ಪಶು ವೈದ್ಯಕೀಯ ಆಸ್ಪತ್ರೆಯ ನೂತನ ಆಡಳಿತ ಕಟ್ಟಡ ಹಾಗೂ ರೈತರ ತರಬೇತಿ ಕೇಂದ್ರ ಕಟ್ಟಡದ ಲೋಕಾರ್ಪಣೆಯನ್ನು ಶಾಸಕ ಎ.ಎಸ್ ಪೊನ್ನಣ್ಣ ನೆರವೇರಿಸಿದರು

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆ ತಾಲೂಕು ಪ್ರವಾಸದಲ್ಲಿರುವ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಪಶು ವೈದ್ಯಕೀಯ ಆಸ್ಪತ್ರೆಗೆ ಭೇಟಿ ನೀಡಿದರು.
ಪಶು ವೈದ್ಯಕೀಯ ಆಸ್ಪತ್ರೆಯ ನೂತನ ಆಡಳಿತ ಕಟ್ಟಡ ಹಾಗೂ ರೈತರ ತರಬೇತಿ ಕೇಂದ್ರ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆ ಸಮಿತಿಯ ಅಧ್ಯಕ್ಷರು ತಿತೀರ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷರು ಮಿದೇರೀರ ನವೀನ್, ತಾಲೂಕು ಗ್ಯಾರಂಟಿ ಯೋಜನಾ ಸಮಿತಿಯ ಅಧ್ಯಕ್ಷರು ಕಾಳಿಮಾಡ ಪ್ರಶಾಂತ್, ತಾಲೂಕು ಬಗರ್ ಹುಕುಂ ಅಧ್ಯಕ್ಷರು ಅಣ್ಣಳ್ಳಮಾಡ ಲಾಲಾ ಅಪ್ಪಣ್ಣ, ಪಟ್ಟಣ ಪಂಚಾಯಿತಿ ಅಧ್ಯಕ್ಷರು ಅಣ್ಣಿರ ಹರೀಶ್, ಉಪಾಧ್ಯಕ್ಷರು ಆಲೀರ ರಶೀದ್, ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರು ಜುನೈದ್, ಪಕ್ಷದ ಹಿರಿಯ ಮುಖಂಡರು ಪೆಮ್ಮಂಡ ಪೊನ್ನಪ್ಪ, ಮುಕಳೇರ ಕುಶಾಲಪ್ಪ, ಪಕ್ಷದ ಮುಖಂಡರು ಎ ಜೆ ಬಾಬು, ಪಾಲ್ವಿನ್ ಪೂಣಚ್ಚ,ಅಜ್ಜಿಕುಟ್ಟಿರ ಪೊನ್ನು, ಮೋಹನ್, ಅಣ್ಣಳ್ಳಮಾಡ ಹರೀಶ್,ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರು ಜಮ್ಮಡ ಸೋಮಣ್ಣ, ಕುಂಡಚ್ಚಿರ ಮಂಜು ದೇವಯ್ಯ, ಅಯೂಬ್, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

