ಚಿಕ್ಕತೋಳೂರು ಗ್ರಾಮದಲ್ಲಿ ಜಿಪ್ ಪಲ್ಟಿ : ಕಾಫಿ ಚೀಲಗಳ ಸಾಗಾಟ ವೇಳೆ ಚಾಲಕ ಸ್ಥಳದಲ್ಲೇ ಸಾವು

ತೋಟದಿಂದ ಜಿಪ್ ಮೂಲಕ ಕಾಫಿ ಹಣ್ಣಿನ ಚೀಲಗಳನ್ನು ಲೋಡ್ ಮಾಡಿಕೊಂಡು ಮನೆಗೆ ತರುವ ಸಂದರ್ಭ ಜಿಪ್ ಮಗುಚಿದ ಹಿನ್ನೆಲೆ ಜಿಪ್ ಕೆಳಗೆ ಸಿಲುಕಿ ಬೆಳೆಗಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೋಮವಾರಪೇಟೆ ಸಮೀಪದ ಚಿಕ್ಕತೋಳೂರು ಗ್ರಾಮದಲ್ಲಿ ಇಂದು ಮದ್ಯಾಹ್ನ ನಡೆದಿದೆ.
ತೋಳುರೂಶೆಟ್ಟಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತೋಳೂರು ಗ್ರಾಮದ ಕೇಳಗಾಮನೆ ಪರಮೇಶ್(54) ಮೃತ ದುರ್ದೈವಿ. ತಮ್ಮ ತೋಟದಲ್ಲಿನ ಕಾಫಿ ಹಣ್ಣಿನ ಚೀಲಗಳನ್ನು ತಮ್ಮದೆ ಜಿಪ್ ನಲ್ಲಿ ತುಂಬಿಸಿ ಮನೆಗೆ ತರುವ ಸಂದರ್ಭ ಎತ್ತರದ ರಸ್ತೆಯಲ್ಲಿ ಚಲಿಸುವಾಗ ಜಿಪ್ ಅಲ್ಲೇ ಬದಿಗೆ ಪಲ್ಟಿಯಾಗಿದೆ. ಇ ಸಂದರ್ಭ ಸವಾರ ಪರಮೇಶ್ ವಾಹನದ ಕೆಳಗೆ ಸಿಲುಕಿ ಸ್ಥಳದಲ್ಲೇ ಸಾವನಪ್ಪಿದ್ದಾರೆ ಎನ್ನಲಾಗಿದೆ. ಇವರ ಅಂತ್ಯ ಸಂಸ್ಕಾರ ಇಂದು ಸ್ವಗ್ರಾಮದಲ್ಲಿ ನಡೆಯಲಿದ್ದು
ಮೃತರು ಪತ್ನಿ ಹಾಗೂ ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Exit mobile version