ಪೊನ್ನಂಪೇಟೆ ತಾಲ್ಲೂಕು ಹಾತೂರು ಬಳಿ ಇರುವ ಪ್ರಸಿದ್ಧ ವನಭದ್ರ ಕಾಳಿ ದೇವಸ್ಥಾನಕ್ಕೆ ಇಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಹಾಗೂ  ಪತ್ನಿ ಕಾಂಚನ್ ಪೊನ್ನಣ್ಣ  ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಸ್ಥಳೀಯ ಗ್ರಾಮಸ್ಥರು ಹಾಗೂ ಪ್ರಮುಖರು ಶಾಸಕರ ಹೆಸರಿನಲ್ಲಿ ವಿಶೇಷ ಪೂಜೆ ಆಯೋಜನೆ ಮಾಡಿದ್ದರು. ಶಾಸಕ ದಂಪತಿಗಳು, ಶ್ರೀ ದೇವಿಯ ಸನ್ನಿಧಾನದಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷರಾದ ಮಿದೇರಿರ ನವೀನ್, ವಲಯ ಅಧ್ಯಕ್ಷರಾದ ಕೊಕ್ಕಂಡ ರೋಷನ್, ಬೂತ್ ಅಧ್ಯಕ್ಷರಾದ ಪುಲಿಯಂಡ ರೋಷನ್, ಅಜ್ಜಿಕುಟ್ಟಿರ ಗಿರೀಶ್, ವಿರಾಜಪೇಟೆ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರು ಪಟ್ಟಡ ರಕ್ಷಿತ್, ಚಂಗಪ್ಪ, ಅರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಕುಂದಾಚೀರ ಮಂಜು ದೇವಯ್ಯ, ಹರೀಶ್,ಕಾಂಗ್ರೆಸ್ ಮುಖಂಡರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Exit mobile version