ಗ್ರಾಮ ಪಂಚಾಯಿತಿಗೆ ಕಟ್ಟಡ ಖರೀದಿಸಲು ಗ್ರಾಮೀಣ ಅಭಿವೃದ್ಧಿ ಸಚಿವರಿಗೆ  ಎ.ಎಸ್ ಪೊನ್ನಣ್ಣ ಮನವಿ
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ  ಪ್ರಿಯಾಂಕ್ ಖರ್ಗೆ* ಅವರನ್ನು, ಇಂದು ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ  ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ* ಅವರ ನೇತೃತ್ವದಲ್ಲಿ, ಗ್ರಾಮ ಪಂಚಾಯಿತಿ ಸದಸ್ಯರು ಭೇಟಿ ಮಾಡಿ, ಕೆ ಬಾಡಗ ಗ್ರಾಮ ಪಂಚಾಯತಿ ಕಚೇರಿಗೆ, *ಮಹಿಳಾ ಸಾಂಸ್ಕೃತಿಕ ಸಂಘದ ಕಟ್ಟಡವನ್ನು* ಪಂಚಾಯತಿಯಲ್ಲಿ ಲಭ್ಯವಿರುವ ಹಣದಲ್ಲಿ, ಸದ್ರಿ ಕಟ್ಟಡವನ್ನೇ ಖರೀದಿಸಲು ಅನುಮತಿ ನೀಡುವಂತೆ ಸಚಿವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆ ಬಾಡಗ ಪಂಚಾಯಿತಿ ಅಧ್ಯಕ್ಷರಾದ ರೀತಿಶ್ ಬಿದ್ದಪ್ಪ, ಪಂಚಾಯಿತಿ ಸದಸ್ಯರಾದ ಸಿ ಡಿ ಬೋಪಣ್ಣ ಉಪಸ್ಥಿತರಿದ್ದರು.

Exit mobile version