Close Menu
Kodagu News
    ಹೊಸ ಸುದ್ದಿ

    ಕರಿಕೆ ಅರಣ್ಯಭಾಗದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ.

    May 26, 2026

    ಮರಗೋಡು ಗ್ರಾಮದಲ್ಲಿ ಅರೆಭಾಷೆ ಗ್ರಾಮೋತ್ಸವ ಅರೆಭಾಷೆ ಕಲಿಕೆ ಮತ್ತು ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಿ: ಡಾ.ಮಂತರ್ ಗೌಡ

    May 26, 2026

    ಮೈಸೂರಿನಲ್ಲಿ ಸಿಡಿಲು ಬಡಿದು ಮಡಿಕೇರಿಯ ಹೊಸೊಕ್ಲು ರೋಷನ್ ಬಾಲಕೃಷ್ಣ (43) ನಿಧನ

    May 26, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ಕರಿಕೆ ಅರಣ್ಯಭಾಗದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ.
    • ಮರಗೋಡು ಗ್ರಾಮದಲ್ಲಿ ಅರೆಭಾಷೆ ಗ್ರಾಮೋತ್ಸವ ಅರೆಭಾಷೆ ಕಲಿಕೆ ಮತ್ತು ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಿ: ಡಾ.ಮಂತರ್ ಗೌಡ
    • ಮೈಸೂರಿನಲ್ಲಿ ಸಿಡಿಲು ಬಡಿದು ಮಡಿಕೇರಿಯ ಹೊಸೊಕ್ಲು ರೋಷನ್ ಬಾಲಕೃಷ್ಣ (43) ನಿಧನ
    • ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಸಮಿತಿ ಸಭೆ ಗ್ಯಾರಂಟಿ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಧರ್ಮಜ ಉತ್ತಪ್ಪ ಸಲಹೆ
    • ಮಾವು ಮತ್ತು ಹಲಸು ಮೇಳಕ್ಕೆ ಶಾಸಕರಾದ ಡಾ.ಮಂತರ್ ಗೌಡ ಚಾಲನೆ
    • ಕೊಡಗು ಜಿಲ್ಲೆಯ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ಅಂಗಾಂಗ ದಾನ ಪ್ರಕ್ರಿಯೆ.
    • ಜನಪ್ರತಿನಿಧಿಗಳ ವಿರುದ್ಧ ಸುಳ್ಳು ಆರೋಪ: ಪ್ರಸನ್ನ ಭಟ್ ವಿರುದ್ಧ ದೂರು
    • ಆನ್ ಲೈನ್ ಔಷಧಿ ವಹಿವಾಟು ವಿರೋಧಿಸಿ ಕೊಡಗಿನಾದ್ಯಂತ ಔಷಧಿ ಅಂಗಡಿಗಳ ಬಂದ್ ಯಶಸ್ವಿ
    Facebook X (Twitter) Instagram
    Kodagu NewsKodagu News
    Demo
    Demo
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Demo
    Kodagu News
    Home»ಜಿಲ್ಲೆ»ಶಾಸಕ ಪೊನ್ನಣ್ಣನವರಿಂದ ಮಾಕುಟಕ್ಕೆ ದಿಡೀರ್ ಭೇಟಿ
    ಜಿಲ್ಲೆ

    ಶಾಸಕ ಪೊನ್ನಣ್ಣನವರಿಂದ ಮಾಕುಟಕ್ಕೆ ದಿಡೀರ್ ಭೇಟಿ

    ಮಾಕುಟ್ಟಕ್ಕೆ ಶಾಸಕ ಪೊನ್ನಣ್ಣ ರವರ ದಿಡೀರ್ ಭೇಟಿ : ಕೇಂದ್ರ ಬಿಜೆಪಿ ಸರಕಾರದ ಸ್ವಚ್ಛ ಭಾರತ್ ಅಭಿಯಾನದ ವೈಫಲ್ಯ ಬಹಿರಂಗ

    ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಇಂದು ಮುಂಜಾನೆ ಮಾಕುಟ್ಟ ಭಾಗಕ್ಕೆ ಭೇಟಿ ನೀಡಿದರು.

