Close Menu
Kodagu News
    ಹೊಸ ಸುದ್ದಿ

    ಸಿದ್ದಾಪುರದಲ್ಲಿ ಅಕ್ರಮ ಶ್ರೀಗಂಧ ಕಳವು: ಇಬ್ಬರ ಬಂಧನ, 55 ಕೆಜಿ ಗಂಧ ವಶ

    September 22, 2026

    ಭಾರತೀಯ ಸೇನೆಯಲ್ಲಿ ಹೊಸ ಇತಿಹಾಸ: ರಾಷ್ಟ್ರಪತಿಯ ADC ಆದ ಮೇಜರ್ ನವ್ಯಾ ಶೇಖಾವತ್

    September 21, 2026

    ವಿರಾಜಪೇಟೆ ಗಣೇಶೋತ್ಸವ: ಸೆ.25ರಿಂದ ವಾಹನ ಸಂಚಾರದಲ್ಲಿ ಬದಲಾವಣೆ

    September 21, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ಸಿದ್ದಾಪುರದಲ್ಲಿ ಅಕ್ರಮ ಶ್ರೀಗಂಧ ಕಳವು: ಇಬ್ಬರ ಬಂಧನ, 55 ಕೆಜಿ ಗಂಧ ವಶ
    • ಭಾರತೀಯ ಸೇನೆಯಲ್ಲಿ ಹೊಸ ಇತಿಹಾಸ: ರಾಷ್ಟ್ರಪತಿಯ ADC ಆದ ಮೇಜರ್ ನವ್ಯಾ ಶೇಖಾವತ್
    • ವಿರಾಜಪೇಟೆ ಗಣೇಶೋತ್ಸವ: ಸೆ.25ರಿಂದ ವಾಹನ ಸಂಚಾರದಲ್ಲಿ ಬದಲಾವಣೆ
    • ಆನೆಕಾಡು ಅಪಘಾತದಲ್ಲಿ ದಾಖಲೆಗಳುಳ್ಳ ಬ್ಯಾಗ್ ಕಳೆದುಹೋಗಿದೆ.
    • ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರಿಗೆ ಬಸ್ ಡಿಕ್ಕಿ
    • ಬುಡಕಟ್ಟು ಕಲಾವಿದರ ಪ್ರತಿಭೆಗೆ ಜಾಗತಿಕ ವೇದಿಕೆ ಸಿಗಲಿ: ಸಂಕೇತ್ ಪೂವಯ್ಯ
    • “ವನ್ಯಜೀವಿಗಳಿಗೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು?” — ರಂಜಿ ಪೂಣಚ್ಚ ಆಕ್ರೋಶ
    • ಕಾವೇರಿ ಉಳಿವಿಗೆ ಮಳೆನೀರು ಕೊಯ್ಲು, ಮರಗಳ ಸಂರಕ್ಷಣೆ ಅಗತ್ಯ: ಬಿದ್ದಂಡ ಮಾದಯ್ಯ.
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಜಿಲ್ಲೆ»ತಪ್ಪು ಮಾಹಿತಿಗಿಲ್ಲಿ ಅವಕಾಶವಿಲ್ಲ ಬಹಿರಂಗ ಚರ್ಚೆಗೆ ಬನ್ನಿ:-ಶಾಸಕ ಎ.ಎಸ್ ಪೊನ್ನಣ್ಣನವರಿಂದ ಸವಾಲ್
    ಜಿಲ್ಲೆ

    ತಪ್ಪು ಮಾಹಿತಿಗಿಲ್ಲಿ ಅವಕಾಶವಿಲ್ಲ ಬಹಿರಂಗ ಚರ್ಚೆಗೆ ಬನ್ನಿ:-ಶಾಸಕ ಎ.ಎಸ್ ಪೊನ್ನಣ್ಣನವರಿಂದ ಸವಾಲ್

