
ಮಡಿಕೇರಿಯ ಬ್ಲಾಸಂ ಶಾಲೆಯಲ್ಲಿ 79 ನೇ ಸ್ವಾತಂತ್ರ್ಯ ಸಂಭ್ರಮ
ಮಡಿಕೇರಿ: ಹಿರಿಯರು ತಮ್ಮ ಪ್ರಾಣವನ್ನು ಕೊಟ್ಟು ತಂದುಕೊಟ್ಟ ಸ್ವಾತಂತ್ರ್ಯವನ್ನು ಇಂದಿನ ಯುವ ಪೀಳಿಗೆ ಸ್ಮರಿಸಿ ಅದರ ಮಹತ್ವವನ್ನು ಅರಿತುಕೊಳ್ಳಬೇಕೆಂದು ಮಡಿಕೇರಿ ನಗರಸಭಾ ಅಧ್ಯಕ್ಷೆ ಶ್ರೀಮತಿ ಕಲಾವತಿ ಅಭಿಪ್ರಾಯಪಟ್ಟರು.
ನಗರದ ಸುದರ್ಶನ್ ಬಳಿಯಿರುವ ಬ್ಲಾಸಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಮಕ್ಕಳು ಅವರ ಭವಿಷ್ಯವನ್ನು ರೂಪಿಸುವುದರ ಜೊತೆಗೆ ದೇಶದ ಭವಿಷ್ಯವನ್ನು ರೂಪಿಶ್ವಂತಾಗಬೇಕೆಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಅತಿಗಳಾಗಿದ್ದ ಸುರೇಶ್ ಬಿಳಿಗೇರಿ ಮಾತನಾಡಿದರು.
ಶಾಲೆಯ ಮುಖ್ಯ ಶಿಕ್ಷಕಿ ಅನಸೂಯ ಬಿಬಿ ಅಧ್ಯಕ್ಷ ಭಾಷಣ ಮಾಡಿದರು. ಪೋಷಕ ಪ್ರತಿನಿಧಿ ಜೋಸೆಫ್ ಇದ್ದರು.
ಸ್ವಾತಂತ್ರ್ಯ ಸಂಭ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷರು ಪಾಲ್ಗೊಂಡಿದ್ದರು
ಕಾರ್ಯಕ್ರಮವನ್ನು ಭವ್ಯ ನಿರೂಪಿಸಿ ಮಂಗಳ ಗೌರಿ ವಂದಿಸಿದರು.

