Close Menu
Kodagu News
    ಹೊಸ ಸುದ್ದಿ

    ದೇವಾಲಯ ಆವರಣದಲ್ಲಿ ಅನಧಿಕೃತ ಸಮಾಧಿ ನಿರ್ಮಾಣ ಆರೋಪ: ಪ್ರತಿಭಟನೆಗೆ ಹಿಂದೂ ಸುರಕ್ಷಾ ಸಮಿತಿಯ ಕರೆ

    July 26, 2026

    ಮಡಿಕೇರಿಯಲ್ಲಿ ಕಾರ್ಗಿಲ್ ವೀರರಿಗೆ ಬಿಜೆಪಿ–ಕಾಂಗ್ರೆಸ್ ನಾಯಕರ ಜಂಟಿ ನಮನ

    July 26, 2026

    ಮಡಿಕೇರಿ ರೋಟರಿ ವುಡ್ಸ್ ನಿಂದ ಯೋಧನಮನ – ಸೈನಿಕ ದಂಪತಿಗೆ ಸನ್ಮಾನ

    July 26, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ದೇವಾಲಯ ಆವರಣದಲ್ಲಿ ಅನಧಿಕೃತ ಸಮಾಧಿ ನಿರ್ಮಾಣ ಆರೋಪ: ಪ್ರತಿಭಟನೆಗೆ ಹಿಂದೂ ಸುರಕ್ಷಾ ಸಮಿತಿಯ ಕರೆ
    • ಮಡಿಕೇರಿಯಲ್ಲಿ ಕಾರ್ಗಿಲ್ ವೀರರಿಗೆ ಬಿಜೆಪಿ–ಕಾಂಗ್ರೆಸ್ ನಾಯಕರ ಜಂಟಿ ನಮನ
    • ಮಡಿಕೇರಿ ರೋಟರಿ ವುಡ್ಸ್ ನಿಂದ ಯೋಧನಮನ – ಸೈನಿಕ ದಂಪತಿಗೆ ಸನ್ಮಾನ
    • ಕಾವೇರಿ ತಟದಲ್ಲಿ ಗಿಡ ನೆಟ್ಟು ಕಾರ್ಗಿಲ್ ವಿಜಯೋತ್ಸವ ಆಚರಣೆ; ವೀರ ಯೋಧರಿಗೆ ನಮನ
    • ಯುವ ಪೀಳಿಗೆಗೆ ಕೊಡವ ಪರಂಪರೆ ಪರಿಚಯಿಸುವ ಅಗತ್ಯವಿದೆ: ಶಾಸಕ ಪೊನ್ನಣ್ಣ
    • ಹಾರಂಗಿ ಜಲಾಶಯದಿಂದ 4 ಸಾವಿರ ಕ್ಯೂಸೆಕ್ ನೀರು ಬಿಡುಗಡೆ
    • ಹಾರಂಗಿ ಜಲಾಶಯದ ಸೇತುವೆಯಲ್ಲಿ ಪ್ರವಾಸಿಗರ ವಾಹನಗಳ ನಿಲುಗಡೆ: ಸ್ಥಳೀಯರಿಂದ ಕ್ರಮಕ್ಕೆ ಆಗ್ರಹ
    • ನೀಟ್ ವಿವಾದದ ಬೆನ್ನಲ್ಲೇ ಧರ್ಮೇಂದ್ರ ಪ್ರಧಾನ ರಾಜೀನಾಮೆ
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಜಿಲ್ಲೆ»ವಿದ್ಯಾರ್ಥಿಗಳೊಂದಿಗೆ ಜನ್ಮದಿನ ಆಚರಿಸಿಕೊಂಡ ಶಾಸಕ ಪೊನ್ನಣ್ಣ
    ಜಿಲ್ಲೆ