    ತಪ್ಪು ಮಾಹಿತಿಗಿಲ್ಲ ಅವಕಾಶವಿಲ್ಲ ಬಹಿರಂಗ ಚರ್ಚೆಗೆ ಬನ್ನಿ

    ಶಾಸಕ ಎ ಎಸ್ ಪೊನ್ನಣ್ಣರವರಿಂದ ಸವಾಲ್

    ಜಮ್ಮಾ ತಿದ್ದುಪಡಿ ವಿಧೇಯಕದ ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡುವುದನ್ನು ನಿಲ್ಲಿಸಿ ಬಹಿರಂಗ ಚರ್ಚೆಗೆ ಬನ್ನಿ ಎಂದು ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ ಹಾಗೂ ಅಪ್ಪಚ್ಚುರಂಜನ್ ರವರಿಗೆ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಸವಾಲ್ ಹಾಕಿದ್ದಾರೆ.

     

    ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು

    ಕೆ.ಜಿ.ಬೋಪಯ್ಯ ಮತ್ತು ಅಪ್ಪಚ್ಚು ರಂಜನ್ ರವರು ರಾಜಕೀಯ ಕಾರಣಕ್ಕೆ ಮಾಧ್ಯಮ ಗೋಷ್ಠಿಯಲ್ಲಿ ತಪ್ಪು ಮಾಹಿತಿ ಒದಗಿಸಿದ್ದಕ್ಕೆ ತೀವ್ರ ತರಾಟೆಗೆ ತೆಗೆದುಕೊಂಡರು.

     

    ಜಮ್ಮಾ ಹಿಡುವಳಿದಾರರು ಎದುರಿಸುತ್ತಿರುವ ಸಮಸ್ಯೆಯನ್ನು ಇತ್ಯರ್ಥ ಪಡಿಸಲು ತಾವು ಮತ್ತು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರು ಮಾನ್ಯ ಮುಖ್ಯಮಂತ್ರಿಗಳು,ಉಪ ಮುಖ್ಯಮಂತ್ರಿಗಳು,ಕಂದಾಯ ಸಚಿವರು,ವಿರೋಧ ಪಕ್ಷದ ನಾಯಕರು ಸೇರಿದಂತೆ ಎಲ್ಲರ ನೆರವನ್ನು ಪಡೆದು ತಿದ್ದುಪಡಿ ವಿಧೇಯಕ ಮಂಡನೆಗೆ ಶ್ರಮವಹಿಸಿದನ್ನು ವಿವರಿಸಿದರು.

     

    ಕೊಡಗಿನ ಜಮ್ಮಾ ಬಾಣೆ ಸಮಸ್ಯೆ 1889 ಕೂರ್ಗ್ ರೆಗ್ಯುಲೇಟ್ ಆಕ್ಟ್ ಗಿಂತ ಮೊದಲು ಮತ್ತು ನಂತರ,1964 ಕರ್ನಾಟಕ ಲ್ಯಾಂಡ್ ರೆವಿನ್ಯೂ ಆಕ್ಟ್ ಗಿಂತ ಮೊದಲು ಮತ್ತು ನಂತರ ಹೀಗೆ ಒಟ್ಟು ನಾಲ್ಕು ಹಂತದ ವಿವರಗಳನ್ನು ಕಲೆ ಹಾಕಿ ಚಕ್ಕೆರ ಪೂವಯ್ಯ v/s ಕರ್ನಾಟಕ ಸರ್ಕಾರ ಕೇಸಿನಲ್ಲಿ ಎ.ಕೆ.ಸುಬ್ಬಯ್ಯ ನವರು ವಾದ ಮಂಡನೆ ಮಾಡಿದ ಪರಿಣಾಮ 1993 ರಲ್ಲಿ ಮಹತ್ವದ ತೀರ್ಪು ನೀಡಿತ್ತು.ಈ ತೀರ್ಪಿನ ಆಧಾರದಲ್ಲಿ ಜಮ್ಮಾ ಬಾಣೆ ಮಾಲೀಕತ್ವ ಸರ್ಕಾರದಲ್ಲಾ.ಹಿಡುವಳಿದಾರದ್ದೇ ಎಂದು ನೀಡಿದ ಆದೇಶದ ವಿವರಗಳನ್ನು ದಾಖಲೆಗಳನ್ನು ಪ್ರದರ್ಶನ ಮಾಡಿ ಎ.ಎಸ್.ಪೊನ್ನಣ್ಣ ವಿವರಿಸಿದರು.

