ಸಮಾಜದ ಸಮಸ್ಯೆ ಆಲಿಸಿದ ನೂತನ ಎಸ್ಪಿ ಆರ್ ಬಿಂದುಮಣಿ


ಮಡಿಕೇರಿ:-ಕೊಡಗು ಜಿಲ್ಲೆಯ ನೂತನ ಪೊಲೀಸ್ ಅಧಿಕ್ಷಕರಾಗಿ ಅಧಿಕಾರ ಸ್ವೀಕರಿಸಿದ ಬಿಂದುಮಣಿ ಆರ್. ಎನ್ ಹಾಗೂ ದಿನೇಶ್ ಕುಮಾರ್ ಬಿ.ಪಿ ಹೆಚ್ಚುವರಿ ಪೊಲೀಸ್ ಅಧಿಕ್ಷಕರು ಇವರ ನೇತೃತ್ವದಲ್ಲಿ ಪೊಲೀಸ್ ಇಲಾಖೆಗೆ ಸಂಭಂಧಿಸಿದಂತೆ ಜನ ಸಂಪರ್ಕ ಸಭೆಯು ನಗರದ ಮೈತ್ರಿ ಹಾಲ್ ನಲ್ಲಿ ಅಚ್ಚುಕಟ್ಟಾಗಿ ಜರುಗಿತು.
ಪೊಲೀಸ್ ಅಧಿಕ್ಷಕರಾದ ಬಿಂದುಮಣಿ ಮಾತನಾಡಿ ಕೊಡಗು ಚೊಕ್ಕದಾದ-ಚಿಕ್ಕ ನಾಡು ಬೇರೆಡೆಗೆ ಹೋಲಿಸಿದರೆ ಇಲ್ಲಿ ಅಪರಾಧಗಳ ಸಂಖ್ಯೆ ಕಡಿಮೆ.ಹೋಮ್ ಸ್ಟೇ, ರೆಸಾರ್ಟ್, ಹೋಟೆಲ್ ನಲ್ಲಿ ವಾಸಿಸುತ್ತಿರುವ ಕೆಲಸಗಾರರ ಹಿನ್ನಲೆ ಹಾಗೂ ದಾಖಲಾತಿಯನ್ನು ಕಾಡ್ಡಾಯವಾಗಿ ಪಡೆದುಕೊಳ್ಳಬೇಕು, ತೋಟದಲ್ಲಿ ವಾಸಿಸುತ್ತಿರುವ ಕಾರ್ಮಿಕರ ಕುರಿತಂತೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕೆಂದು ಎಂದು ಸೂಚಿಸಿದರು.
ಹೋಂ ಸ್ಟೇ ನಡೆಸಲು ಕಡ್ಡಾಯವಾಗಿ ಲೈಸೆನ್ಸ್ ಪಡೆದುಕೊಳ್ಳಬೇಕು.ಪಡೆದುಕೊಳ್ಳದೆ ಹೋಂ ಸ್ಟೇ ನಡೆಸಿದರೆ ಕಾನೂನಿನ ಕ್ರಮಕ್ಕೆ ಖಂಡಿತವಾಗಿಯೂ ಒಳಾಗಾಗುವಿರಿ ಎಂದು ಎಚ್ಚರಿಸಿದರು.
ಮುಂದೆ ಮಾತನಾಡಿ ಮಕ್ಕಳ ಮತ್ತು ಮಹಿಳಾ ಸಹಾಯವಾಣಿ ಕುರಿತು ಸಾರ್ವಜನಿಕರಿಗೆ ತಿಳಿಸಿದರು.
ಪ್ರವಾಸ ಕೈಗೊಳ್ಳುವ ಸಮಯದಲ್ಲಿ ಮನೆಯಿಂದ ಹೊರಗುಳಿಯುವ ಸಂಧರ್ಭ ಇದ್ದರೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಸೂಚಿಸಿದರು.
ಆಟೋ ರಿಕ್ಷಾ ಯೂನಿಯನ್ ಅಧ್ಯಕ್ಷರೊಂದಿಗೆ ಮಾತಾನಾಡಿ ಟ್ರಾಫಿಕ್ ಕಂಟ್ರೋಲ್ ನಿರ್ವಹಿಸಬೇಕು ಎಂದು ತಿಳಿಸಿದರು.
ಸೈಬರ್ ಅಪರಾಧ ಕುರಿತಂತೆ ಸಾರ್ವಜನಿಕರು ಬಹಳ ಜಾಗರೂಕಾರಾಗಿರಬೇಕು ಯಾವುದೇ ಭೇಧವಿಲ್ಲದೆ ನಡೆಯುವಂತಹ ಅಪರಾಧ ಎಂದರೇ ಅದು ಸೈಬರ್ ಅಪರಾಧ ಅದನ್ನು ಮುಂದಿನ ದಿನಗಳಲ್ಲಿ ತಡೆಗಟ್ಟಲಾಗುವುದು ಅದಕ್ಕಾಗಿ ಸಾರ್ವಜನಿಕರು ಸಹಕರಿಸಬೇಕು ಎಂದರು.
