ಚೆಕ್ ಬೌನ್ಸ್ ಪ್ರಕರಣ
ಖುಲಾಸೆ ಗೊಳಿಸಿದ ಜಿಲ್ಲಾ ನ್ಯಾಯಾಲಯ
*KODAGU NEWS*
ವಿರಾಜಪೇಟೆ ನಗರದ ನಿವಾಸಿ ಪಿ.ಬಿ.ವಿಜಯಕುಮಾರ್ ಅವರು ಸೋಮವಾರ ಪೇಟೆ ತಾಲ್ಲೂಕಿನ ಎಚ್. ಜೆ.ನವೀನ್ ಕುಮಾರ್ ಅವರ ವಿರುದ್ಧ ವಿರಾಜಪೇಟೆ ಪ್ರದಾನ ಸಿವಿಲ್ ನ್ಯಾಯಾಲಯದಲ್ಲಿ ಸಿಸಿ ಸಂಖ್ಯೆ 813/16 ರಂತೆ ಒಂದು ಲಕ್ಷ ಇಪ್ಪತ್ತು ಸಾವಿರ ಹಣ ವಸೂಲಾತಿಗಾಗಿ ನ್ಯಾಯಾಲಯದ ಮೊರೆ ಹೋಗಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿ ನವೀನ್ ವಿರುದ್ಧ ಆರೋಪ ಸಾಬೀತಾಗಿದ್ದು ಅವರ ಒಂದು ಲಕ್ಷ ಇಪ್ಪತ್ತು ಸಾವಿರ ಹಣಕ್ಕೆ ಬದಲಾಗಿ ಒಂದು ಲಕ್ಷ ಐವತ್ತಮೂರು ಸಾವಿರ ಹಾಗೂ ಆರು ತಿಂಗಳ ಸೆರೆವಾಸ ಅನುಭವಿಸುವಂತೆ ದಿನಾಂಕ 16-1-24 ರಂದು ಆದೇಶ ವಾಗಿತ್ತು.
ಈ ಆದೇಶವನ್ನು ಪ್ರಶ್ನಿಸಿ ನವೀನ ಅವರು ವಿರಾಜಪೇಟೆ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಸಿಆರ್ ಎ 5007/24 ರಂದು ಮೇಲ್ಮನವಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯದ ನ್ಯಾಯಧೀಶರಾದ ಶ್ರೀ ಎಸ್ ನಟರಾಜ ಅವರು ವಾದ ಪ್ರತಿ ವಾದ ವನ್ನು ಆಲಿಸಿ ಈ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂದು ಕೆಳ ನ್ಯಾಯಾಲಯದ ತೀರ್ಪನ್ನು ವಜಗೊಳಿಸಿ ಆರೋಪಿ ನವೀನ ಅವರು ಹಣವನ್ನು ನೀಡಲು ಹಾಗೂ ಶಿಕ್ಷೆಗೆ ಭಾದ್ಯಸ್ಥನಲ್ಲ ಎಂದು ಹಾಗೂ ನಿರ್ದೋಷಿ ಎಂದು ತೀರ್ಪು ನೀಡಲಾಗಿದೆ.
ನವೀನ್ ಕುಮಾರ್ ಪರ ವಿರಾಜಪೇಟೆ ವಕೀಲರಾದ ವಿ. ಜಿ. ರಾಕೇಶ್ ವಾದ ಮಂಡಿಸಿದರು.
*ಕೊಡಗು ನ್ಯೂಸ್*

