ರಾಜ್ಯಮಟ್ಟದ ಫೇಸ್ ಟಾಕ್ ಶೋ ಫೈನಲ್ ಗೆ ಕೊಟ್ಟಮುಡಿ ಶಾಲೆಯ ವಿದ್ಯಾರ್ಥಿನಿ ಜುಲ್ಫಿನಾ ಅಯ್ಕೆ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು:ಕೇರಳದ ಕ್ಯಾಲಿಕೇಟ್ ನಲ್ಲಿ ನಡೆಯಲಿರುವ ರಾಜ್ಯಮಟ್ಟದ ಫೇಸ್ ಎಕ್ಸ್ ಟಾಕ್ ಶೋ ಸ್ಪರ್ಧೆಯ ಫೈನಲ್ ಗೆ ಕೊಟ್ಟಮುಡಿ ಮರ್ಕಝ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಕೆ. ಎಸ್.ಜುಲ್ಫಿನಾ ಆಯ್ಕೆಯಾಗಿದ್ದಾರೆ.

ಡಿ.24 ರಂದು ಕ್ಯಾಲಿಕೇಟ್ ನ ಟ್ರೇಡ್ ಸೆಂಟರ್ ನಲ್ಲಿ ನಡೆಯಲಿರುವ ಫೈನಲ್ ಸ್ಪರ್ಧೆಯಲ್ಲಿ ಜುಲ್ಫಿನಾ ಪಾಲ್ಗೊಳ್ಳಲಿದ್ದಾರೆ. ಜುಲ್ಫಿನಾ ಎಮ್ಮೆಮಾಡು ಗ್ರಾಮದ

ಜುಬೇರ್ ಹಾಗೂ ಝರೀನಾ ದಂಪತಿಗಳ ಪುತ್ರಿ.

ಕೊಡಗು ನ್ಯೂಸ್

Exit mobile version