    ವಿದ್ಯಾರ್ಥಿಗಳೊಂದಿಗೆ ಜನ್ಮದಿನ ಆಚರಿಸಿಕೊಂಡ ಶಾಸಕ ಪೊನ್ನಣ್ಣ

    ನಾಪೋಕ್ಲು ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಹುಟ್ಟುಹಬ್ಬ ಆಚರಣೆ

    ಅಂಬೇಡ್ಕರ್ ವಸತಿ ಶಾಲೆ ಆಟದ ಮೈದಾನ ನಿರ್ಮಾಣಕ್ಕೆ ಕ್ರಮ; ಎ.ಎಸ್.ಪೊನ್ನಣ್ಣ

    ಮಡಿಕೇರಿ :-ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ತಮ್ಮ 51 ನೇ ವರ್ಷದ ಹುಟ್ಟು ಹಬ್ಬವನ್ನು ನಾಪೋಕ್ಲುವಿನ ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂಭ್ರಮ, ಸಡಗರ ಹಾಗೂ ಸಂತಸದಿಂದ ಬುಧವಾರ ಆಚರಿಸಿಕೊಂಡರು.
    ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದವರ ಜೊತೆ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.
    ನಾಪೋಕ್ಲುವಿನ ಅಂಬೇಡ್ಕರ್ ವಸತಿ ಶಾಲೆಯಲ್ಲಿನ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಶಾಸಕರ ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ಸಂತಸ ಹಂಚಿಕೊಂಡಿದ್ದು ಎದ್ದು ಕಾಣುವಂತಿತ್ತು.
    ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಇಷ್ಟೊಂದು ಶಿಸ್ತಿನಿಂದ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಇಂತಹ ಶಾಲೆಯಲ್ಲಿ ಓದಲು ಅವಕಾಶ ಸಿಕ್ಕಿರುವುದು ತಮಗೆ ಅದೃಷ್ಟವೇ ಸರಿ ಎಂದು ನುಡಿದರು.
    ಇಲ್ಲಿನ ಉತ್ತಮ ವಾತಾವರಣ, ಪರಿಸರ ಚೆನ್ನಾಗಿದ್ದು, ಓದುವ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಒಳ್ಳೆಯ ಪ್ರಜೆಗಳಾಗಬೇಕು ಎಂದು ಸಲಹೆ ನೀಡಿದರು.
    ಬೆಂಗಳೂರಿನಲ್ಲಿ 1 ನೇ ತರಗತಿಯಿಂದ ಪಿಯುಸಿವರೆಗೆ ಶಾಲೆಯಲ್ಲಿ ಓದಿದ್ದೇನೆ. ಕಾನೂನು ಪದವಿಯನ್ನು ಸರ್ಕಾರಿ ಕಾಲೇಜಿನಲ್ಲಿ ಕಲಿತಿದ್ದೇನೆ. ಆ ನಿಟ್ಟಿನಲ್ಲಿ ಲಭ್ಯವಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದರು.
    ಹೆಚ್ಚಿನ ವಿದ್ಯಾರ್ಥಿಗಳು ಇರುವ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಆಟದ ಮೈದಾನವನ್ನು ಖಂಡಿತ ನಿರ್ಮಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
    ‘ವಿದ್ಯಾರ್ಥಿಗಳಲ್ಲಿ ಮುಂದಾಲೋಚನೆ ಹಾಗೂ ದೂರದೃಷ್ಟಿ ಇರಬೇಕು. ಪೋಷಕರ ಕನಸನ್ನು ನನಸು ಮಾಡಲು ಪ್ರಯತ್ನಿಸಬೇಕು. ಬದುಕು ಬದಲಾಯಿಸಲು ವಿಫುಲ ಅವಕಾಶಗಳಿದ್ದು, ಭವಿಷ್ಯ ರೂಪಿಸಿಕೊಳ್ಳುವತ್ತ ಯೋಚಿಸಬೇಕು. ಅವರವರ ಭವಿಷ್ಯ ಅವರವರ ಕೈಯಲ್ಲಿದೆ ಎಂದು ಎ.ಎಸ್.ಪೊನ್ನಣ್ಣ ಅವರು ಕಿವಿಮಾತು ಹೇಳಿದರು.’
    ‘ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಯಶಸ್ಸು ಗಳಿಸುತ್ತಾರೆ. ಪ್ರಮುಖವಾಗಿ ಕೆಲವೊಂದು ಕೊರತೆ ಮತ್ತು ಹಸಿವು ಇದ್ದಲ್ಲಿ ಮೇಲೆ ಬರಲು ಸಾಧ್ಯ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳುವತ್ತ ಗಮನಹರಿಸಬೇಕು ಎಂದರು.’
    ಸಾಧಿಸುವ ಛಲ ಇದ್ದಲ್ಲಿ ಬದುಕನ್ನು ಹಸನು ಮಾಡಿಕೊಳ್ಳಬಹುದು. ಆ ನಿಟ್ಟಿನಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸದಾ ಯೋಚಿಸಬೇಕು ಎಂದು ಎ.ಎಸ್.ಪೊನ್ನಣ್ಣ ಅವರು ನುಡಿದರು.
    ಎ.ಎಸ್.ಪೊನ್ನಣ್ಣ ಅವರ ಧರ್ಮಪತ್ನಿ ಕಾಂಚನ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರಾದ ತೀತೀರ ಧರ್ಮಜ ಉತ್ತಪ್ಪ, ನಾಪೋಕ್ಲು ಗ್ರಾ.ಪಂ.ಅಧ್ಯಕ್ಷರಾದ ವನಜಾಕ್ಷಿ, ಉಪಾಧ್ಯಕ್ಷರಾದ ಶಶಿ ಮಂದಣ್ಣ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್, ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲರಾದ ನೀತ, ಪಿಡಿಒ ಚೋಂದಕ್ಕಿ, ಪ್ರಮುಖರು ಇದ್ದರು.
    ಬಳಿಕ ಎ.ಎಸ್.ಪೊನ್ನಣ್ಣ ಅವರು ಬೇತು ಶಾಲೆಯ ವಿದ್ಯಾರ್ಥಿಗಳಿಗೆ ನೋಟು ಪುಸ್ತಕ ವಿತರಿಸಿ ಹುಟ್ಟುಹಬ್ಬ ಆಚರಿಸಿ ವಿದ್ಯಾರ್ಥಿಗಳೊಂದಿಗೆ ಸಂಭ್ರಮಿಸಿದರು.

