ಅಪಾಯದ ಅಂಚಿನಲ್ಲಿ ಮೆಕೇರಿಯ 13 ಮನೆಗಳು

 

ಮಡಿಕೇರಿ: ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ಹಲೆವೆಡೆ ಅನಾವುತಗಳು ನಡೆದ ಬೆನ್ನಲ್ಲೇ ಮಡಿಕೇರಿ ಸಮೀಪದ ಮೇಕೇರಿಯ ಶಕ್ತಿ  ನಗರದ 13 ಮನೆಗಳು ಅಪಾಯದ ಅಂಚಿನಲ್ಲಿದ್ದು  ಕೆಲವು ಮನೆಗಳ ಹಿಂಬಾಗದ ನೆಲ ಬಿರುಕು ಬಿಟ್ಟಿದೆ.

ಕಳೆದ 15 ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ಬೆಟ್ಟದ ಮೇಲಿರುವ ಮನೆಗಳ ಹಿಂಬದಿಯ ಬರೆ ಜರಿದಿತ್ತು. ಇದೀಗ ಮಳೆ ಹೆಚ್ಚಾದ ಹಿನ್ನಲೆ ನೆಲ ಕೂಡ ಬಿರುಕುಬಿಟ್ಟಿದೆ.

ಸಂಬಂಧಿಕರ ಮನೆಗೆ ತೆರಳಿದ ಮನೆ ಮಾಲೀಕರು:

ಬರೆ ಕುಸಿದ ಕಾರಣ ಅಲ್ಲಿನ ಮೂರು ಮನೆಗಳಿಗೆ ತೆರಳಲು ಇದ್ದ ಸಣ್ಣ ಕಾಲು ದಾರಿ ಕೂಡ ಮುಚ್ಚಿಹೋಗಿದ್ದು ಮುಂಜಾಗ್ರತಾ ಕ್ರಮವಾಗಿ 3 ಕುಟುಂಬಗಳೂ ಸದ್ಯ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

ಕ್ರಮಕ್ಕೆ ಜಿಲ್ಲಾಡಳಿತ ಮೀನಮೇಷ:

ಅಪಾಯದಂಚಿನಲ್ಲಿರುವ ಮನೆಗಳಿಗೆ ಬದಲಿ ಮನೆ ನೀಡಲು ವಿಳಂಬ ಧೋರಣೆ ತಾಳುತ್ತಿರುವುದು ಇಲ್ಲಿನ ಸ್ಥಳೀಯರಲ್ಲಿ ಅಸಮಾಧಾನ ಸ್ಪೋಟಕ್ಕೆ ಕಾರಣವೂ ಆಗಿದೆ.

Exit mobile version