ಕಾಫಿ ಟ್ರೇಡರ್ಸ್ ಮಾಲೀಕರು ಬಿಲ್ ನೀಡದಿದ್ದಲ್ಲಿ ನೇರ ಹೊಣೆ-ಎಸ್ ಪಿ ಎಚ್ಚರಿಕೆ

ಕೊಡಗು ಜಿಲೆಯಲ್ಲಿರುವ ಯಾವುದೇ ಕಾಫಿ ಟ್ರೇಡರ್ಸ್ ನವರು ಕಾಫಿ ಖರೀದಿ ಸಂದರ್ಭ ರಶೀದಿ ಅಥವಾ ಬಿಲ್‌ನ್ನು ನೀಡದೆ ಹಾಗೂ ಮಾರಾಟ ಮಾಡುವವರ ಸಂಪೂರ್ಣ ವಿವರವನ್ನು ಇಟ್ಟುಕೊಳ್ಳದೆ ವ್ಯವಹಾರ ನಡೆಸಿದಲ್ಲಿ ಮತ್ತು ಕಳ್ಳತನ ಮಾಡಿರುವ ಕಾಫಿಯನ್ನು ಖರೀದಿ ಮಾಡಿರುವುದು ಕಂಡು ಬಂದಲ್ಲಿ ಕಾಫಿ ಟ್ರೇಡರ್ಸ್ ಮಾಲೀಕರನ್ನು ನೇರ ಹೊಣೆಗಾರನ್ನಾಗಿ ಮಾಡಲಾಗುವುದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಎಚ್ಚರಿಕೆ ನೀಡಿದ್ದಾರೆ.

ಕೊಡಗು ನ್ಯೂಸ್

Exit mobile version