     

    ಜಮ್ಮಾ ತಿದ್ದುಪಡಿ ವಿಧೇಯಕವನ್ನು ಆಡಳಿತ ಪಕ್ಷದ ಸದಸ್ಯರ ಜೊತೆಗೆ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್,ಡಾ ಅಶ್ವಥ್ ನಾರಾಯಣ ಗೌಡ,ಅರವಿಂದ್ ಬೆಲ್ಲದ್,ಅರಗ ಜ್ಞಾನೇಂದ್ರ ಸೇರಿದಂತೆ ಅನೇಕರು ಬಹಿರಂಗವಾಗಿ ಸ್ವಾಗತಿಸಿದ್ದಾರೆ.

    ಜೊತೆಗೆ ಕೊಡಗಿನ ಜಮ್ಮಾ ಹಿಡುವಳಿದಾರರು ಪಕ್ಷಾತೀತವಾಗಿ ಸ್ವಾಗತಿಸಿದ್ದಾರೆ.

    ಆರಂಭದಲ್ಲಿ ಮೌನವಾಗಿದ್ದ ಮಾಜಿ ಶಾಸಕದ್ವಯರು ಈಗ ವಿರೋಧ ಮಾಡುತ್ತಿರುವುದು ಎಷ್ಟರ ಮಟ್ಟಿಗ ಸಮಂಜಸ ಎಂದು ಪೊನ್ನಣ್ಣ ಪ್ರಶ್ನೆ ಮಾಡಿದರು.ಚಕ್ಕೆರ ಪೂವಯ್ಯ v/s ಕರ್ನಾಟಕ ಸರ್ಕಾರ ಕೇಸಿನಲ್ಲಿ ಎ.ಕೆ.ಸುಬ್ಬಯ್ಯ ನವರು ದಾಖಲೆಯ ತೀರ್ಪು ಪಡೆಯದಿದ್ದರೆ ಜಮ್ಮಾ ಬಾಣೆ ಮಾಲೀಕರಿಗೆ ಒಂದಿಂಚೂ ಜಾಗದ ಮಾಲಿಕತ್ವ ಸಿಗುತ್ತಿರಲಿಲ್ಲ ಎಂದು

    ಸ್ಪಷ್ಟಪಡಿಸಿದರು.

    20-11-1986 ರಲ್ಲಿ ಜಮ್ಮಾ ಹಿಡುವಳಿದಾರರಿಗೆ ಬಾಣೆಯ ಹಕ್ಕು ಇಲ್ಲಾ ಎಂಬ ಸರ್ಕಾರಿ ಸುತ್ತೋಲೆ,1987 ರಲ್ಲಿ ಚಕ್ಕೆರ ಪೂವಯ್ಯ ನ್ಯಾಯಾಲಯದ ಮೊರೆ ಹೋಗಿದ್ದು ,