    ಸ್ಥಳೀಯರ ಕೋರಿಕೆ ಮೇರೆಗೆ ಇಂದು ಮಾಕುಟ್ಟ ಭಾಗದ ವಾಸಿಸುತ್ತಿರುವ ನಿವಾಸಿಗಳ ಕಾಲೋನಿಗೆ, ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ದಿಢೀರ್ ಭೇಟಿ ನೀಡಿದರು.

     

    ಈ ಸಂದರ್ಭದಲ್ಲಿ ನಿವಾಸಿಗಳೊಡನೆ ಮಾತನಾಡುತ್ತಾ ಅಲ್ಲಿಯ ವಾಸ್ತವಂಶವನ್ನು ಪರಿಶೀಲಿಸಿದ ಮಾನ್ಯ ಶಾಸಕರು, ಅಲ್ಲಿಯ ನಿವಾಸಿಗಳಿಗೆ ಸರಿಯಾದ ಸೂರು ಇಲ್ಲದೆ, ಕೇಂದ್ರ ಬಿಜೆಪಿ ಸರಕಾರ ಅಬ್ಬರದ ಪ್ರಚಾರ ಮಾಡುತ್ತಿರುವ ಸ್ವಚ್ಛ ಭಾರತ ಅಭಿಯಾನದಡಿ ಒಂದೇ ಒಂದು ಸೌಚಾಲಯ ಕೂಡ ನಿರ್ಮಿಸದೆ ಇರುವುದನ್ನು ಗಮನಿಸಿದರು. ಕಡೆಗಣಿಸಲ್ಪಟ್ಟ ಈ ಭಾಗದ ಜನರ ಏಳಿಗೆಗೆ ಮುಂದಿನ ಕ್ರಮ ಕೈಗೊಳ್ಳಲು ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.

    ಇದೇ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಿಗೆ ಆಧಾರ್ ಕಾರ್ಡ್ ಒದಗಿಸಲು ಈ ಹಿಂದೆ ಮಾನ್ಯ ಶಾಸಕರು ಕ್ರಮ ಕೈಗೊಂಡಿದ್ದರಿಂದ, ಈಗ ಇವರಿಗೆ ಆಧಾರ್ ಕಾರ್ಡ್ ದೊರಕಿದ್ದು ಅದನ್ನು ಮಾನ್ಯ ಶಾಸಕರು ವಿತರಿಸಿದರು.

    ಅಂಗನವಾಡಿ ಕೇಂದ್ರ ಪ್ರಾರಂಭಿಸಲು ಸೂಚನೆ

    ಮಾಕುಟ್ಟ ಕಾಲೋನಿಯಲ್ಲಿ ಸುಮಾರು ಹದಿನೈದಕ್ಕೂ ಅಧಿಕ ಮಕ್ಕಳು ಅಂಗನವಾಡಿ ಕೇಂದ್ರಗಳಿಲ್ಲದೆ ವಿದ್ಯಾಭ್ಯಾಸ ಮೊಟಕುಗೊಳಿಸಿರುವುದನ್ನು ಗಮನಿಸಿದ ಮಾನ್ಯ ಶಾಸಕರು, ಅಲ್ಲಿಯೇ ಸ್ಥಳೀಯ ಶಾಲೆಯಲ್ಲಿರುವ ಅಧಿಕ ಕೊಠಡಿಯನ್ನು ಅಂಗನವಾಡಿ ಕೇಂದ್ರವಾಗಿ ಬಳಸುವಂತೆ ಸೂಚಿಸಿದರು. ಅಗತ್ಯ ಬಿದ್ದಲ್ಲಿ ಅದರ ನಿರ್ಮಾಣಕ್ಕೆ ತನ್ನ ಅನುದಾನದಲ್ಲಿ ಹಣ ಒದಗಿಸುವುದಾಗಿ ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ತಿಳಿಸಿದ ಮಾನ್ಯ ಶಾಸಕರು ಕೂಡಲೇ ಈ ಕೇಂದ್ರ ಆರಂಭಿಸಬೇಕೆಂದು ಸೂಚನೆ ನೀಡಿದರು.

    ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಅಧ್ಯಕ್ಷರು ಪಟ್ಟಡ ರಂಜಿ ಪೂಣಚ್ಚ, ವಲಯ ಅಧ್ಯಕ್ಷರು ವರ್ಗಿಸ್, ಕೆಡಿಪಿ ಸದಸ್ಯರು ರಫೀಕ್, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರು ಹನೀಫ್, ಬಗರ್ ಹುಕುಂ ಸಲಾಂ, ಜಿಲ್ಲಾ ವಕ್ತರರು ತೆನ್ನಿರ ಮೈನಾ, ಪಕ್ಷದ ಮುಖಂಡರು ಜೋಕಿಮ್, ಮಂಜುನಾಥ್, ಬಟ್ಟಕಳಂಡ ರಾಜ, ರಜಕ್,ಜಾಫರ್, ಬೋಪಣ್ಣ ಕಟ್ಟಿ, ಸಂತೋಷ್, ಅಯೂಬ್, ಸುನಿಲ್, ವಿಜೇಶ್, ಶಿಬು, ಜಾನು, ವಿಮಲಾ, ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಯುವ ಅಧ್ಯಕ್ಷರು ಪಟ್ಟಡ ರಕ್ಷಿತ್, ಯುವ ಬ್ಲಾಕ್ ಅಧ್ಯಕ್ಷರು ಬಶೀರ್, ಉಪಾಧ್ಯಕ್ಷರು ಸಫನ್, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

    Previous Articleಪತ್ರಕರ್ತರ ಸಂಕ್ರಾಂತಿ ಸಂಭ್ರಮ ಕ್ರಿಕೆಟ್ ಗೆ ಮಡಿಕೇರಿಯಲ್ಲಿ ಚಾಲನೆ
    Next Article ಗೃಹಲಕ್ಷ್ಮಿ ವಿವಿದ್ದೋದ್ದೇಶ ಸಹಕಾರ ಸಂಘದ ನಿರ್ದೇಶಕರ ಪಟ್ಟಿ ಪರಿಷ್ಕರಣೆ ಸಭೆ

    Related Posts

    ಕರಿಕೆ ಅರಣ್ಯಭಾಗದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ.

    May 26, 2026

    ಮರಗೋಡು ಗ್ರಾಮದಲ್ಲಿ ಅರೆಭಾಷೆ ಗ್ರಾಮೋತ್ಸವ ಅರೆಭಾಷೆ ಕಲಿಕೆ ಮತ್ತು ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಿ: ಡಾ.ಮಂತರ್ ಗೌಡ

    May 26, 2026

    ಮೈಸೂರಿನಲ್ಲಿ ಸಿಡಿಲು ಬಡಿದು ಮಡಿಕೇರಿಯ ಹೊಸೊಕ್ಲು ರೋಷನ್ ಬಾಲಕೃಷ್ಣ (43) ನಿಧನ

    May 26, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಚಿಕಿತ್ಸೆ ನೀಡದೆ ಶಾಸಕರ ಆಪ್ತರಿಂದ ಅಪಪ್ರಚಾರ: ಅಳಲು ತೋಡಿಕೊಂಡ ವೈಭವ್

    February 2, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025

    ಮಡಿಕೇರಿಗೆ ನಕಲಿ ಪೊಲೀಸರ ಎಂಟ್ರಿ

    December 13, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ಕರಿಕೆ ಅರಣ್ಯಭಾಗದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ.

    May 26, 2026

    ಮರಗೋಡು ಗ್ರಾಮದಲ್ಲಿ ಅರೆಭಾಷೆ ಗ್ರಾಮೋತ್ಸವ ಅರೆಭಾಷೆ ಕಲಿಕೆ ಮತ್ತು ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಿ: ಡಾ.ಮಂತರ್ ಗೌಡ

    May 26, 2026

    ಮೈಸೂರಿನಲ್ಲಿ ಸಿಡಿಲು ಬಡಿದು ಮಡಿಕೇರಿಯ ಹೊಸೊಕ್ಲು ರೋಷನ್ ಬಾಲಕೃಷ್ಣ (43) ನಿಧನ

    May 26, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಚಿಕಿತ್ಸೆ ನೀಡದೆ ಶಾಸಕರ ಆಪ್ತರಿಂದ ಅಪಪ್ರಚಾರ: ಅಳಲು ತೋಡಿಕೊಂಡ ವೈಭವ್

    February 2, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.