    Previous Articleಬಸ್ ಸಂಚಾರಕ್ಕೆ ಶಾಸಕ ಪೊನ್ನಣ್ಣ ಚಾಲನೆ
    Next Article ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಪೊನ್ನಣ್ಣ ಸಭೆ

    Related Posts

    ದೇವಾಲಯ ಆವರಣದಲ್ಲಿ ಅನಧಿಕೃತ ಸಮಾಧಿ ನಿರ್ಮಾಣ ಆರೋಪ: ಪ್ರತಿಭಟನೆಗೆ ಹಿಂದೂ ಸುರಕ್ಷಾ ಸಮಿತಿಯ ಕರೆ

    July 26, 2026

    ಮಡಿಕೇರಿಯಲ್ಲಿ ಕಾರ್ಗಿಲ್ ವೀರರಿಗೆ ಬಿಜೆಪಿ–ಕಾಂಗ್ರೆಸ್ ನಾಯಕರ ಜಂಟಿ ನಮನ

    July 26, 2026

    ಮಡಿಕೇರಿ ರೋಟರಿ ವುಡ್ಸ್ ನಿಂದ ಯೋಧನಮನ – ಸೈನಿಕ ದಂಪತಿಗೆ ಸನ್ಮಾನ

    July 26, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ದೇವಾಲಯ ಆವರಣದಲ್ಲಿ ಅನಧಿಕೃತ ಸಮಾಧಿ ನಿರ್ಮಾಣ ಆರೋಪ: ಪ್ರತಿಭಟನೆಗೆ ಹಿಂದೂ ಸುರಕ್ಷಾ ಸಮಿತಿಯ ಕರೆ

    July 26, 2026

    ಮಡಿಕೇರಿಯಲ್ಲಿ ಕಾರ್ಗಿಲ್ ವೀರರಿಗೆ ಬಿಜೆಪಿ–ಕಾಂಗ್ರೆಸ್ ನಾಯಕರ ಜಂಟಿ ನಮನ

    July 26, 2026

    ಮಡಿಕೇರಿ ರೋಟರಿ ವುಡ್ಸ್ ನಿಂದ ಯೋಧನಮನ – ಸೈನಿಕ ದಂಪತಿಗೆ ಸನ್ಮಾನ

    July 26, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.