗಳ ಸಾಧನೆ
ಚಿಕ್ಕಬಳ್ಳಾಪುರದ ಕನ್ನಡ ಭವನದಲ್ಲಿ ನಡೆದ ರಾಷ್ಟ್ರೀಯ ಅಖಿಲ ಭಾರತ ನೃತ್ಯೋತ್ಸವದಲ್ಲಿ ಕೊಡಗಿನ ಕುಶಾಲನಗರದ ಏಂಜಲ್ಸ್ ವಿಂಗ್ಸ್ ಸ್ಕೂಲ್ ಆಫ್ ಡಾನ್ಸ್ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.
“ಶಾನ್ವಿ ಸದಾನಂದ”, “ಧನ್ವಿತ ಇ. ಡಿ”, “ಭಾಮಿನಿ ಮೌರ್ಯ”, “ಕೃತಿಕ” ಹಾಗೂ “ಏಂಜಲ್ಸ್ ವಿಂಗ್ಸ್ ಸ್ಕೂಲ್ ಆಫ್ ಡಾನ್ಸ್” ನ ಮತ್ತೊಂದು ಶಾಖೆಯಾದ “ಮಾತಂಗಿ ಡಾನ್ಸ್ ಸ್ಟುಡಿಯೋ” ಚೇರಂಬಾಣೆಯ ನೃತ್ಯ ನಿರ್ದೇಶಕಿ “ಅವಿನ ಅಖಿಲ” ಹಾಗೂ ವಿದ್ಯಾರ್ಥಿನಿ “ಭಾಗ್ಯಶ್ರೀ” ಸೇರಿದಂತೆ 6 ವಿದ್ಯಾರ್ಥಿಗಳು ಏಂಜಲ್ಸ್ ವಿಂಗ್ಸ್ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿ ರಾಷ್ಟ್ರೀಯ ನಾಟ್ಯಕಲಾ ಪ್ರವೀಣೆ ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ.
ಕೊಡಗಿಗೆ ಕಳೆದ ೩೦ ವರ್ಷದಿಂದಲೂ ಅನೇಕ ಕೀರ್ತಿಯನ್ನು ತಂದಂತಹ ಏಂಜಲ್ಸ್ ವಿಂಗ್ಸ್ ಸ್ಕೂಲ್ ಆಫ್ ಡಾನ್ಸ್ ನ ನೃತ್ಯ ಗುರುಗಳಾದ ಏಂಜಲ್ ರಶ್ಮಿ ಡಿಸೋಜರವರಿಗೆ ರಾಷ್ಟ್ರೀಯ ನಾಟ್ಯ ಕದಂಬ ಎಂಬ ಬಿರುದು ನೀಡಿ ಗೌರವಿಸಲಾಯಿತು. ಈ ಸಾಧನೆ ಕೊಡಗು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.
ಕೊಡಗು ನ್ಯೂಸ್


