ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಪಲ್ಟಿಯಾದ ಗೊಬ್ಬರ ತುಂಬಿದ ಲಾರಿ -ಗೋಣಿಕೊಪ್ಪ ಚನ್ನೆಂಗೊಲ್ಲಿ ಬಳಿ ಅವಘಡ
ಮೈಸೂರಿನಿಂದ ಕೇರಳ ರಾಜ್ಯಕ್ಕೆ ಗೊಬ್ಬರಸಾಗಿಸುತ್ತಿದ್ದ ಲಾರಿಯೊಂದು ಟೈಯರ್ ಒಡೆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಪಲ್ಟಿಯಾದ ಘಟನೆ ಗೋಣಿಕೊಪ್ಪ ಬಳಿಯ ಚನ್ನೆಂಗೊಲ್ಲಿ ಎಂಬಲ್ಲಿ ನಡೆದಿದೆ.
ಅವಘಡ ದಿಂದ ಲಾರಿ ನಿಯಂತ್ರಣ ತಪ್ಪಿ ಸುಮಾರು 50 ಮೀಟರ್‌ವರೆಗೆ ರಸ್ತೆಯಲ್ಲೇ ಜಾರಿಗೊಂಡು ಸಾಗಿ ಸಮೀಪದಲ್ಲಿದ್ದ ಟೀ ಕ್ಯಾಂಟೀನ್ ಎದುರಿಗೆ ನಿಲ್ಲಿಸಿದ ಎರಡು ಸ್ಕೂಟರ್‌ಗಳಿಗೂ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ. ಅವಘಡದಿಂದ ಲಾರಿಯ ಚಾಲಕ ಹಾಗೂ ಕ್ಲೀನರ್ ಯಾವುದೇ ಅನಾಹುತ ಸಂಭವಿಸದೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಘಟನೆ ನಡೆದ ಸ್ಥಳದಿಂದ ಈ ಇಬ್ಬರು ಸಹ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಲಾರಿ ವಿರಾಜಪೇಟೆಯ ಆರ್ಜಿ ಗ್ರಾಮದ ರಶೀದ್ ಎಂಬುವರಿಗೆ ಸೇರಿದ್ದು ಎನ್ನಲಾಗಿದ್ದು. ಗೊಬ್ಬರಕ್ಕೆ ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಗೋಣಿಕೊಪ್ಪ ಪೊಲೀಸ್ ಠಾಣಾ ಅಧಿಕಾರಿ ಪ್ರದೀಪ್ ಕುಮಾರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
*ಕೊಡಗು ನ್ಯೂಸ್*