ಸಿದ್ದಾಪುರ ನಿವಾಸಿ ಮಾತನಾಡಿ ಕೇರಳ ದಿಂದ ಬರುವಂತಹ ಪ್ರತಿಯೊಂದು ವಾಹನಗಳು ಅತಿವೇಗವಾಗಿ ವಾಹನವನ್ನು ಚಲಾಯಿಸುತ್ತಿರುವುದು ಕಂಡುಬರುತ್ತಿದೆ ಅದನ್ನು ತಡೆಗಟ್ಟಿದ್ದರೆ ಅಪಾಯದ ಸಂಖ್ಯೆಯಲ್ಲಿ ಅಲ್ಪಮಟ್ಟಿಗೆ ವ್ಯತ್ಯಾಸವಾಗುವುದು ಎಂದು ಮಾಹಿತಿ ನೀಡಿದರು ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುವುದು ಎಂದರು.
ಉನಿಸ್ ಪೆರಾಜೆ ಮಾತನಾಡಿ ರಾತ್ರಿವೇಳೆ ಲಾರಿಗಳು ಬ್ರೇಕ್ ಫೈಲ್ಆಗಿ ರಸ್ತೆಗಳ ಮದ್ಯೆದಲ್ಲಿ ನಿಂತುಹೋಗುತ್ತಿರುವುದು ಹೆಚ್ಚಾಗಿ ಕಾಣಬರುತ್ತಿದೆ.ಇದರಿಂದ ಟ್ರಾಫಿಕ್ ಸಮಸ್ಯೆ ಎದುರಾಗುವುದರ ಬಗ್ಗೆ ಮಾಹಿತಿ ನೀಡಿದರು.
. ಮಡಿಕೇರಿ ಬಜರಂಗದಳ ಜಿಲ್ಲಾ ಸಂಯೋಜಕರಾದ ವಿನಯಕುಮಾರ್ ಮಾತನಾಡಿ ನಿಷೇಧ ವಿರುವ ಗೋಹತ್ಯೆ ಕೊಡಗಿನಲ್ಲಿ ಹೆಚ್ಚಾಗಿ ನಡೆಸಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಿದರು.
ಹಾಗೆಯೇ ಅಸ್ಸಾಂ ಕಾರ್ಮಿಕರ ಬಳಿ ಕೊಡಗಿನ ವಿಳಾಸವಿರುವ ಆಧಾರ್ ಕಾರ್ಡ್ ಇದೆ. ಇದನ್ನು ಮಾಡಿ ಕೊಟ್ಟಿರುವ ಅಧಿಕಾರಿಗಳನ್ನು ಕಾನೂನಿನ ಕ್ರಮಕ್ಕೆ ಒಳಪಡಿಸಬೇಕೆಂದು ಒತ್ತಾಯಿಸಿದರು.
ಮಡಿಕೇರಿ ನಿವಾಸಿಯೊಬ್ಬರು ಮಾತಾನಾಡಿ ಮಡಿಕೇರಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳನೊಬ್ಬ ನುಸುಳಿ ಮನೆ-ಮನೆಗೆ ಕನ್ನ ಹಾಕುತ್ತಿದ್ದಾನೆ ಇದರ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದರು.
ಮಡಿಕೇರಿಯ ಮಹದೇವಪೇಟೆ ಜಂಕ್ಷನ್ ಬಳಿ ಅಪಘಾತ ಹೆಚ್ಚಾಗಿ ನಡೆಯುತ್ತಿದ್ದೂ ದಿನಕ್ಕೆ ಎರಡರಿಂದ-ಮೂರು ಅಪಘಾತ ನಡೆಯುತ್ತಲೇ ಇರುತ್ತದೆ ಅದರ ಬಗ್ಗೆಯೂ ಗಮನ ಹರಿಸುವಂತೆ ತಿಳಿಸಿದರು.
ಚೇಂಬರ್ ಆಫ್ ಕಾಮರ್ಸ್ ಮೆಂಬರ್ ಧನಂಜಯ ಮಾತನಾಡಿ ಮಡಿಕೇರಿ ನಗರ ಹೊರತುಪಡಿಸಿ ಮಂಗಳೂರಿನ ರಸ್ತೆಯಲ್ಲಿರುವ ಅಂಗಡಿ ಮುಂಗಟ್ಟು ಗಳು ರಾತ್ರಿ ಇಡೀ ತೆರೆದಿರುತ್ತವೆ ಇದನ್ನು ಪರಿಗಣಿಸಿ ಕಾನೂನು ಕ್ರಮ ಜರುಗಿಸ ಬೇಕೆಂದು ಮನವಿ ಮಾಡಿದರು.
ಮುಂತಾದ ಸಮಸ್ಯೆಗಳಾದ ಕುಡಿದು ವಾಹನ ಚಲಾಯಿಸುವುದು, ಯುವಕರಲ್ಲಿ ಮಾದಕ ವಸ್ತು ಅತಿ ಬಳಕೆ, ರಸ್ತೆಯ ಬದಿಯಲ್ಲಿ ವಾಹನ ನಿಲ್ಲಿಸಿ ಟ್ರಾಫಿಕ್ ಮಾಡುವುದು, ಮಾಹಿತಿ ಹಕ್ಕಿಗೆ ಸಂಭಂಧಿಸಿದಂತೆ ದುರ್ಬಳಕೆ, ಸರ್ಕಾರಿ ಕಚೇರಿಗಳಲ್ಲಿ ಕಾಡುತ್ತಿರುವ ಬ್ರೋಕರ್ ಕಿರಿ-ಕಿರಿ, ಪೊಲೀಸ್ ಠಾಣೆಗಳಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತಿತರ ಸಮಸ್ಯೆ ಗಳ ಕುರಿತು ಸಾರ್ವಜನಿಕರು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಕೊಡಗು ನ್ಯೂಸ್