    ಎ.ಕೆ.ಸುಬ್ಬಯ್ಯ ನವರು ಸುಧೀರ್ಘ ವಾದ ಮಂಡನೆ ಮೂಲಕ 1993 ರಲ್ಲಿ ಪೂರಕವಾದ ತೀರ್ಪು ಪಡೆದಿದ್ದು,

    18-12-1996

    ರಲ್ಲಿ ಜಮ್ಮಾ ಬಾಣೆ ಕಂದಾಯ ನಿಗದಿಗೆ ಸರ್ಕಾರ ಸುತ್ತೋಲೆ ಹೊರಡಿಸಿದ್ದು,

    2006 ರಲ್ಲಿ ಕಂದಾಯ ಕಾರ್ಯದರ್ಶಿ ಜಾಮದಾರ್ ರವರು ಜಮ್ಮಾ ಬಾಣೆ ಸರ್ಕಾರದ ಸೊತ್ತು ಎಂದು ಸುತ್ತೋಲೆ ಹೊರಡಿಸಿದ್ದು,ಅದೇ ವರ್ಷ ಎಂ.ಎಲ್.ಸಿ ಆಗಿದ್ದ ಅರುಣ್ ಮಾಚಯ್ಯ ನವರು ಅಂದಿನ ಮುಖ್ಯಮಂತ್ರಿ ಕುಮಾರ ಸ್ವಾಮಿಯವರಿಗೆ ಒತ್ತಡ ತಂದು ಜಾಮದಾರ್ ಸುತ್ತೋಲೆಯನ್ನು ರದ್ದುಗೊಳಿಸಿದ್ದು,

    11-2-2010 ರಲ್ಲಿ ಯಡಿಯೂರಪ್ಪ

    ನವರು ಮುಖ್ಯಮಂತ್ರಿಯಾಗಿದ್ದಾಗ ಸೊಪ್ಪಿನ ಬೆಟ್ಟ,ಕುಮ್ಕಿ ಜಮೀನು,

    ಗೋಮಾಳ ಮುಂತಾದ ಸರ್ಕಾರಿ ಜಮೀನಿನ ವ್ಯಾಪ್ತಿಗೆ ಜಮ್ಮಾ ಬಾಣೆ ಸೇರ್ಪಡೆಗೊಳಿಸಿ ಆದೇಶ ಹೊರಡಿಸಿದ್ದು,

    ಸಾರ್ವಜನಿಕ ಆಕ್ರೋಶದ ವರದಿಯನ್ನು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಒಪ್ಪಿಸಿದ ಹಿನ್ನಲೆ ಸದರಿ ಆದೇಶ 3-5-2010 ರಂದು ರದ್ದಾಗಿದ್ದು ,2012 ರ ತಿದ್ದುಪಡಿ ಸೇರಿದಂತೆ 2025 ಜಮ್ಮಾ ತಿದ್ದುಪಡಿ ವಿಧೇಯಕ ಮಂಡನೆವರೆಗಿನ ವಿವರಗಳನ್ನು ದಾಖಲೆ ಸಮೇತ ಪೊನ್ನಣ್ಣ ನವರು ಮಾಧ್ಯಮದ ಮುಂದೆ ವಿವರಿಸಿದರು.

     

    ಹಿಂದೆಯೇ ಎಲ್ಲಾ ಸರಿ ಮಾಡಿದ್ದೇವೆ ಎಂದು ಕೆ.ಜಿ.ಬೋಪಯ್ಯನವರು ಮತ್ತು ಅಪ್ಪಚ್ಚು ರಂಜನ್ ಹೇಳಿದ್ದಾರೆ ಹಾಗಾದರೆ ಕೊಡಗಿನಲ್ಲಿ 22941

    ಏಕರೆ ಜಮ್ಮಾ ಬಾಣೆಗೆ ಇನ್ನೂ ಯಾಕೆ ಕಂದಾಯ ನಿಗದಿಯಾಗಿಲ್ಲಿ ಎಂದು ಪೊನ್ನಣ್ಣ ಪ್ರಶ್ನೆ ಮಾಡಿದರು.

    ನ್ಯಾಯಾಲಯ ನೀಡಿದ ತೀರ್ಪುಗಳನ್ನು ಶಾಸಕಾಂಗ ಶಾಸನವಾಗಿ ಜಾರಿಗೊಳಿಸುತ್ತದೆ.

