
ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಹಿರಿಯ ಕಾಂಗ್ರೆಸ್ ನಾಯಕರಾದ *ಶ್ರೀ ಚೆಪ್ಪುಡೀರ ಅರುಣ್ ಮಾಚಯ್ಯ ರವರಿಗೆ* ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.
ಶ್ರೀ ಅರುಣ್ ಮಾಚಯ್ಯನವರನ್ನು ಸನ್ಮಾನಿಸಿ, ಶುಭ ಕೋರಿದ ಮಾನ್ಯ ಶಾಸಕರು, ಸ್ವತಹ ಕ್ರೀಡಾಪಟು ಹಾಗೂ ಪ್ರಬುದ್ಧ ರಾಜಕಾರಣಿಯಾದ ಅರುಣ್ ಮಾಚೇನವರಿಗೆ ಈ ಹುದ್ದೆ ಒಲಿದಿದ್ದು ವಿಶೇಷವಾಗಿ ಕೊಡಗಿಗೆ ವರದಾನವಾಗಲಿದೆ.
ಇವರ ಅವಧಿಯಲ್ಲಿ ಕ್ರೀಡಾ ಪ್ರಾಧಿಕಾರ ವತಿಯಿಂದ ಕೊಡಗಿಗೆ ಮತ್ತಷ್ಟು ಅನುಕೂಲ ಆಗುವುದರೊಂದಿಗೆ ಇಲ್ಲಿನ ಕ್ರೀಡಾ ಪ್ರತಿಭೆಗಳಿಗೆ ಬಲಬಂದಂತಾಗಿದೆ. ಶ್ರೀಯುತರು ತಮ್ಮ ನೂತನ ಜವಾಬ್ದಾರಿಯಲ್ಲಿ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾಯಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಟಾಟು ಮೊಣ್ಣಪ್ಪ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಕಾಳಿಮಾಡ ಪ್ರಶಾಂತ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಬಾನಂಡ ಪೃಥ್ವಿ,ಜಿಮಿ ಅಣ್ಣಯ್ಯ, ಡಿಸಿಸಿ ಸದಸ್ಯರು, ಎಲ್ಲಾ ವಲಯ, ಬ್ಲಾಕ್ ಅಧ್ಯಕ್ಷರುಗಳು, ಪದಾಧಿಕಾರಿಗಳು, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಬ್ರೇಕಿಂಗ್ ನ್ಯೂಸ್
- ಮಡಿಕೇರಿಯಲ್ಲಿ ಗುಂಡೇಟಿನಿಂದ ವ್ಯಕ್ತಿ ಸಾವು
- ಕೆರೆಗೆ ಕಾರು ಬಿದ್ದು ಒಂದೇ ಕುಟುಂಬದ ಮೂವರ ಸಾವು: ಮೃತರ ಕುಟುಂಬಕ್ಕೆ ಶಾಸಕ ಪೊನ್ನಣ್ಣ ಸಾಂತ್ವನ
- ಮಡಿಕೇರಿಯಲ್ಲಿ ದಸರಾ ಶುಭಾಶಯದ ಫ್ಲೆಕ್ಸ್ಗೆ ಹಾನಿ ಆರೋಪ: ಪೊಲೀಸ್ ಠಾಣೆಗೆ ಕಾಂಗ್ರೆಸ್ ದೂರು
- ಖರ್ಗೆ ಹೇಳಿಕೆ ಖಂಡಿಸಿ ಮಡಿಕೇರಿಯಲ್ಲಿ ಬಿಜೆಪಿ ಪ್ರತಿಭಟನೆ
- ಕರ್ತವ್ಯ ನಿರ್ವಹಣೆಯಲ್ಲಿ ಹುತಾತ್ಮರಾದ ಪೊಲೀಸರ ತ್ಯಾಗ ಸ್ಮರಣೆ
- ಮರೆಯಾಗದಿರಲಿ ಮಣ್ಣಿನ ಕಲೆ… ಮಡಿಕೇರಿಯಲ್ಲಿ ಜಾನಪದ ದಸರಾ
- ಮರಗೋಡಿನಲ್ಲಿ ಕಾವೇರಿ ಪ್ರತಿಮೆಗೆ ನಾಲ್ಕನೇ ವರ್ಷದ ಪೂಜೆ
- ಕುಶಾಲನಗರದಲ್ಲಿ 84ನೇ ಇಎಂಇ ಕಾರ್ಪ್ಸ್ ಡೇ ಸಂಭ್ರಮ


