ಮಡಿಕೇರಿ : ಕೇಂದ್ರ ಸರ್ಕಾರದ ಅಧೀನದಲ್ಲಿ ನಡೆಯುತ್ತಿರುವ ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ಶೈಕ್ಷಣಿಕ ವರ್ಷ 2026-27 ಕ್ಕಾಗಿ 6 ನೇ ತರಗತಿಗೆ ಪ್ರವೇಶ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವುದರ ಮುಖಾಂತರ ತಮ್ಮ ಹೆಸರನ್ನು ನೋಂದಾಯಿಸಲು ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ಸಿ.ವಿ.ಪ್ರಮೀಳಾ ಅವರು ತಿಳಿಸಿದ್ದಾರೆ.

ಅರ್ಹ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು. ಅಭ್ಯರ್ಥಿ ಮತ್ತು ಆತನ/ಅವಳ ಪೋಷಕರು ಕೊಡಗು ಜಿಲ್ಲೆಯವರಾಗಿರಬೇಕು. ಅಭ್ಯರ್ಥಿಯು ಸರ್ಕಾರದಿಂದ ಮಾನ್ಯತೆ ಪಡೆದ ಸರ್ಕಾರಿ, ಅರೆಸರ್ಕಾರಿ ಶಾಲೆಗಳಲ್ಲಿ 3 ಮತ್ತು 4ನೇ ತರಗತಿ ಓದಿ ಪಾಸಾಗಿರಬೇಕು. ಈಗ 5ನೇ ತರಗತಿಯಲ್ಲಿ ಓದುತ್ತಿರಬೇಕು. ಅಭ್ಯರ್ಥಿ 01/05/2014 ರಿಂದ 31/07/2016 ರೊಳಗೆ ಜನಿಸಿದವರಾಗಿರಬೇಕು.

ಆನ್‍ಲೈನ್ ಅರ್ಜಿ ಸಲ್ಲಿಸಲು ಜುಲೈ, 29 ಕೊನೆಯ ದಿನವಾಗಿದೆ. ಪ್ರವೇಶ ಪರೀಕ್ಷೆಯು 2025 ರ ಡಿಸೆಂಬರ್, 13 ರಂದು ನಡೆಯಲಿದೆ. ಅರ್ಜಿ ಸಲ್ಲಿಸಲು ಮತ್ತು ಇನ್ನಿತರ ಮಾಹಿತಿಯನ್ನು https://navodaya.gov.in ಲಿಂಕ್‍ನಿಂದ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಜಯನ್ ಎ.ಸಿ.-9481426184, ಮಾರುತಿ ದಾಸಣ್ಣವರ-9611862835, ಚಿದಾನಂದ-9448215623 ನ್ನು ಸಂಪರ್ಕಿಸಬಹುದು ಎಂದು ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲರು ತಿಳಿಸಿದ್ದಾರೆ.

Exit mobile version