    ಅದನ್ನು ಕಾರ್ಯಾಂಗ ಕಾರ್ಯರೂಪಕ್ಕೆ ತರುತ್ತದೆ.ಅದನ್ನು ಜನರ ಮುಂದೆ ಹೇಳಬೇಕೆ ಹೊರತು

    ರಾಷ್ಟ್ರಪತಿ ಸುವರ್ಣ ಸೌಧ ಉದ್ಘಾಟನೆ ಗೆ ಬಂದಾಗ ನಾನು ಕಿವಿಯಲ್ಲಿ ಹೇಳಿದ್ದೆ ,ಅವರು ಹೋಗಿ ಮಾಡಿದರು ಎಂದು ಕೆ.ಜಿ.ಬೋಪಯ್ಯ ನವರು ಬಾಲಿಶವಾಗಿ ಹೇಳಿರುವುದು ಸರಿಯಲ್ಲಾ ಎಂದು ಪೊನ್ನಣ್ಣ ಬೇಸರ ವ್ಯಕ್ತಪಡಿಸಿದರು.

     

    ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರು ಮಾತನಾಡಿ ಪ್ರತಿನಿತ್ಯ ತಮ್ಮನ್ನು ಭೇಟಿ ಮಾಡಲು ಬರುವ ನಾಗರೀಕರಲ್ಲಿ ಅನೇಕರು ತಮಗೆ ತಮ್ಮ ಜಮೀನು ದಾಖಲೆ ಆಗಿಲ್ಲ.ಜಮ್ಮಾ ಬಾಣೆ ಸಮಸ್ಯೆ ಬಗೆಹರಿಸಿ ಎಂದು ಮನವಿ ಮಾಡುತ್ತಿದ್ದು ತಾವು ಹಾಗೂ ಪೊನ್ನಣ್ಣ ನವರು ಈ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು ಎಂಬ ಧ್ಯೇಯದಿಂದ ಸರ್ಕಾರಕ್ಕೆ ಒತ್ತಡ ತಂದಿದ್ದೇವೆ.ಅಭಿವೃದ್ಧಿ ಕೆಲಸಗಳನ್ನು ಜನರ ಅಪೇಕ್ಷೆಯಂತೆ ಮಾಡುತ್ತಿದ್ದೇವೆ.ಆದರೆ ಮಾಜಿ ಶಾಸಕರು ಅದು ನಾವು ತಂದಿದ್ದು ಎಂದು ಹೇಳಿ ಅಪಹಾಸ್ಯಕ್ಕೆ ಒಳಗಾಗುತ್ತಿದ್ದಾರೆ.

    ಮಾಜಿ ಶಾಸಕರು ಹಿರಿಯರು, ಅನುಭವಿಗಳು ಆಗಿದ್ದಾರೆ.

    ಅಪಪ್ರಚಾರ ಮಾಡುವ ಬದಲಿಗೆ ಸಲಹೆ,

    ಮಾರ್ಗದರ್ಶನ

    ನೀಡಲಿ ಎಂದು ಹೇಳಿದರು.

    ಜಮ್ಮಾ ತಿದ್ದುಪಡಿ ವಿಧೇಯಕ ಮಂಡನೆಗೆ ನೆರವು ನೀಡಿದ ಕಂದಾಯ ಸಚಿವ ರಾದ ಕೃಷ್ಣಭೈರೇಗೌಡ ರವರಿಗೆ ಜಿಲ್ಲೆಯ ಜನತೆ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ ಮಂತರ್ ಗೌಡ ರವರು ಜಮ್ಮಾ ಬಾಣೆ ಸಮಸ್ಯೆಯ ಪರಿಹಾರದ ರೀತಿಯಲ್ಲಿ ಸಿ.ಅಂಡ್ ಡಿ ಜಮೀನಿನ ಸಮಸ್ಯೆ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕೆಪಿಸಿಸಿ ವಕ್ತಾರ ಹೆಚ್.ಎಸ್.ಚಂದ್ರಮೌಳಿಯವರು ಮಾತನಾಡಿ ಇಬ್ಬರು ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ ಮಂತರ್ ಗೌಡ ರವರಿಂದ ಅಭೂತಪೂರ್ವ ಕೆಲಸವಾಗಿದ್ದು ಅಭಿನಂದನಾರ್ಹರು ಎಂದು ಹೇಳಿದರು.

    ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ,

    ಕರ್ನಾಟಕ ಕ್ರೀಡಾ ಪ್ರಾಧೀಕಾರದ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ,

    ಮಾಜಿ ಎಂ.ಎಲ್.ಸಿ ವೀಣಾ ಅಚ್ಚಯ್ಯ,ಡಿಸಿಸಿ ಉಪಾಧ್ಯಕ್ಷರಾದ ಕೆ.ಎಂ.ಲೋಕೇಶ್,

    ಅಬ್ದುಲ್ ರೆಹಮಾನ್,

    ಜಿಲ್ಲಾ ವಕ್ತಾರ ತೆನ್ನಿರ ಮೈನಾ,ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಸೂರಜ್ ಹೊಸೂರು ಸೇರಿದಂತೆ ಪ್ರಮುಖರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    ಕೊಡಗು ನ್ಯೂಸ್

    Previous Articleಕೊಡಗು ಪತ್ರಕರ್ತರ ಸಂಘದ ಸಂಕ್ರಾಂತಿ ಸಂಭ್ರಮ ಕ್ರಿಕೆಟ್ ಪಂದ್ಯಾವಳಿಯ ಲೋಗೋ ಅನಾವರಣ
    Next Article ಪೊನ್ನಂಪೇಟೆಯ ಕುಂದ- ಈಚೂರು ಡಾಂಬರೀಕರಣ ಘಟಕದ ವಿರುದ್ಧ ಗ್ರಾಮಸ್ಥರ ದೂರು ಶಾಸಕ ಎ.ಎಸ್ ಪೊನ್ನಣ್ಣ ಪರಿಶೀಲನೆ

    Related Posts

    ಸಿದ್ದಾಪುರದಲ್ಲಿ ಅಕ್ರಮ ಶ್ರೀಗಂಧ ಕಳವು: ಇಬ್ಬರ ಬಂಧನ, 55 ಕೆಜಿ ಗಂಧ ವಶ

    September 22, 2026

    ಭಾರತೀಯ ಸೇನೆಯಲ್ಲಿ ಹೊಸ ಇತಿಹಾಸ: ರಾಷ್ಟ್ರಪತಿಯ ADC ಆದ ಮೇಜರ್ ನವ್ಯಾ ಶೇಖಾವತ್

    September 21, 2026

    ವಿರಾಜಪೇಟೆ ಗಣೇಶೋತ್ಸವ: ಸೆ.25ರಿಂದ ವಾಹನ ಸಂಚಾರದಲ್ಲಿ ಬದಲಾವಣೆ

    September 21, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ಸಿದ್ದಾಪುರದಲ್ಲಿ ಅಕ್ರಮ ಶ್ರೀಗಂಧ ಕಳವು: ಇಬ್ಬರ ಬಂಧನ, 55 ಕೆಜಿ ಗಂಧ ವಶ

    September 22, 2026

    ಭಾರತೀಯ ಸೇನೆಯಲ್ಲಿ ಹೊಸ ಇತಿಹಾಸ: ರಾಷ್ಟ್ರಪತಿಯ ADC ಆದ ಮೇಜರ್ ನವ್ಯಾ ಶೇಖಾವತ್

    September 21, 2026

    ವಿರಾಜಪೇಟೆ ಗಣೇಶೋತ್ಸವ: ಸೆ.25ರಿಂದ ವಾಹನ ಸಂಚಾರದಲ್ಲಿ ಬದಲಾವಣೆ

    September 21, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.